ಗ್ರಾಹಕರಿಗೆ ಗುಡ್ ನ್ಯೂಸ್.. ರಾಜ್ಯಕ್ಕೆ ಎಂಟ್ರಿ ಕೊಡ್ತು KSRTC ಕಾರ್ಗೋ ಟ್ರಕ್

ದೇಶದ ನಂಬರ್ ಒನ್ ಸಾರಿಗೆ ಸಂಸ್ಥೆ ಕೆ.ಎಸ್.ಆರ್.ಟಿ.ಸಿ ಹೊಸ ಸಹಾಸಕ್ಕೆ ಮುಂದಾಗಿದೆ. ದೇಶದಲ್ಲಿ ಮೊದಲ ಬಾರಿಗೆ ಸರ್ಕಾರಿ ಸಂಸ್ಥೆಯೊಂದು ಲಾಜೆಸ್ಟಿಕ್ ಕ್ಷೇತ್ರಕ್ಕೆ ಎಂಟ್ರಿಯಾಗಿ ಕ್ರಾಂತಿಕಾರಿ ಹೆಜ್ಜೆಯಿಟ್ಟಿದೆ.  ಇಂದಿನಿಂದ ಗ್ರಾಹಕರ ಅನುಕೂಲಕ್ಕಾಗಿ 20 ಟ್ರಕ್ ಗಳನ್ನ ರೋಡಿಗಿಳಿಸಿದೆ. ಈ ಮೂಲಕ ಹೆಚ್ಚುವರಿ ಆದಾಯದ ನಿರೀಕ್ಷೆಯಲ್ಲಿದೆ ಹಾಗಿದ್ರೆ ನಮ್ಮ ಕಾರ್ಗೋ ವೈಶಿಷ್ಟ್ಯತೆ  ಏನು ಅನ್ನೋದರ ಕಂಪ್ಲೀಟ್ ಡಿಟೈಲ್ಸ್ ಇಲ್ಲಿದೆ..

Written by - Manjunath Naragund | Last Updated : Dec 23, 2023, 08:23 PM IST
  • KSRTCಗೆ ತಿಂಗಳಿಗೆ ಬರೋ ಖರ್ಚು ₹380 ಕೋಟಿ ರೂಪಾಯಿ
  • ಶಕ್ತಿ‌ ಯೋಜನೆ ಬಳಿಕ ತಿಂಗಳಿಗೆ ಅಂದಾಜು ಆದಾಯ ₹359 ಕೋಟಿ ಬರಲಿದೆ
  • ಆದ್ರೂ ಖರ್ಚು ಸರಿದೂಗಿಸಲು ಇನ್ನೂ 21 ಕೋಟಿ ಅವಶ್ಯಕತೆ ಇದೆ
ಗ್ರಾಹಕರಿಗೆ ಗುಡ್ ನ್ಯೂಸ್.. ರಾಜ್ಯಕ್ಕೆ ಎಂಟ್ರಿ ಕೊಡ್ತು KSRTC ಕಾರ್ಗೋ ಟ್ರಕ್ title=

ಬೆಂಗಳೂರು: ದೇಶದ ನಂಬರ್ ಒನ್ ಸಾರಿಗೆ ಸಂಸ್ಥೆ ಕೆ.ಎಸ್.ಆರ್.ಟಿ.ಸಿ ಹೊಸ ಸಹಾಸಕ್ಕೆ ಮುಂದಾಗಿದೆ. ದೇಶದಲ್ಲಿ ಮೊದಲ ಬಾರಿಗೆ ಸರ್ಕಾರಿ ಸಂಸ್ಥೆಯೊಂದು ಲಾಜೆಸ್ಟಿಕ್ ಕ್ಷೇತ್ರಕ್ಕೆ ಎಂಟ್ರಿಯಾಗಿ ಕ್ರಾಂತಿಕಾರಿ ಹೆಜ್ಜೆಯಿಟ್ಟಿದೆ.  ಇಂದಿನಿಂದ ಗ್ರಾಹಕರ ಅನುಕೂಲಕ್ಕಾಗಿ 20 ಟ್ರಕ್ ಗಳನ್ನ ರೋಡಿಗಿಳಿಸಿದೆ. ಈ ಮೂಲಕ ಹೆಚ್ಚುವರಿ ಆದಾಯದ ನಿರೀಕ್ಷೆಯಲ್ಲಿದೆ ಹಾಗಿದ್ರೆ ನಮ್ಮ ಕಾರ್ಗೋ ವೈಶಿಷ್ಟ್ಯತೆ  ಏನು ಅನ್ನೋದರ ಕಂಪ್ಲೀಟ್ ಡಿಟೈಲ್ಸ್ ಇಲ್ಲಿದೆ..

