Chikkaballapur earthquake: ಮತ್ತೆ ಕಂಪಿಸಿದ ಚಿಕ್ಕಬಳ್ಳಾಪುರ ತಾಲೂಕು, ಭೂಕಂಪಕ್ಕೆ ಬೆಚ್ಚಿಬಿದ್ದ ಜನರು!

ಕೊರೊನಾ ಆತಂಕದ ಮಧ್ಯೆ ಭೂಕಂಪನದ ಭೀತಿಯೂ ಕಾಡಲಾರಂಭಿಸಿದ್ದು ಬಂಡಹಳ್ಳಿ, ಪಿಲ್ಲಗುಂಡ್ಲಹಳ್ಳಿ, ಶೆಟ್ಟಿಗೆರೆ ಗ್ರಾಮಸ್ಥರು ಭಯಭೀತರಾಗಿದ್ದಾರೆ.

Written by - Zee Kannada News Desk | Last Updated : Jan 22, 2022, 09:01 AM IST
  • ಚಿಕ್ಕಬಳ್ಳಾಪುರ ತಾಲೂಕಿನಲ್ಲಿ ವಿವಿಧೆಡೆ ಮತ್ತೆ ಭೂಮಿ ಕಂಪಿಸಿದ ಅನುಭವಾಗಿದೆ
  • ಪದೇ ಪದೇ ಭೂಮಿ ಕಂಪಿಸುತ್ತಿರುವುದಕ್ಕೆ ಚಿಕ್ಕಬಳ್ಳಾಪುರ ತಾಲೂಕಿನ ಜನರು ಭಯಭೀತರಾಗಿದ್ದಾರೆ
  • ಕಳೆದ ಡಿಸೆಂಬರ್ ಹಾಗೂ ಜನವರಿ ಮೊದಲ ವಾರದಲ್ಲಿ ಇದೇ ಪ್ರದೇಶದಲ್ಲಿ 4 ಬಾರಿ ಭೂಮಿ ಕಂಪಿಸಿತ್ತು
Chikkaballapur earthquake: ಮತ್ತೆ ಕಂಪಿಸಿದ ಚಿಕ್ಕಬಳ್ಳಾಪುರ ತಾಲೂಕು, ಭೂಕಂಪಕ್ಕೆ ಬೆಚ್ಚಿಬಿದ್ದ ಜನರು! title=
ಚಿಕ್ಕಬಳ್ಳಾಪುರ ತಾಲೂಕಿನಲ್ಲಿ ಮತ್ತೆ ಕಂಪಿಸಿದ ಭೂಮಿ

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ತಾಲೂಕಿನಲ್ಲಿ ಮತ್ತೆ ಭೂಮಿ ಕಂಪಿಸಿದ(Chikkaballapur Earthquake) ಅನುಭವಾಗಿದೆ. ಭಾರೀ ಸದ್ದಿನೊಂದಿಗೆ ಹಲವು ಬಾರಿ ಭೂಮಿ ಕಂಪನವಾಗಿದ್ದು, ಸ್ಫೋಟದ ಶಬ್ದಕ್ಕೆ ಶೆಟ್ಟಿಗೆರೆ ಗ್ರಾಮಸ್ಥರು ಬೆಚ್ಚಿಬಿದಿದ್ದಾರೆ.

ಇದೇ ಪ್ರದೇಶದಲ್ಲಿ ಕಳೆದ ಡಿಸೆಂಬರ್ ಹಾಗೂ ಜನವರಿ ಮೊದಲ ವಾರದಲ್ಲಿ 4 ಬಾರಿ ಭೂಮಿ ಕಂಪಿಸಿತ್ತು. ಪದೇ ಪದೇ ಭೂಮಿ ಕಂಪಿಸುತ್ತಿರುವುದಕ್ಕೆ(Earthquake) ಚಿಕ್ಕಬಳ್ಳಾಪುರ ತಾಲೂಕಿನ ಜನರು ಭಯಭೀತಗೊಂಡಿದ್ದಾರೆ. ಜೀವ ಭಯದಿಂದ ಮನೆ ಬಿಟ್ಟು ಹೊರಗೆ ಓಡಾಡುವಂತಾಗಿದೆ.

