40 ಸಾವಿರ ಕೋಟಿ ಅವ್ಯವಹಾರ: ಬಿಜೆಪಿಯ ಭ್ರಷ್ಟಾಚಾರದ ಜಾತಕ ಯತ್ನಾಳ್ ಕೈಯ್ಯಲ್ಲಿದೆ!

BJP vs BJP: ಕಳ್ಳನ ಹುಳುಕು ಮತ್ತೊಬ್ಬ ಕಳ್ಳನಿಗೆ ಮಾತ್ರ ಗೊತ್ತಿರುತ್ತದೆ ಎಂಬಂತೆ ಬಿಜೆಪಿಯ ಭ್ರಷ್ಟಾಚಾರದ ಜಾತಕ ಯತ್ನಾಳ್ ಕೈಯ್ಯಲ್ಲಿದೆ. ಯತ್ನಾಳ್ ಅದೆಷ್ಟೇ ಪಕ್ಷ ವಿರೋಧಿ ಹೇಳಿಕೆ ಕೊಟ್ಟರೂ ಕ್ರಮ ಕೈಗೊಳ್ಳುವ ಧೈರ್ಯ ತೋರದಿರುವುದು ಇದೇ ಕಾರಣಕ್ಕಾ ಬಿಜೆಪಿ? ಎಂದು ಕಾಂಗ್ರೆಸ್ ಟೀಕಿಸಿದೆ.

Written by - Puttaraj K Alur | Last Updated : Dec 26, 2023, 04:39 PM IST
  • ಬ್ಲಾಕ್ಮೇಲ್ ಜನತಾ ಪಾರ್ಟಿಯ ಮತ್ತೊಂದು ಬ್ಲಾಕ್ಮೇಲ್!
  • ಬಿಜೆಪಿಯಲ್ಲಿ ಬ್ಲಾಕ್ಮೇಲ್ ಮಾಡಿ ಹುದ್ದೆ ಪಡೆಯುತ್ತಾರೆಂದಿದ್ದ ಯತ್ನಾಳ್‍ರಿಂದ ಬ್ಲಾಕ್ಮೇಲ್ ಅಸ್ತ್ರ
  • ಬಿಜೆಪಿಯ ಭ್ರಷ್ಟಾಚಾರದ ಜಾತಕ ಬಸನಗೌಡ ಪಾಟೀಲ್ ಯತ್ನಾಳ್ ಕೈಯ್ಯಲ್ಲಿದೆ
40 ಸಾವಿರ ಕೋಟಿ ಅವ್ಯವಹಾರ: ಬಿಜೆಪಿಯ ಭ್ರಷ್ಟಾಚಾರದ ಜಾತಕ ಯತ್ನಾಳ್ ಕೈಯ್ಯಲ್ಲಿದೆ! title=
ಬಿಜೆಪಿ ಭ್ರಷ್ಟಾಚಾರದ ಜಾತಕ ಯತ್ನಾಳ್ ಕೈಯ್ಯಲ್ಲಿದೆ!

ಬೆಂಗಳೂರು: ಕೊರೊನಾ ಸಾಂಕ್ರಾಮಿಕದ ವೇಳೆ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪರ ಸರ್ಕಾರದಲ್ಲಿ 40 ಸಾವಿರ ಕೋಟಿ ರೂ. ಅವ್ಯವಹಾರ ನಡೆದಿದೆ ಎಂಬ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆರೋಪಕ್ಕೆ ಸಂಬಂಧಿಸಿದಂತೆ ಬಿಜೆಪಿ ವಿರುದ್ಧ ಕಾಂಗ್ರೆಸ್ ತೀವ್ರ ವಾಗ್ದಾಳಿ ನಡೆಸಿದೆ.

ಈ ಬಗ್ಗೆ ಮಂಗಳವಾರ ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್, ‘ಬಿಜೆಪಿ ಆಡಳಿತದ ಸಂದರ್ಭದಲ್ಲಿ ಕೊರೊನಾ ಹೆಸರಲ್ಲಿ 40 ಸಾವಿರ ಕೋಟಿ ರೂ. ಅವ್ಯವಹಾರ ನಡೆದಿದೆ ಎಂದು ಬಿಜೆಪಿ ಶಾಸಕ ಯತ್ನಾಳ್ ಆರೋಪಿಸಿದ್ದಾರೆ. ಡಿಯರ್ ಬಿಜೆಪಿ, ನಿಮ್ಮ ಹಗರಣಗಳಿಗೆ ನಿಮ್ಮವರೇ ಅಧಿಕೃತ ಮುದ್ರೆ ಒತ್ತಿದ್ದಾರೆ, ಕೋವಿಡ್ ಹೆಸರಲ್ಲಿ ಸಾವಿರಾರು ಕೋಟಿ ರೂ. ಲೂಟಿ ಹೊಡೆದ ತಾವು ಅಮಾಯಕ ಜನರ ಹೆಣದಲ್ಲಿ ಹಣ ಹುಡುಕಿದ್ದೀರಿ ಅಲ್ಲವೇ?’ ಎಂದು ಪ್ರಶ್ನಿಸಿದೆ.

