ನಮ್ಮಲ್ಲಿ ಮೂರ್ನಾಲ್ಕು ಜನಕ್ಕೆ ಅಸಮಧಾನ ಇತ್ತು : ಕೆ.ಎಸ್ ಈಶ್ವರಪ್ಪ

KS Eshwarappa: ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಜೆಡಿಎಸ್ ವರಿಷ್ಠರ ಪ್ರಧಾನಿ ಭೇಟಿ ವಿಚಾರವಾಗಿ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಮಾತನಾಡಿದ್ದಾರೆ.

Written by - Chetana Devarmani | Last Updated : Dec 22, 2023, 01:19 PM IST
  • ನಮ್ಮಲ್ಲಿ ಮೂರ್ನಾಲ್ಕು ಜನಕ್ಕೆ ಅಸಮಧಾನ ಇತ್ತು
  • ಈಗ ಅದನ್ನ ಸರಿ ಮಾಡಲಾಗಿದೆ
  • ಬಾಗಲಕೋಟೆಯಲ್ಲಿ ಕೆ.ಎಸ್ ಈಶ್ವರಪ್ಪ ಹೇಳಿಕೆ
ನಮ್ಮಲ್ಲಿ ಮೂರ್ನಾಲ್ಕು ಜನಕ್ಕೆ ಅಸಮಧಾನ ಇತ್ತು : ಕೆ.ಎಸ್ ಈಶ್ವರಪ್ಪ  title=

ಬಾಗಲಕೋಟೆ: ನಿನ್ನೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹಾಗೂ ಜೆಡಿಎಸ್ ವರಿಷ್ಠರು ಪ್ರಧಾನಿ ಭೇಟಿಯಾಗಿ ಸಮಾಲೋಚನೆ ನಡೆಸಿದ್ದಾರೆ. ಇದು ನಮ್ಮ ರಾಜ್ಯ ಬಿಜೆಪಿಯಲ್ಲಿ ಶುಕ್ರದೆಶೆ ಅಂತಾ ಹೇಳಬಹುದು ಎಂದರು.

ಎಲ್ಲ ಹಿರಿಯರ ವಿಶ್ವಾಸದೊಂದಿಗೆ ನಡೆಯುವೆ ಎಂದು ಭೇಟಿ ಬಳಿಕ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹೇಳಿದ್ದಾರೆ. ಲೋಕಸಭೆಯಲ್ಲಿ ರಾಜ್ಯದ 28 ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲುವ ನಿಟ್ಟಿನಲ್ಲಿ ಸಾಂಘಿಕ ಶ್ರಮ ವಹಿಸುತ್ತೇವೆ ಎಂದರು.

ರಾಜ್ಯದ 28 ಲೋಕಸಭಾ ಕ್ಷೇತ್ರದಲ್ಲಿ ನಾನು ಓಡಾಟ ಮಾಡುವೆ. ಮೋದಿ ಪ್ರಧಾನಿ ಆಗಲು ಬೇಕಾದ ಎಲ್ಲ ಪ್ರಯತ್ನ ಮಾಡುವೆ ಎಂದು ಎಚ್ ಡಿಕೆ ಹೇಳಿದ್ದಾರೆ. ಇವರಿಬ್ಬರ ಹೇಳಿಕೆ ರಾಜ್ಯ ಬಿಜೆಪಿ-ಜೆಡಿಎಸ್ ಕಾರ್ಯಕರ್ತರಲ್ಲಿ ಹುಮ್ಮಸ್ಸು ಹೆಚ್ಚಿಸಿದೆ ಎಂದು ಹೇಳಿದರು.

ಇದನ್ನೂ ಓದಿ: ರಾಜ್ಯದಲ್ಲಿ ಶತಕ ದಾಟಿದ ಮಹಾಮಾರಿ ಕೊರೊನಾ ಪ್ರಕರಣ 

ಯತ್ನಾಳ್, ವಿ.ಸೋಮಣ್ಣ,‌ ಬೆಲ್ಲದ್ ಆಗಲಿ ಮೂರ್ನಾಲ್ಕು ಜನರಲ್ಲಿ ನಿಜಕ್ಕೂ ಸ್ವಲ್ಪ ಅಸಮಧಾನವಿದೆ. ಅವರೆಲ್ಲ ಬಹಿರಂಗವಾಗಿಯೇ ಹೇಳಿದ್ದಾರೆ. ನಾನು ಕೂಡಾ ಅದರಲ್ಲಿ ಮುಚ್ಚು ಮರೆಯಿಲ್ಲದೆ ಹೇಳುವೆ. ನಿನ್ನೆ ತನಕ ಬಿಜೆಪಿಯಲ್ಲಿನ ಕೆಲವರಲ್ಲಿ ಅಸಮಧಾನ ಇತ್ತು ಎಂದು ತಿಳಿಸಿದರು.

ಪಕ್ಷದಲ್ಲಿ ಮೋದಿ ನಾಯಕತ್ವದ ಬಗ್ಗೆ ಯಾರಲ್ಲೂ ಗೊಂದಲವಿಲ್ಲ. ನಮ್ಮಲ್ಲಿ ಮೂರ್ನಾಲ್ಕು ಜನಕ್ಕೆ ಅಸಮಧಾನ ಇತ್ತು. ಈಗ ಅದನ್ನ ಸರಿ ಮಾಡಲಾಗಿದೆ. ರಾಜ್ಯದಲ್ಲಿ 28 ಲೋಕಸಭಾ ಕ್ಷೇತ್ರದಲ್ಲಿ ನಾವು ಗೆಲ್ಲುತ್ತೇವೆ. ಈ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಎಲ್ಲರೂ ಒಟ್ಟಾಗಿ ಚುನಾವಣೆ ಎದುರಿಸುತ್ತೇವೆ. ಅಸಮಧಾನಿತ ಯತ್ನಾಳ್‌, ವಿ.ಸೋಮಣ್ಣ, ಬೆಲ್ಲದ್‌ ಎಲ್ಲೂ ಪಕ್ಷದ ವಿರುದ್ಧ ಮಾತನಾಡಿಲ್ಲ. ವ್ಯಕ್ತಿ ಬಗ್ಗೆ ಸ್ವಲ್ಪ ಅಸಮಧಾನ ಇದೆ ಅಂತಾ ಹೇಳಿಕೊಂಡಿದ್ದಾರೆ ಎಂದರು.

ಅದು ಸಮಧಾನ ಆಗುತ್ತೆ. ಒಟ್ಟಾಗಿ ಸೇರಿಕೊಂಡು ಮೋದಿ ಕೈ ಬಲ ಪಡಿಸುತ್ತೇವೆ. ಜೆಡಿಎಸ್ ಹಾಗೂ ಬಿಜೆಪಿ ಸೇರಿಕೊಂಡು ರಾಜ್ಯದಲ್ಲಿ 28 ಸೀಟ್ ಗೆಲ್ಲುತ್ತೇವೆ. ಈ ವಿಶ್ವಾಸ ನನಗಂತೂ ಬಂದಿದೆ ಎಂದು ಈಶ್ವರಪ್ಪ ಹೇಳಿದರು. 

ಇದನ್ನೂ ಓದಿ: ಹೆಸ್ಕಾಂನಲ್ಲಿ 51 ಕೋಟಿ ವಂಚನೆ: ಮಧ್ಯಂತರ ವರದಿ ಸಲ್ಲಿಕೆ, ಐವರು ಸಿಬ್ಬಂದಿ ಅಮಾನತು 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News