ಇದನ್ನೂ ಓದಿ: 'ಕೊರೊನಾ ಸೋಂಕಿತರ ಮನೆ ಬಾಗಿಲಿಗೆ ಔಷಧಿ ಕಿಟ್'

ಚಿಕ್ಕಬಳ್ಳಾಪುರ ತಾಲೂಕಿನ ಶೆಟ್ಟಿಗೆರೆ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಭೂಕಂಪನ(Mild Earthquake)ದ ಅನುಭವವಾಗಿದೆ. ಗ್ರಾಮದ ಕೆಲ ಮನೆಗಳ ಗೋಡೆಗಳಲ್ಲಿ ಬಿರುಕು ಕಾಣಿಸಿಕೊಳ್ಳುವಷ್ಟು ಭೂಮಿ ಕಂಪಿಸಿದೆ. ಕೆಲವು ಮನೆಗಳಲ್ಲಿನ ಪಾತ್ರೆ-ಪಗಡೆಗಳು ಕೆಳಗೆ ಬಿದ್ದಿವೆ. ಇದರಿಂದ ಭಯಭೀತರಾದ ಗ್ರಾಮಸ್ಥರು ಮನೆಯ ಒಳಗಡೆ ಇರಲು ಹಿಂದೇಟು ಹಾಕುತ್ತಿದ್ದಾರೆ.

ಚಿಕ್ಕಬಳ್ಲಾಪುರ ತಾಲೂಕಿನ ಶೆಟ್ಟಿಗೆರೆ ಗ್ರಾಮ(Chikkaballapur Villages)ದಲ್ಲಿ ಆಗಾಗ ಭೂಕಂಪ ಸಂಭವಿಸುತ್ತಿದೆ ಎಂದು ತಿಳಿದುಬಂದಿದೆ. ಕೊರೊನಾ ಆತಂಕದ ಮಧ್ಯೆ ಭೂಕಂಪನದ ಭೀತಿಯೂ ಕಾಡಲಾರಂಭಿಸಿದ್ದು ಬಂಡಹಳ್ಳಿ, ಪಿಲ್ಲಗುಂಡ್ಲಹಳ್ಳಿ, ಶೆಟ್ಟಿಗೆರೆ ಗ್ರಾಮಸ್ಥರು ಭಯಭೀತರಾಗಿದ್ದಾರೆ. ಪದೇ ಪದೇ ಭೂಕಂಪವಾಗುತ್ತಿರುವುದರಿಂದ ಕೈಯಲ್ಲಿ ಜೀವ ಹಿಡಿದು ಜನರು ಬದುಕುವಂತಾಗಿದೆ. ಈಗಾಗಲೇ ಭೂಕಂಪನದಿಂದ ಗ್ರಾಮಗಳಲ್ಲಿರುವ ಕೆಲವು ಮನೆಗಳ ಗೋಡೆಗಳಲ್ಲಿ ಬಿರುಕು ಕಾಣಿಸಿಕೊಂಡಿದೆ. ಹೀಗಾಗಿ ಇಲ್ಲಿನ ಗ್ರಾಮಸ್ಥರಲ್ಲಿ ಒಂದು ರೀತಿಯ ಆತಂಕದ ವಾತಾವರಣ ನಿರ್ಮಾಣವಾಗಿದೆ.

ಇದನ್ನೂ ಓದಿ: ಗ್ರಾಮ ಒನ್ ಯೋಜನೆ ಫ್ರಾಂಚೈಸಿಗೆ ಅರ್ಜಿ ಆಹ್ವಾನ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News