ಇದನ್ನೂ ಓದಿ: ರಾಜ್ಯ ಸರ್ಕಾರದ ಐದನೇ ಗ್ಯಾರಂಟಿ ಚಾಲನೆಗೆ ಕ್ಷಣಗಣನೆ

‘ಬ್ಲಾಕ್ಮೇಲ್ ಜನತಾ ಪಾರ್ಟಿಯ ಮತ್ತೊಂದು ಬ್ಲಾಕ್ಮೇಲ್! ಹಿಂದೆ ಬಿಜೆಪಿಯಲ್ಲಿ ಬ್ಲಾಕ್ಮೇಲ್ ಮಾಡಿ ಹುದ್ದೆ ಪಡೆಯುತ್ತಾರೆ ಎಂದು ಆರೋಪಿಸಿದ್ದ ಇದೇ ಯತ್ನಾಳ್ ಇಂದು ಬ್ಲಾಕ್ಮೇಲ್ ಅಸ್ತ್ರ ಹೂಡಿದ್ದಾರೆ. ಕಳ್ಳನ ಹುಳುಕು ಮತ್ತೊಬ್ಬ ಕಳ್ಳನಿಗೆ ಮಾತ್ರ ಗೊತ್ತಿರುತ್ತದೆ ಎಂಬಂತೆ ಬಿಜೆಪಿಯ ಭ್ರಷ್ಟಾಚಾರದ ಜಾತಕ ಯತ್ನಾಳ್ ಕೈಯ್ಯಲ್ಲಿದೆ. ಯತ್ನಾಳ್ ಅದೆಷ್ಟೇ ಪಕ್ಷ ವಿರೋಧಿ ಹೇಳಿಕೆ ಕೊಟ್ಟರೂ ಕ್ರಮ ಕೈಗೊಳ್ಳುವ ಧೈರ್ಯ ತೋರದಿರುವುದು ಇದೇ ಕಾರಣಕ್ಕಾ ಬಿಜೆಪಿ?’ ಎಂದು ಕಾಂಗ್ರೆಸ್ ಟೀಕಿಸಿದೆ.

ನಮ್ಮದು ಪಕೋಡ ಮಾರಿ ಎನ್ನುವ ಸಿದ್ಧಾಂತವಲ್ಲ!

‘ನಮ್ಮ ಐದನೇ ಗ್ಯಾರಂಟಿಯೂ ಜಾರಿಯಾಯ್ತು, ರಾಜ್ಯದ ನಿರುದ್ಯೋಗಿ ಯುವ ಸಮುದಾಯಕ್ಕೆ ಆರ್ಥಿಕ ನೆರವು ನೀಡುವ ಯುವನಿಧಿ ಯೋಜನೆಯ ನೋಂದಣಿಗೆ ಚಾಲನೆ ನೀಡುವ ಮೂಲಕ ಕಾಂಗ್ರೆಸ್ ನುಡಿದಂತೆ ನಡೆಯುವ ಬದ್ಧತೆಯನ್ನು ನಿರೂಪಿಸಿದ್ದೇವೆ. ನಮ್ಮದು ಉದ್ಯೋಗ ಕೇಳಿದ ಯುವಕರಿಗೆ ಪಕೋಡ ಮಾರಿ ಎನ್ನುವ ಬಿಜೆಪಿ ಸಿದ್ಧಾಂತವಲ್ಲ! ಯುವ ಸಬಲೀಕರಣದ ಸಿದ್ದಾಂತ. ಮಾನವ ಸಂಪನ್ಮೂಲದ ಸದ್ಬಳಕೆಗೆ ಉದ್ಯೋಗ ಸೃಷ್ಟಿಸುವುದು ಹಾಗೂ ಆರ್ಥಿಕ ಸಂಕಷ್ಟದಲ್ಲಿರುವ ಯುವ ಸಮುದಾಯದ ನೆರವಿಗೆ ನಿಲ್ಲುವುದು ನಮ್ಮ ಆದ್ಯತೆ’ ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.

ಇದನ್ನೂ ಓದಿ: ಕೊರೊನಾವೈರಸ್ ಹೆಚ್ಚಳ: ಇಂದು ಸಂಪುಟ ಉಪಸಮಿತಿ ಸಭೆ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News