Gruha Lakshmi Scheme: ಗೃಹಲಕ್ಷ್ಮೀ ಹಣ ಕೂಡಿಟ್ಟು ಫ್ರಿಡ್ಜ್ ಖರೀದಿಸಿದ ಮಹಿಳೆ..!

Gruha Lakshmi Scheme: 17,500 ರೂ. ಬೆಲೆಯ ಫ್ರಿಡ್ಜ್ ಖರೀದಿಸಿ ಲತಾ ಅವರು ಜನರ ಗಮನ ಸೆಳೆದಿದ್ದಾರೆ. ಯುಗಾದಿ ಹಬ್ಬಕ್ಕೆ ಸಂಗ್ರಹಿಸಿ ಇಟ್ಟಿದ್ದ ಒಟ್ಟು ಹಣದಲ್ಲಿ ಫ್ರಿಡ್ಜ್ ಖರೀದಿಸಿ ಖುಷಿಪಟ್ಟಿದ್ದಾರೆ.

Written by - Puttaraj K Alur | Last Updated : Apr 9, 2024, 09:06 PM IST
  • ಗೃಹಲಕ್ಷ್ಮೀ ಯೋಜನೆಯ ಹಣ ಕೂಡಿಟ್ಟು ಫ್ರಿಡ್ಜ್ ಖರೀದಿಸಿದ ಮಹಿಳೆ..!
  • ಯೋಜನೆ ಜಾರಿಯಾದಾಗಿನಿಂದ ಪ್ರತಿ ತಿಂಗಳು 2000 ರೂ. ಹಣ ಕೂಡಿಟ್ಟಿದ್ದ ಮಹಿಳೆ
  • 17,500 ರೂ. ಬೆಲೆಯ ಫ್ರಿಡ್ಜ್ ಖರೀದಿಸಿ ಜನರ ಗಮನ ಸೆಳೆದ ಹಾವೇರಿ ಲತಾ
Gruha Lakshmi Scheme: ಗೃಹಲಕ್ಷ್ಮೀ ಹಣ ಕೂಡಿಟ್ಟು ಫ್ರಿಡ್ಜ್ ಖರೀದಿಸಿದ ಮಹಿಳೆ..! title=
ಫ್ರಿಡ್ಜ್ ಖರೀದಿಸಿದ ಮಹಿಳೆ..!

ಹಾವೇರಿ: ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರವು ಜಾರಿಗೆ ತಂದಿರುವ ಮನೆಯ ಒಡತಿಗೆ ಪ್ರತಿ ತಿಂಗಳು ೨ ಸಾವಿರ ರೂ. ನೀಡುವ ಗೃಹಲಕ್ಷ್ಮೀ ಯೋಜನೆಯ ಹಣವನ್ನು ಕೂಡಿಟ್ಟು ಮಹಿಳೆಯೊಬ್ಬರು ಫ್ರಿಡ್ಜ್ ಖರೀದಿಸಿದ್ದಾರೆ. 

ಇದನ್ನೂ ಓದಿ: ನಾಡಿನ ಜನತೆಗೆ ಯುಗಾದಿ ಹಬ್ಬದ ಶುಭಾಶಯ ತಿಳಿಸುತ್ತೇನೆ

ಗೃಹ ಲಕ್ಷ್ಮೀ ಫಲಾನುಭವಿ ಲತಾ ಎಂಬುವರೇ ಫ್ರಿಡ್ಜ್ ಖರೀದಿಸಿದ್ದಾರೆ. ಹಾವೇರಿ ಜಿಲ್ಲೆಯ ಶಿಗ್ಗಾವಿ ಪಟ್ಟಣದಲ್ಲಿ ಫ್ರಿಡ್ಜ್ ಖರೀದಿಸಿ ಲತಾ ಅವರು ಪೂಜೆ ಮಾಡಿದ್ದಾರೆ. ರಾಜ್ಯ ಸರ್ಕಾರದ ಗೃಹಲಕ್ಷ್ಮೀ ಯೋಜನೆಯ ಫಲಾನುಭವಿ ಮಹಿಳೆಯಾಗಿರುವ ಲತಾ, ಈ ಯೋಜನೆ ಜಾರಿಯಾದಾಗಿನಿಂದಲೂ ಪ್ರತಿ ತಿಂಗಳು ಬರುತ್ತಿದ್ದ 2000 ರೂ. ಹಣವನ್ನು ಕೂಡಿಟ್ಟಿದ್ದರು.  

ಇದನ್ನೂ ಓದಿ: ಕಾವೇರಿದ ದಾವಣಗೆರೆ ಲೋಕಸಭಾ ಕ್ಷೇತ್ರ ಅಖಾಡ

ಇದೀಗ ಯುಗಾದಿ ಹಬ್ಬಕ್ಕೆ ಸಂಗ್ರಹಿಸಿ ಇಟ್ಟಿದ್ದ ಒಟ್ಟು ಹಣದಲ್ಲಿ ಫ್ರಿಡ್ಜ್ ಖರೀದಿಸಿ ಖುಷಿಪಟ್ಟಿದ್ದಾರೆ. 17,500 ರೂ. ಬೆಲೆಯ ಫ್ರಿಡ್ಜ್ ಖರೀದಿಸಿ ಲತಾ ಅವರು ಜನರ ಗಮನ ಸೆಳೆದಿದ್ದಾರೆ. ಫ್ರಿಡ್ಜ್ ಖರೀದಿಸಿದ ಬಳಿಕ ಗೃಹಲಕ್ಷ್ಮೀ ಫಲಾನುಭವಿ ಅಂತಾ ಫ್ರಿಡ್ಜ್‌ಗೆ ಲಿಖಿತ ಫಲಕವನ್ನು ಹಾಕಿದ್ದಾರೆ. ಈ ಮೂಲಕ ಅವರು ಗೃಹಲಕ್ಷ್ಮೀ ಹಣ ಯಾವುದಕ್ಕೂ ಸಾಲೋದಿಲ್ಲ ಎಂಬುವವರಿಗೆ ಉತ್ತರ ನೀಡಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News