ಕೇಂದ್ರದಿಂದ ರಾಜ್ಯಕ್ಕೆ ಅನ್ಯಾಯವಾಗಿಲ್ಲ, ಅನುದಾನ ಬರುತ್ತಿದೆ : ಬೊಮ್ಮಾಯಿ

ಕೇಂದ್ರ ಸರ್ಕಾರದಿಂದ ಬರುವ ಹಣವನ್ನು ನಾವು ಕೇವಲ ತೆರಿಗೆ ಹಾಗೂ ಅನುದಾನದ ಬಗ್ಗೆ ಮಾತ್ರ ಮಾತನಾಡುತ್ತೇವೆ. ಕೇಂದ್ರದಿಂದ ಅನೇಕ ಯೋಜನೆಗಳಿಗೆ ಅನುದಾನ ಬರುತ್ತದೆ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು.

Written by - Prashobh Devanahalli | Edited by - Krishna N K | Last Updated : Feb 21, 2024, 05:41 PM IST
  • ರಾಜ್ಯಕ್ಕೆ ಯಾವುದೇ ರೀತಿಯ ಅನ್ಯಾಯವಾಗಿಲ್ಲ
  • ರಾಜ್ಯಕ್ಕೆ ಸಾಕಷ್ಟು ಅನುದಾನ ಹರಿದು ಬರುತ್ತಿದೆ
  • ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿಕೆ
ಕೇಂದ್ರದಿಂದ ರಾಜ್ಯಕ್ಕೆ ಅನ್ಯಾಯವಾಗಿಲ್ಲ, ಅನುದಾನ ಬರುತ್ತಿದೆ : ಬೊಮ್ಮಾಯಿ title=

ಬೆಂಗಳೂರು : ಕೇಂದ್ರಿದಿಂದ ಅನುದಾನ ಹಾಗೂ ತೆರಿಗೆ ಹಂಚಿಕೆ ವಿಚಾರದಲ್ಲಿ ರಾಜ್ಯಕ್ಕೆ ಯಾವುದೇ ರೀತಿಯ ಅನ್ಯಾಯವಾಗಿಲ್ಲ. ಕೇಂದ್ರ ಪುರಸ್ಕೃತ ಯೋಜನೆಗಳ ಮೂಲಕವೂ ರಾಜ್ಯಕ್ಕೆ ಸಾಕಷ್ಟು ಅನುದಾನ ಹರಿದು ಬರುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. 

ಬಜೆಟ್ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮುಖ್ಯಮಂತ್ರಿಗಳು ಹಣಕಾಸಿನ ವಿಚಾರದಲ್ಲಿ ಕೇಂದ್ರ ಸರ್‌ಚಾರ್ಜ್, ಸೆಸ್ ತೆಗೆದುಕೊಳ್ಳುತ್ತದೆ. ಅದರಲ್ಲೂ ರಾಜ್ಯಕ್ಕೆ ಪಾಲು ಕೊಡಬೇಕು ಎಂದು ಹೇಳುತ್ತಾರೆ. ಸರ್‌ಚಾರ್ಜ್ ಮತ್ತು ಸೆಸ್ಸು 1958 ನಿಂದಲೇ ಇವೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸರ್‌ಚಾರ್ಜ್ ಸೆಸ್ ಹಾಕಬಹುದು. ರಾಜ್ಯ ಸರ್ಕಾರ ಬೆಂಗಳೂರಿನ ಮೂಲ ಸೌಕರ್ಯ ಕಲ್ಪಿಸಲು ಸರ್‌ಚಾರ್ಜ್ ಸೆಸ್ ಹಾಕುತ್ತಿದ್ದಾರೆ. ಅದು ಬಂಡವಾಳವಾಗಿ ಪರಿವರ್ತನೆಯಾಗಿರುವುದರಿಂದ ರಾಜ್ಯದ ಅಭಿವೃದ್ಧಿಗೆ ಹಣ ಬಳಕೆಯಾಗುತ್ತಿದೆ ಎಂದು ಹೇಳಿದರು.

