B.S.Yediyurappa: ಬಿಜೆಪಿ ಕೋರ್ ಕಮಿಟಿ ಸಭೆ ಹಿನ್ನೆಲೆ ಸಿಎಂಗೆ ಶುರುವಾಗಿದೆ ತಲೆನೋವು!

ಸಂಜೆ 6 ಗಂಟೆಗೆ ಶಿವಮೊಗ್ಗದಲ್ಲಿ ಕೋರ್ ಕಮಿಟಿ ಸಭೆ ನಡೆಯಲಿದ್ದು, ರಾಜ್ಯಕ್ಕೆ ಆಗಮಿಸಿರುವ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಅವರ ಜೊತೆ ಸಚಿವ ಸಂಪುಟ ರಚನೆ ಅಥವಾ ಪುನಾರಚನೆ ಕುರಿತಂತೆ ಮಾತುಕತೆ

Last Updated : Jan 2, 2021, 01:34 PM IST
  • ಇಂದು ಸಂಜೆ ಬಹುನಿರೀಕ್ಷಿತ ರಾಜ್ಯ ಬಿಜೆಪಿ ಕೋರ್ ಕಮಿಟಿ ಸಭೆ ನಡೆಯಲಿದ್ದು, ಸಚಿವ ಸಂಪುಟ ವಿಸ್ತರಣೆ ಸಂಬಂಧ ರಾಜ್ಯ ಉಸ್ತುವಾರಿಯವರ ಜೊತೆ ಚರ್ಚೆ ನಡೆಸಲೇಬೇಕೆಂದು ಸಿಎಂ ಯಡಿಯೂರಪ್ಪ ಮೇಲೆ ಆಕಾಂಕ್ಷಿಗಳು ಒತ್ತಡ
  • ಸಂಜೆ 6 ಗಂಟೆಗೆ ಶಿವಮೊಗ್ಗದಲ್ಲಿ ಕೋರ್ ಕಮಿಟಿ ಸಭೆ ನಡೆಯಲಿದ್ದು, ರಾಜ್ಯಕ್ಕೆ ಆಗಮಿಸಿರುವ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಅವರ ಜೊತೆ ಸಚಿವ ಸಂಪುಟ ರಚನೆ ಅಥವಾ ಪುನಾರಚನೆ ಕುರಿತಂತೆ ಮಾತುಕತೆ
  • ಮೂಲಗಳ ಪ್ರಕಾರ ಕಾರ್ಯಕಾರಿಣಿ ಸಭೆಯಲ್ಲಿ ನೆನೆಗುದಿಗೆ ಬಿದ್ದಿರುವ ಸಂಪುಟ ವಿಸ್ತರಣೆ ಬಗ್ಗೆ ಪಕ್ಷದ ಮುಖಂಡರು ಚರ್ಚೆ ನಡೆಸುವ ಸಾಧ್ಯತೆ ಹೆಚ್ಚಾಗಿದೆ
B.S.Yediyurappa: ಬಿಜೆಪಿ ಕೋರ್ ಕಮಿಟಿ ಸಭೆ ಹಿನ್ನೆಲೆ ಸಿಎಂಗೆ ಶುರುವಾಗಿದೆ ತಲೆನೋವು! title=

ಬೆಂಗಳೂರು: ಇಂದು ಸಂಜೆ ಬಹುನಿರೀಕ್ಷಿತ ರಾಜ್ಯ ಬಿಜೆಪಿ ಕೋರ್ ಕಮಿಟಿ ಸಭೆ ನಡೆಯಲಿದ್ದು, ಸಚಿವ ಸಂಪುಟ ವಿಸ್ತರಣೆ ಸಂಬಂಧ ರಾಜ್ಯ ಉಸ್ತುವಾರಿಯವರ ಜೊತೆ ಚರ್ಚೆ ನಡೆಸಲೇಬೇಕೆಂದು ಸಿಎಂ  ಯಡಿಯೂರಪ್ಪ ಮೇಲೆ ಆಕಾಂಕ್ಷಿಗಳು ಒತ್ತಡ ಹಾಕಿದ್ದಾರೆ. ಸಂಜೆ 6 ಗಂಟೆಗೆ ಶಿವಮೊಗ್ಗದಲ್ಲಿ ಕೋರ್ ಕಮಿಟಿ ಸಭೆ ನಡೆಯಲಿದ್ದು, ರಾಜ್ಯಕ್ಕೆ ಆಗಮಿಸಿರುವ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಅವರ ಜೊತೆ ಸಚಿವ ಸಂಪುಟ ರಚನೆ ಅಥವಾ ಪುನಾರಚನೆ ಕುರಿತಂತೆ ಮಾತುಕತೆ ನಡೆಸಲೇಬೇಕೆಂದು ಆಕಾಂಕ್ಷಿಗಳು ಒತ್ತಾಯ ಮಾಡಿದ್ದಾರೆ.

