SSLC Topper: ರೈತನ‌ ಮಗಳು ರಾಜ್ಯಕ್ಕೆ ಟಾಪರ್

ಕೃಷಿ ಮಾಡಿಕೊಂಡು ಜೀವನ ನಡೆಸುತ್ತಿರುವ ಚಂದ್ರಶೇಖರ್ ಪುತ್ರಿ ಚೈತನ್ಯ  ಚಿಕ್ಕ‌ ವಯಸ್ಸಿಂದಲೇ ವಿಜಯಪುರದ ಪ್ರಗತಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದರು. ಚಿಕ್ಕಂದಿನಿಂದಲೂ ವಿದ್ಯಾಭ್ಯಾಸದಲ್ಲಿ ಮುಂದಿದ್ದ ಚೈತನ್ಯ ಎಸ್ ಎಸ್ ಎಲ್ ಸಿಯಲ್ಲೂ ಚೆನ್ನಾಗಿ ಓದಿ ಟಾಪರ್ ಆಗಿದ್ದಾರೆ. 

Written by - Zee Kannada News Desk | Last Updated : May 20, 2022, 02:38 PM IST
  • ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಟಾಪರ್ ಆಗಿರುವ ಚೈತನ್ಯ. ಜೆ.
  • ಜೀ ಕನ್ನಡ ನ್ಯೂಸ್ ಜೊತೆ ಚೌತನ್ಯ ಹಾಗೂ ಅವರ ತಂದೆ ಚಂದ್ರಶೇಖರ್ ‌ಮಾತು
  • ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ 625 ಅಂಕ ಪಡೆದ ವಿದ್ಯಾರ್ಥಿನಿ ಚೈತನ್ಯ ಮುಂದಿನ ಗುರಿ ಏನು..?
SSLC Topper: ರೈತನ‌ ಮಗಳು ರಾಜ್ಯಕ್ಕೆ ಟಾಪರ್ title=
SSLC Topper Chaitanya

ಬೆಂಗಳೂರು: ಒಬ್ಬ ರೈತನ‌ ಮಗಳು ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಟಾಪರ್ ಆಗಿದ್ದಾರೆ. ಆ ವಿದ್ಯಾರ್ಥಿನಿಯ ಯಶಸ್ಸಿನ ಹಿಂದೆ ಪರಿಶ್ರಮ, ತಂದೆ-ತಾಯಿ, ಶಾಲಾ ಶಿಕ್ಷಕರ ಬೆಂಬಲ ಇದ್ದು, ಇಡೀ ಜಿಲ್ಲೆಯೇ ಹೆಮ್ಮೆ ಪಡುವಂತೆ ಮಾಡಿದೆ.  

ಹೌದು, ಆ ರೈತನ‌ ಮಗಳು ಬೇರೆ ಯಾರೂ ಅಲ್ಲ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯ ವಿಜಯಪುರದ ಯಲುವಳ್ಳಿಯ ರೈತನ ಮಗಳು ಚೈತನ್ಯ ಜೆ. ಯಲುವಳ್ಳಿಯಲ್ಲಿ ಕೃಷಿ ಮಾಡಿಕೊಂಡು ಜೀವನ ನಡೆಸುತ್ತಿರುವ ಚಂದ್ರಶೇಖರ್ ಪುತ್ರಿ ಚೈತನ್ಯ  ಚಿಕ್ಕ‌ ವಯಸ್ಸಿಂದಲೇ ವಿಜಯಪುರದ ಪ್ರಗತಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದರು. ಚಿಕ್ಕಂದಿನಿಂದಲೂ ವಿದ್ಯಾಭ್ಯಾಸದಲ್ಲಿ ಮುಂದಿದ್ದ ಚೈತನ್ಯ ಎಸ್ ಎಸ್ ಎಲ್ ಸಿಯಲ್ಲೂ ಚೆನ್ನಾಗಿ ಓದಿ ಪರೀಕ್ಷೆ ಬರೆದು 625 ಕ್ಕೆ 625 ಅಂಕ ಪಡೆದು ಜಿಲ್ಲೆಗೆ ಕೀರ್ತಿ ತಂದಿದ್ದಾರೆ. 

ಇದನ್ನೂ ಓದಿ- 2nd PUC Result date : ಈ ದಿನದಂದು ಹೊರಬೀಳಲಿದೆ ದ್ವಿತೀಯ ಪಿಯುಸಿ ಫಲಿತಾಂಶ

ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಟಾಪರ್ ಆಗಿರುವ ಚೈತನ್ಯ. ಜೆ. ಅವರಿಗೆ ಡಾಕ್ಟರ್ ಅಥವಾ ಇಂಜಿನಿಯರಿಂಗ್ ಆಗುವ ಆಸೆ ಇದೆಯಂತೆ. ತಮ್ಮ ಮುಂದಿನ ಗುರಿ ಬಗ್ಗೆ ಜೀ ಕನ್ನಡ ನ್ಯೂಸ್ ಜೊತೆ ಮಾತನಾಡಿರುವ  ಚೈತನ್ಯ ತಮ್ಮ ತಂದೆ, ತಾಯಿಗಳ ಆಸೆಯನ್ನು ಈಡೇಸುವುದೇ ತಮ್ಮ ಗುರಿ ಎಂದಿದ್ದಾರೆ.

ಇದನ್ನೂ ಓದಿ- SSLC ಬಳಿಕ ಯಾವ ಕೋರ್ಸ್ ಮಾಡಬೇಕೆಂಬ ಚಿಂತೆಯೇ? ಇಲ್ಲಿವೆ ಸಿಂಪಲ್‌ ಸಲಹೆಗಳು

ಇನ್ನು ಮಗಳ ಸಾಧನೆಗೆ ತಂದೆ ಚಂದ್ರಶೇಖರ್ ಕೂಡ ಸಂತಸ ವ್ಯಕ್ತಪಡಿಸಿದ್ದು, ತಮ್ಮ ಮಗಳು ಹಾರ್ಡ್ ವರ್ಕ್ ಮಾಡಿದ್ರಿಂದ ಈ ಸಾಧನೆ ಮಾಡಲು ಸಾಧ್ಯವಾಗಿದೆ. ಹಾಗೇ ಪ್ರಗತಿ ಶಾಲೆಯ ಶಿಕ್ಷಕರು ಸಪೋರ್ಟ್ ಮಾಡಿದ್ದಾರೆ ಎಂದ ಅವರು, ತಮ್ಮ ಮಗಳು ಡಾಕ್ಟರ್ ಅಥವಾ ಇಂಜಿನಿಯರಿಂಗ್ ಆಗಬೇಕು ಎಂಬುದೇ ತಮ್ಮ ಕನಸು ಎಂದು ಹೇಳಿದ್ದಾರೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News