ಇದನ್ನೂ ಓದಿ:ಬೆಂಗಳೂರಿನ ಅಪಾರ್ಟ್​ಮೆಂಟ್​ಗಳಲ್ಲಿ  ನೀರಿನ ಕೊರತೆಗೆ ಸ್ಮಾರ್ಟ್ಸ್​​ಹೋಮ್ಸ್​​ನ ವಾಟರ್​ಆನ್ ಪರಿಹಾರ

ಕೇಂದ್ರ ಸರ್ಕಾರ ಕಳೆದ ಆರೇಳು ವರ್ಷದಿಂದ ತಂಬಾಕು, ಸಿಗರೇಟ್, ದುಬಾರಿ ಕಾರು, ಎಲೆಕ್ಟ್ರಾನಿಕ್ ವಸ್ತುಗಳ ಮೇಲೆ ಸೆಸ್ ಹಾಕಿ ರಾಜ್ಯಗಳಿಗೆ ಜಿಎಸ್‌ಟಿ ಪರಿಹಾರ ನೀಡುತ್ತದೆ. ಕೇಂದ್ರ ಸರ್ಕಾರ ಹಾಕಿರುವ ಸೆಸ್‌ನಲ್ಲಿ ಕರ್ನಾಟಕಕ್ಕೆ 45 ಸಾವಿರ ಕೋಟಿ ಬರಬೇಕು ಎಂದು ಮಾಡುತ್ತಿರುವ ವಾದ ಸರಿಯಲ್ಲ. ಐದು ವರ್ಷದಲ್ಲಿ 1,06,228  ಕೋಟಿ ರೂ. ರಾಜ್ಯಕ್ಕೆ ಜೆಎಸ್‌ಟಿ ಪರಿಹಾರದ ಮೂಲಕ ಬಂದಿದೆ. ಹೀಗಾಗಿ ರಾಜ್ಯಕ್ಕೆ ನಷ್ಟ ಆಗಿದೆ ಎನ್ನುವ ವಾದ ಸರಿಯಲ್ಲ ಎಂದು ವಾದ ಮಾಡಿದರು. 

ಕೊವಿಡ್ ಸಂದರ್ಭದಲ್ಲಿ ಕೇಂದ್ರ ಸರ್ಕಾರ ರಾಜ್ಯಗಳಿಗೆ ಸಾಲ ಕೊಟ್ಟಿದೆ. ಅದರ ಸಾಲ ಮತ್ತು ಬಡ್ಡಿಯನ್ನು ಕೇಂದ್ರ ಸರ್ಕಾರ ತೀರಿಸುತ್ತದೆ. 15ನೇ ಹಣಕಾಸಿನಲ್ಲಿ ಜನಸಂಖ್ಯಾ ಮಾನದಂಡವನ್ನು 1971 ಬದಲು 2012ರ ಜನಸಂಖ್ಯಾ ಆಧಾರ ಇಟ್ಟುಕೊಂಡಿದ್ದರಿಂದ ರಾಜ್ಯಕ್ಕೆ ಅನ್ಯಾಯವಾಗಿದೆ ಎಂದು ಸಿಎಂ ಹೇಳಿದ್ದಾರೆ. ಯಾವುದೇ ಸರ್ಕಾರವಾದರೂ ಹತ್ತಿರದ ಜನಸಂಖ್ಯೆಯನ್ನು ಮಾನದಂಡ ಮಾಡಿಕೊಳ್ಳುತ್ತಾರೆ ಎಂದು ಹೇಳಿದರು. 

ಇದನ್ನೂ ಓದಿ: ಸಿದ್ಧಗಂಗಾ ಮಠದಿಂದ BCM ಹಾಸ್ಟೆಲ್‌ಗಳಿಗೆ ಅಕ್ಕಿ ಸಾಲ ಕೇಸ್‌

15ನೇ ಹಣಕಾಸು ಆಯೋಗ ಕೊವಿಡ್ ಕಾರಣದಿಂದ ಒಂದು ವರ್ಷ ತಡವಾಗಿ ಬಂದಿದೆ. ಫೆರಿಪೆರಲ್ ರಿಂಗ್ ರಸ್ತೆಗೆ ಈಗಲೂ ಕೇಂದ್ರದಿಂದ ಅನುದಾನ ಬರುತ್ತದೆ. ಆದರೆ, ರಿಂಗ್ ರೋಡ್ ಯೋಜನೆಗೆ ಭೂಸ್ವಾಧೀನ ಮಾಡಲಾಗಿಲ್ಲ. ಯೋಜನೆ ಆರಂಭ ಮಾಡಿಲ್ಲ. ಆರಂಭ ಮಾಡಿದರೆ ಖಂಡಿತವಾಗಿಯೂ ಕೇಂದ್ರದ ಅನುದಾನ ಬರುತ್ತದೆ. ಕೇಂದ್ರದ ಅನುದಾನ ಬರಬೇಕಾದರೆ ನ್ಯಾಯ ಸಮ್ಮತವಾದ ರೀತಿಯಲ್ಲಿ ಪ್ರಸ್ತಾವನೆ ಸಲ್ಲಿಸಿದರೆ ಬರುತ್ತದೆ ಎಂದರು.