ಇಂದಿನಿಂದ ರಾಜ್ಯಾದ್ಯಾಂತ 20 ಕಾರ್ಗೋ ಟ್ರಕ್ ಗಳ ಸಂಚಾರ

ಪಾರ್ಸೆಲ್ ಮತ್ತು ಕೊರಿಯರ್ ಒಯ್ಯಲು 20 ಟ್ರಕ್ಗಳ ಖರೀದಿಸಿದ್ದು,‌ ಲಾಜಿಸ್ಟಿಕ್ ಸೇವೆ ಆರಂಭಿಸಲು ಅಂತಿಮ  ಹಂತದ ಸಿದ್ಧತೆ ನಡೆಸ್ತಿದೆ. ಡಿಸೆಂಬರ್ 23ರಿಂದ ಕೆಎಸ್ ಆರ್ ಟಿಸಿ ಟ್ರಾಕ್ ಸೇವೆ ಆರಂಭವಾಗಲಿದೆ. ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಈ ಟ್ರಕ್ ಗಳಿಗೆ..ಲಾಜಿಸ್ಟಿಕ್ ಕ್ಷೇತ್ರದಲ್ಲಿ ಈಗಾಗಲೇ ಹಲವು ಖಾಸಗಿ ಕಂಪನಿಗಳಿದ್ದು, ಭರ್ಜರಿ ಲಾಭಗಳಿಸ್ತಿವೆ. ಜೊತೆಗೆ ಬಸ್ ನಲ್ಲೇ ಈಗ ಕಾಗೋ ಸೇವೆ ನಡೆಸ್ತಿದ್ದು, ಜನರಿಂದ ಸಾಕಷ್ಟು ಡಿಮ್ಯಾಂಡ್  ವ್ಯಕ್ತವಾಗಿದೆ.‌ ಹೀಗಾಗಿ  ಕೆ.ಎಸ್.ಆರ್.ಟಿ.ಸಿ ಹೆಚ್ಚುವರಿ ಆದಾಯಗಳಿಸಲು ಕಾರ್ಗೋ ಟ್ರಕ್ ಸೇವೆ ಆರಂಭಿಸ್ತಿದೆ..

ಇದನ್ನೂ ಓದಿ: RCBಗೆ ಕಪ್ ಗೆಲ್ಲಲು ಸಹಾಯ ಮಾಡಿ ಎಂದ ಅಭಿಮಾನಿಗೆ ಧೋನಿ ಕೊಟ್ಟ ಉತ್ತರವೇನು ಗೊತ್ತಾ?

 ಕೆಎಸ್ಆರ್ಟಿಸಿ 'ನಮ್ಮ ಕಾರ್ಗೋ' ಲಾಜಿಸ್ಟಿಕ್ ಯೋಜನೆಗಾಗಿ 20 ಟ್ರಕ್ ಖರೀದಿಸಿದೆ. ಟಾಟಾ ಕಂಪನಿಯ ಪುಣೆ ಶಾಖೆಯಲ್ಲಿ 6 ಟನ್‌‌‌ ಸಾಮರ್ಥ್ಯದ 20 ಕಾರ್ಗೋ ಟ್ರಕ್ ತಯಾರಿಸಲಾಗಿದೆ, ಬೇಡಿಕೆಗೆ ಅನುಗಣವಾಗಿದೆ 6 ಟನ್‌‌‌ ಸಾಮರ್ಥ್ಯದ 20 ಟ್ರಕ್ ಕಾರ್ಯಾಚರಣೆ. ಕೃಷಿ, ಟೆಕ್ಸ್ ಟೈಲ್, ಆಟೋ ಮೊಬೈಲ್ ಕ್ಷೇತ್ರದಿಂದ ಕಾರ್ಗೋಗೆ ಬೇಡಿಕೆಯಿದೆ. ಇದರಲ್ಲಿ ಗ್ರಾಹಕರ ಅನುಕೂಲಕ್ಕಾಗಿ ಜಿಪಿಎಸ್ ಟ್ರ್ಯಾಕಿಂಗ್ ವ್ಯವಸ್ಥೆ ಕೂಡ ಇದೆ.

