Lokasabha Election 2024 : ದೇವೇಗೌಡರ ಕುಟುಂಬದಿಂದ ಹಕ್ಕು ಚಲಾವಣೆ : ಮತದಾನಕ್ಕೂ ಮುನ್ನ ದೇವಾಲಯಗಳಿಗೆ ಭೇಟಿ ಪೂಜೆ

Lokasabha Election 2024 :ಘಟಾನುಘಟಿ ನಾಯಕರೆಲ್ಲಾ ಮುಂಜಾನೆಯಿಂದಲೇ ಮತಗಟ್ಟೆಯತ್ತ ತೆರಳುತ್ತಿದ್ದಾರೆ. ಈ ನಡುವೆ  ಮಾಜಿ ಪ್ರಧಾನಿ ದೇವೇಗೌಡ ಮತ್ತು ಕುಟುಂಬದವರು ಕೂಡಾ ತಮ್ಮ ಹಕ್ಕು ಚಲಾಯಿಸಿದ್ದಾರೆ.   

Written by - Ranjitha R K | Last Updated : Apr 26, 2024, 11:50 AM IST
  • ರಾಜ್ಯದಲ್ಲಿ ಲೋಕಸಭಾ ಚುನಾವ್ನೆಯಮೊದಲ ಹಂತದ ಮತದಾನ ನಡೆಯುತ್ತಿದೆ
  • ಬಿರು ಬಿಸಿಲಿನ ನಡುವೆಯೂ ಜನರು ಬಹಲ ಉತ್ಸಾಹದಿಂದಲೇ ಮತದಾನದಲ್ಲಿ ಭಾಗಿ
  • ದೇವೇಗೌಡ ಮತ್ತು ಕುಟುಂಬದವರಿಂದ ಹಕ್ಕು ಚಲಾವಣೆ
Lokasabha Election 2024 : ದೇವೇಗೌಡರ ಕುಟುಂಬದಿಂದ  ಹಕ್ಕು ಚಲಾವಣೆ : ಮತದಾನಕ್ಕೂ ಮುನ್ನ ದೇವಾಲಯಗಳಿಗೆ ಭೇಟಿ ಪೂಜೆ  title=

Lokasabha Election 2024 :ರಾಜ್ಯದಲ್ಲಿ ಲೋಕಸಭಾ ಚುನಾವ್ನೆಯಮೊದಲ ಹಂತದ ಮತದಾನ ನಡೆಯುತ್ತಿದೆ.ಬಿರು ಬಿಸಿಲಿನ ನಡುವೆಯೂ ಜನರು ಬಹಲ ಉತ್ಸಾಹದಿಂದಲೇ ಮತದಾನದಲ್ಲಿ ಭಾಗಿಯಾಗುತ್ತಿದ್ದಾರೆ. ಘಟಾನುಘಟಿ ನಾಯಕರೆಲ್ಲಾ ಮುಂಜಾನೆಯಿಂದಲೇ ಮತಗಟ್ಟೆಯತ್ತ ತೆರಳುತ್ತಿದ್ದಾರೆ. ಈ ನಡುವೆ  ಮಾಜಿ ಪ್ರಧಾನಿ ದೇವೇಗೌಡ ಮತ್ತು ಕುಟುಂಬದವರು ಕೂಡಾ ತಮ್ಮ ಹಕ್ಕು ಚಲಾಯಿಸಿದ್ದಾರೆ. 

ಪತ್ನಿ ಸಮೇತ ಮತಗಟ್ಟೆಗೆ ಆಗಮಿಸಿದ ದೇವೇಗೌಡ : 
ಮಾಜಿಪ್ರಧಾನಿ ಎಚ್.ಡಿ.ದೇವೇಗೌಡರು ಹೊಳೆನರಸೀಪುರ ತಾಲೂಕಿನ, ಪಡುವಲಹಿಪ್ಪೆ ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆ ಸಂಖ್ಯೆ 251 ರಲ್ಲಿ ಮತದಾನ ಮಾಡುವ ಮೂಲಕ ತಮ್ಮ ಹಕ್ಕು ಚಲಾಯಿಸಿದ್ದಾರೆ. ಪತ್ನಿ ಚೆನ್ನಮ್ಮ ಜೊತೆ ಆಗಮಿಸಿದ ದೇವೇಗೌಡರು ಮತದಾನ ಮಾಡಿದ್ದಾರೆ. 