ಪುನಾರಚನೆಯೋ ಅಥವಾ ವಿಸ್ತರಣೆಯೋ ಗೊತ್ತಿಲ್ಲ. ಕಾರ್ಯಕಾರಿಣಿ ಸಭೆಯಲ್ಲಿ ನೀವು ಚರ್ಚೆ ಮಾಡಲೇಬೇಕು. ಇಲ್ಲಿಯ ತನಕ ಕುಂಟು ನೆಪಗಳನ್ನು ಹೇಳಿ ಮುಂದೂಡಿದ್ದು ಸಾಕು ಎಂದು ಆಕಾಂಕ್ಷಿಗಳು ಕಿಡಿಕಾರಿದ್ದಾರೆ. ಸಚಿವ ಸ್ಥಾನದ ಮೇಲೆ ಕಣ್ಣಿಟ್ಟಿರುವ ಆರ್.ಶಂಕರ್, ಎಂ.ಟಿ.ಬಿ.ನಾಗರಾಜ್(MTB Nagaraj), ಮುನಿರತ್ನ, ಎಚ್.ವಿಶ್ವನಾಥ್, ಉಮೇಶ್ ಕತ್ತಿ, ರಾಜುಗೌಡ ನಾಯಕ್ ಸೇರಿದಂತೆ ಮತ್ತಿತರ ಆಕಾಂಕ್ಷಿಗಳು ಸಿಎಂ ಮೇಲೆ ಒತ್ತಡದ ತಂತ್ರ ಅನುಸರಿಸಿದ್ದಾರೆ.

Good News : ಜನವರಿ 4ರಿಂದ Mysore-Bangalore ಪ್ಯಾಸೆಂಜರ್ ರೈಲು ಸೇವೆ ಆರಂಭ

ನೀವು ಮಾತ್ರ ಅಧಿಕಾರ ಅನುಭವಿಸಬೇಕು. ನಾವು ಮಾತ್ರ ಇನ್ನು ಹೀಗೆ ಎಷ್ಟು ದಿನ ವನವಾಸ ಅನುಭವಿಸಬೇಕು, ನಮಗೂ ಸಚಿವರಾಗಬೇಕೆಂಬ ಆಸೆ ಇದೆ. ನೀವು ವಿಸ್ತರಣೆ ಮಾಡುತ್ತೀರೋ ಅಥವಾ ಪುನಾರಚನೆ ಮಾಡುತ್ತೀರೋ ನಮಗೆ ಗೊತ್ತಿಲ್ಲ. ಒಟ್ಟಿನಲ್ಲಿ ಯಾವುದಾದರೊಂದು ತೀರ್ಮಾನ ಮಾಡಲೇಬೇಕೆಂದು ಒತ್ತಡ ಹಾಕಿರುವುದು ಬೆಳಕಿಗೆ ಬಂದಿದೆ.

