B.S.Yediyurappa: 'ಸಿಎಂ ಯಡಿಯೂರಪ್ಪ ಆಧುನಿಕ ಹಿಟ್ಲರ್'

ಬಿ.ಎಸ್. ಯಡಿಯೂರಪ್ಪ ಮೋಸಗಾರ

Last Updated : Dec 5, 2020, 03:48 PM IST
  • ಬಿ.ಎಸ್. ಯಡಿಯೂರಪ್ಪ ಮೋಸಗಾರ
  • ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಆರೋಪ
  • ನಾನು ಕುಟುಂಬಸ್ಥರನ್ನು ಕಳೆದುಕೊಂಡಾಗ ಅಷ್ಟು ನೋವಾಗಿರಲಿಲ್ಲ. ಆದರೆ, ಯಡಿಯೂರಪ್ಪ ಅವರು ಮಾಡಿದ ಮೋಸದಿಂದ ಅತೀವ ನೋವಾಗಿದೆ
B.S.Yediyurappa: 'ಸಿಎಂ ಯಡಿಯೂರಪ್ಪ ಆಧುನಿಕ ಹಿಟ್ಲರ್' title=

ಬೆಂಗಳೂರು: ಸಿಎಂ ಬಿ.ಎಸ್. ಯಡಿಯೂರಪ್ಪ ಆಧುನಿಕ ಹಿಟ್ಲರ್ ಎಂದು ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಆರೋಪಿಸಿದ್ದಾರೆ.

ಕನ್ನಡಿಗರನ್ನು ಬಿಟ್ಟು, ತೆಲುಗು, ಮರಾಠಿಗರಿಗೆ ಪಟ್ಟ ಕಟ್ಟುತ್ತಿದ್ದಾರೆ. ಸಿಎಂ ಬಿ.ಎಸ್. ಯಡಿಯೂರಪ್ಪ(B.S.Yediyurappa) ಮೋಸಗಾರ. ನಾನು ಕುಟುಂಬಸ್ಥರನ್ನು ಕಳೆದುಕೊಂಡಾಗ ಅಷ್ಟು ನೋವಾಗಿರಲಿಲ್ಲ. ಆದರೆ, ಯಡಿಯೂರಪ್ಪ ಅವರು ಮಾಡಿದ ಮೋಸದಿಂದ ಅತೀವ ನೋವಾಗಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

Nikhil: ಮಂಡ್ಯದಿಂದ ಲೋಕಸಭೆಗೆ ನಿಖಿಲ್ ಮತ್ತೊಮ್ಮೆ ಸ್ಪರ್ಧೆ: ಸುಳಿವು ಕೊಟ್ಟ ಹೆಚ್ ಡಿಕೆ

ಪೊಲೀಸರು ಮಫ್ತಿಯಲ್ಲಿ ತೆರಳಿ ಸುಮಾರು 30 ಸಾವಿರಕ್ಕೂ ಅಧಿಕ ಕನ್ನಡ ಪರ ಕಾರ್ಯಕರ್ತರನ್ನು ಬಂಧಿಸಿದ್ದಾರೆ ಎಂದು ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಆರೋಪಿಸಿದ್ದಾರೆ. ಕರ್ನಾಟಕ ಬಂದ್ ಮಾಡುವಲ್ಲಿ ನಾವು ಯಶಸ್ವಿಯಾಗಿದ್ದೇವೆ. ಬುಧವಾರ ಜೈಲ್ ಭರೋ ಚಳವಳಿಗಾಗಿ ಸಭೆ ಕರೆಯಲಾಗಿದೆ ಎಂದರು.

H D Kumaraswamy: ಕಾಂಗ್ರೆಸ್ ಜೊತೆ ಸರ್ಕಾರ ಮಾಡಿ ಕೆಟ್ಟೆ: 'ಬಿಗ್ ಬಾಂಬ್ ಸ್ಫೋಟಿಸಿದ' ಹೆಚ್ ಡಿಕೆ!

ಬಿಜೆಪಿ, ಆರ್ ಎಸ್ ಎಸ್ ಕನ್ನಡ ವಿರೋಧಿಗಳಾಗಿವೆ. ಪೊಲೀಸರು 30 ಸಾವಿರ ಕನ್ನಡ ಪರ ಹೋರಾಟಗಾರರನ್ನು ಬಂಧಿಸಿದ್ದಾರೆ ಎಂದು ವಾಟಾಳ್ ನಾಗರಾಜ್ ಅವರು ಕಿಡಿಕಾರಿದ್ದಾರೆ.

ಅಧಿವೇಶನಕ್ಕೂ ಮುನ್ನವೇ ಸಂಪುಟ ವಿಸ್ತರಣೆ: ಐವರಿಗೆ ಮಾತ್ರ ಸಚಿವಸ್ಥಾನ!

Trending News