 ಜೊತೆಗೆ ವಿಮಾ ಸೌಲಭ್ಯ ಕೂಡ ನೀಡಲಾಗಿದೆ. ಆರಂಭದಲ್ಲಿ 9 ಜಿಲ್ಲೆಗಳಿಂದ ರಾಜ್ಯದ ವಿವಿಧ ಭಾಗಕ್ಕೆ ಟ್ರಕ್ ಸೇವೆ ನೀಡಲಿದ್ದಾವೆ. ಸರ್ಕಾರದ ಬೇರೆ ಬೇರೆ ಸ್ಥಂಸ್ಥೆಗಳಿಗೆ  ಮೊದಲ ಆದ್ಯತೆ ನೀಡಲು ಸರ್ಕಾರ ಮುಂದಾಗಿದೆ. ಪೀಣ್ಯ ಬಸವೇಶ್ವರ ಬಸ್ ನಿಲ್ದಾಣವನ್ನು ಕಾರ್ಗೋ ಡಿಪೋ ಆಗಿ ಬದಲಾವಣೆ ಮಾಡಲಾಗಿದೆ.

ಇದನ್ನೂ ಓದಿ: 56ನೇ ವಯಸ್ಸಿನಲ್ಲಿ ತನಗಿಂತ 22 ವರ್ಷ ಕಿರಿಯ ಯುವತಿ ಜೊತೆ 2ನೇ ಬಾರಿ ಮದುವೆಗೆ ಸಿದ್ಧರಾದ ಸ್ಟಾರ್ ನಟ

ಈಗಾಗಲೇ ಕಾರ್ಗೊ ಸೇವೆಯಿಂದ ವರ್ಷಕ್ಕೆ 13 ಕೋಟಿ ಆದಾಯ ಬರ್ತಿದೆ. ಟ್ರಕ್ ಸೇವೆ ಆರಂಭವಾದ್ರೆ ವಾರ್ಷಿಕ ₹20 ಕೋಟಿ ಆದಾಯ ನಿರೀಕ್ಷೆಯಿದೆ. ಜೊತೆಗೆ ಡೋರ್ ಟೂ ಡೋರ್ ಸರ್ವಿಸ್ ಕೂಡ ಮಾಡಲಿದೆ. ಹಾಗಾದ್ರೆ ಈ ಟ್ರಕ್ ಬುಕ್‌ ಮಾಡೋದು ಹೇಗೆ ಅಂತ ನೋಡೋದಾದ್ರೆ…

ನಮ್ಮ ಕಾರ್ಗೋ ಟ್ರಕ್ ಬುಕ್ಕಿಂಗ್ ಹೇಗೆ?*

ಗ್ರಾಹಕರು 080-26252625 ಕರೆ ಮಾಡಿ ಬುಕ್ ಮಾಡಬಹುದು
logistic@ksrtc.orgಗೆ ಇಮೇಲ್ ಮೂಲಕ ಮಾಡಬಹುದು
ಪ್ರತ್ಯೇಕ ಆ್ಯಪ್ ಮಾಡಲು ಸಿದ್ದತೆ ಮಾಡಲಾಗ್ತಿದೆ

KSRTCಗೆ ತಿಂಗಳಿಗೆ ಬರೋ ಖರ್ಚು ₹380 ಕೋಟಿ ರೂಪಾಯಿ. ಶಕ್ತಿ‌ ಯೋಜನೆ ಬಳಿಕ ತಿಂಗಳಿಗೆ ಅಂದಾಜು ಆದಾಯ ₹359 ಕೋಟಿ ಬರಲಿದೆ. ಆದ್ರೂ ಖರ್ಚು ಸರಿದೂಗಿಸಲು ಇನ್ನೂ 21 ಕೋಟಿ ಅವಶ್ಯಕತೆ ಇದೆ. ಖರ್ಚಿಗೆ ತಕ್ಕಂತೆ ಆದಾಯ ಪಡೆಯಲು ಕೆಎಸ್ಆರ್ಟಿಸಿ ಕಾರ್ಗೋ ಟ್ರಕ್ ಮೊರೆಹೋಗಿದೆ. ನಿರೀಕ್ಷೆಯಂತೆ ಜನರ ವಿಶ್ವಾಸಗಳಿಗೆ ಉತ್ತಮ ಆದಾಯ ಬರುತ್ತಾ ಕಾದುನೋಡಬೇಕಿದೆ…

Trending News