ಮುಖ್ಯಮಂತ್ರಿಗಳು ತಮಗೆ ತಾವೇ ಪ್ರಮಾಣ ಪತ್ರ ಕೊಟ್ಟುಕೊಳ್ಳುತ್ತಿರುವುದೇಕೆ?-ಡಿಕೆಶಿ

ಇನ್ನು ಕೇವಲ ಅಧಿಕಾರಾವಧಿ 2 ವರ್ಷ ಮಾತ್ರ ಇದೆ. ನಮ್ಮ ಸ್ಥಾನಗಳಿಗೆ ರಾಜೀನಾಮೆ ಕೊಟ್ಟು ವರ್ಷಗಳೇ ಕಳೆದಿವೆ. ಆದರೂ ನೀವು ಇಂದು ನಾಳೆ ಎನ್ನುತ್ತಲೇ ಇಲ್ಲದ ಕಾರಣಗಳನ್ನು ಕೊಡುತ್ತಿದ್ದೀರಿ. ನಮ್ಮ ತ್ಯಾಗಕ್ಕೆ ಬೆಲೆಯೇ ಇಲ್ಲವೇ ಎಂದು ಸಿಎಂ ಬಳಿ ಅಸಮಾಧಾನ ಹೊರಹಾಕಿದ್ದಾರೆ. ರಾಜ್ಯದಲ್ಲಿ ಸದ್ಯ ಗ್ರಾಮ ಪಂಚಾಯ್ತಿ ಚುನಾವಣೆ ಮುಗಿದಿದೆ. ಕಡೆಪಕ್ಷ ಸಂಕ್ರಾಂತಿ ಬಳಿಕವಾದರೂ ವಿಸ್ತರಣೆಗೆ ಸಮಯ ಅವಕಾಶವನ್ನು ನಿಗದಿಪಡಿಸಿ. ಕಾರ್ಯಕರ್ತರಲ್ಲಿ ನಮಗೂ ಹೇಳಿ ಹೇಳಿ ಸಾಕಾಗಿ ಹೋಗಿದೆ. ಇನ್ನು ಎಷ್ಟು ದಿನ ಮುಂದೂಡುತ್ತೀರಿ? ಯಾವುದಾದರೊಂದು ಸ್ಪಷ್ಟ ನಿಲವು ತೆಗೆದುಕೊಳ್ಳಬೇಕೆಂದು ಪಟ್ಟು ಹಿಡಿದಿದೆ.

ಪೇಜಾವರ ಶ್ರೀಗಳಿಗೆ ವೈ ಶ್ರೇಣಿಯ ಭದ್ರತೆ…ಶ್ರೀಪಾದರಿಗೆ ಈ ಪರಿಯ ಸೆಕ್ಯೂರಿಟಿಗೆ ಕಾರಣ ಏನು?

ಮೂಲಗಳ ಪ್ರಕಾರ ಕಾರ್ಯಕಾರಿಣಿ ಸಭೆಯಲ್ಲಿ ನೆನೆಗುದಿಗೆ ಬಿದ್ದಿರುವ ಸಂಪುಟ ವಿಸ್ತರಣೆ ಬಗ್ಗೆ ಪಕ್ಷದ ಮುಖಂಡರು ಚರ್ಚೆ ನಡೆಸುವ ಸಾಧ್ಯತೆ ಹೆಚ್ಚಾಗಿದೆ. ಗ್ರಾಮಪಂಚಾಯ್ತಿ ಚುನಾವಣೆ ಮುಗಿದಿರುವುದರಿಂದ ಇನ್ನಷ್ಟು ವಿಳಂಬ ನೀತಿ ಅನುಸರಿಸದೆ ಆದಷ್ಟು ಶೀಘ್ರ ಯಾವುದಾದರೊಂದು ತೀರ್ಮಾನಕ್ಕೆ ಬರುವ ಸಾಧ್ಯತೆಇದೆ.

BMTC : ವಿದ್ಯಾರ್ಥಿಗಳೇ ಹೊಸ ಬಸ್ ಪಾಸ್ ಮಾಡಿಸುವ ಚಿಂತೆ ಬೇಡ ; ಹಳೆಯ ಪಾಸಿನಲ್ಲೇ ಪ್ರಯಾಣ ಮಾಡಬಹುದು

ಪಕ್ಷದಲ್ಲಿ ಪದೇ ಪದೇ ನಾಯಕತ್ವದ ವಿರುದ್ಧ ಅಪಸ್ವರ ಎತ್ತುತ್ತಿರುವುದರ ಬಗ್ಗೆಯೂ ಚರ್ಚೆ ನಡೆಯಲಿದ್ದು, ಭಿನ್ನಮತಕ್ಕೆ ಕಡಿವಾಣ ಹಾಕುವಂತೆ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಅವರು ರಾಜ್ಯಾಧ್ಯಕ್ಷ ಕಟೀಲ್ ಅವರಿಗೆ ಸೂಚನೆ ನೀಡುವ ಸಾಧ್ಯತೆ ಇದೆ. ಇಂದು ಕೋರ್ ಕಮಿಟಿ ಸಭೆ ನಡೆಯಲಿದ್ದು, ನಾಳೆ ಕಾರ್ಯಕಾರಿಣಿ ಸಭೆ ನಡೆಯಲಿದೆ.

ಪ್ರಯಾಣಿಕರಿಗೆ BMTC New Year ಗಿಫ್ಟ್

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಆಪ್ ಡೌನ್ ಲೋಡ್ ಮಾಡಿ

Android Link - https://bit.ly/3hDyh4G

iOS Link - https://apple.co/3loQYe

ನಮ್ಮ ಸೋಶಿಯಲ್ ಮೀಡಿಯಾ ಪುಟಕ್ಕೆ ಸಬ್ ಸ್ಕ್ರೈಬ್ ಮಾಡಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News