ಇದನ್ನೂ ಓದಿ ಆರ್‌ಆರ್ ನಗರದಲ್ಲಿ ಮತದಾನಕ್ಕಾಗಿ ಹಿರಿಯ ಮತದಾರರೇ ಹೆಚ್ಚಿನ ಪ್ರಮಾಣದಲ್ಲಿ ಆಗಮನ

ಇದಕ್ಕೂ ಮುನ್ನ ಹೊಳೆನರಸೀಪುರ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ ದೇವಾಲಯ, ಹರದನಹಳ್ಳಿಯ ದೇವೇಶ್ವರ ದೇವಾಲಯ ಹಾಗೂ ಮಾವಿನಕೆರೆಯ ಶ್ರೀ ರಂಗನಾಥಸ್ವಾಮಿ ದೇವಾಲಯ ಕ್ಕೆ ತೆರಳಿದ ದೇವೇಗೌಡರು ಪೂಜೆ ಸಲ್ಲಿಸಿದರು. ಅಲ್ಲದೆ, ಮತದಾನಕ್ಕೆ ಆಗಮಿಸಿದ ವೇಳೆ ಪಡುವಲಹಿಪ್ಪೆ ಗ್ರಾಮದ ಕೋದಂಡರಾಮದೇವಾಲಯದಲ್ಲೂ ಪೂಜೆ ಸಲ್ಲಿಸಿದ್ದಾರೆ. 

ಮತದಾನ ಮಾಡಿದ ಎಚ್.ಡಿ.ರೇವಣ್ಣ :
ಮತ್ತೊಂದೆಡೆ, ಪತ್ನಿ ಭವಾನಿ ಜೊತೆ ಆಗಮಿಸಿದ  ಎಚ್.ಡಿ.ರೇವಣ್ಣ ಕೂಡಾ ಹೊಳೆನರಸೀಪುರ ತಾಲೂಕಿನ, ಪಡುವಲಹಿಪ್ಪೆ ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಯಲ್ಲಿರುವ ಮತಗಟ್ಟೆ ಸಂಖ್ಯೆ 251 ರಲ್ಲಿ ಮತದಾನ ಮಾಡಿದ್ದಾರೆ.
ಕೋದಂಡರಾಮಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ನಂತರವೇ  ಎಚ್.ಡಿ.ರೇವಣ್ಣ ಮತ್ತು ಭವಾನಿ ಮತದಾನ ಮಾಡಿದ್ದಾರೆ.

ಇದನ್ನೂ ಓದಿ : ಜನಪ್ರತಿನಿಧಿಗಳಿಂದ ಹಕ್ಕು ಚಲಾವಣೆ: ತಮ್ಮನ ಜೊತೆ ನಂಜನಗೂಡು ಶಾಸಕ ಮತದಾನ

ಇನ್ನು ಮಾಜಿ ಮುಖ್ಯಮಂತ್ರಿ  ಹೆಚ್.ಡಿ ಕುಮಾರಸ್ವಾಮಿ ತಮ್ಮ ಕುಟುಂಬ ಸಮೇತರಾಗಿ ಬಿಡದಿ ಸಮೀಪದ ಕೇತಿಗಾನಹಳ್ಳಿ ಗ್ರಾಮದ ಮತಗಟ್ಟೆಯಲ್ಲಿ ಮತದಾನ ಮಾಡಿದರು. ಅನಿತಾ ಕುಮಾರಸ್ವಾಮಿ, ನಿಖಿಲ್ ಕುಮಾರಸ್ವಾಮಿ, ಮತ್ತು ರೇವತಿ ಕೂಡಾ ತಮ್ಮ ಹಕ್ಕು ಚಲಾಯಿಸಿದ್ದಾರೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News