ಬೆಂಗಳೂರಿನಲ್ಲಿ ಶೇ 60 ರಷ್ಟು ಆದಾಯ ಬರುತ್ತದೆ. ಅದನ್ನು ರಾಜ್ಯದ ಎಲ್ಲ ಜಿಲ್ಲೆಗಳೂ, ಹಳ್ಳಿಗಳಿಗೂ ತೆಗೆದುಕೊಂಡು ಹೋಗುತ್ತೇವೆ. ಆದಾಯ ಹಂಚಿಕೆ ಬಡವರಿಗೆಯಾಗಬೇಕು. ಆದಾಯ ಹೆಚ್ಚಿಸುವುದು ಮತ್ತು ಹಂಚಿಕೆ ಮಾಡುವುದನ್ನು ಸರಿಯಾಗಿ ಮಾಡಿದರೆ ಮಾತ್ರ ಆರ್ಥಿಕತೆ ಸರಿಯಾಗಿ ನಡೆಯುತ್ತದೆ. ಮುಖ್ಯಮಂತ್ರಿಗಳು ರಾಜ್ಯದಿಂದ 4 ಲಕ್ಷ ಕೋಟಿ ರೂ. ಕೇಂದ್ರಕ್ಕೆ ಹೋಗುತ್ತದೆ ಎಂದು ಹೇಳಿದ್ದಾರೆ. ದೇಶದ ಎಲ್ಲ ಭಾಗದಿಂದಲೂ ಸರ್‌ಚಾರ್ಜ್ ಕಟ್ಟುತ್ತಾರೆ. ರಕ್ಷಣಾ ಇಲಾಖೆ ಇದೆ. ರೈಲ್ವೆ ಇದೆ. ಆ ಇಲಾಖೆಗಳಿಗೂ ಯೋಜನೆಗಳಿವೆ. ಅಲ್ಲಿಗೂ ಅನುದಾನ ನೀಡಬೇಕು ಎಂದರು.

ಇದನ್ನೂ ಓದಿ:ಪ್ರಧಾನಮಂತ್ರಿ ಮೋದಿಯವರಿಂದ ಗಂಗಾವತಿ ಕೇಂದ್ರಿಯ ವಿದ್ಯಾಲಯ ಲೋಕಾರ್ಪಣೆ

ಯೋಜನೆಗಳ ಮೂಲಕ ಕೇಂದ್ರದಿಂದ ಹಣ : ಕೇಂದ್ರ ಸರ್ಕಾರದಿಂದ ಬರುವ ಹಣವನ್ನು ನಾವು ಕೇವಲ ತೆರಿಗೆ ಹಾಗೂ ಅನುದಾನದ ಬಗ್ಗೆ ಮಾತ್ರ ಮಾತನಾಡುತ್ತೇವೆ. ಕೇಂದ್ರದಿಂದ ಅನೇಕ ಯೋಜನೆಗಳಿಗೆ ಅನುದಾನ ಬರುತ್ತದೆ. ಅಮೃತ ಯೋಜನೆಯಡಿ ನಗರ ನೀರು ಸರಬರಾಜು, ಜಲಜೀವನ್ ಮಿಷನ್‌ನಲ್ಲಿ ಕೇಂದ್ರ ಸರ್ಕಾರ ಶೇ 50 ರಷ್ಟು ಅನುದಾ ನೀಡುತ್ತದೆ. ಸ್ವಚ್ಚ ಭಾರತ, ಕಿಸಾನ್ ಸಮ್ಮಾನ್ ಯೋಜನೆಯಡಿ ಕೇಂದ್ರ ಸರ್ಕಾರ 60 ಲಕ್ಷ ರೈತರಿಗೆ 14000 ಕೋಟಿ ರೈತರಿಗೆ ಹಣ ನೀಡಿದ್ದಾರೆ. ರಾಷ್ಡ್ರೀಯ ಹೆದ್ದಾರಿ ಯೋಜನೆ ಅಡಿ ರಾಜ್ಯಕ್ಕೆ ಅನುದಾನ ನೀಡಿದೆ. ರೈಲ್ವೆ ಯೋಜನೆಗಳಿಗೆ ಕೇಂದ್ರ 7 ಸಾವಿರ ಕೋಟಿ ಕೊಟ್ಟಿದೆ. ರೈಲ್ವೆ ಎಲೆಕ್ಟ್ರಿಫಿಕೇಶನ್ ಕೇಂದ್ರ ಸರ್ಕಾರ ಮಾಡುತ್ತದೆ. ಸಾಗರ ಮಾಲಾ ಯೋಜನೆಗೂ ಕೇಂದ್ರ ಸರ್ಕಾರ ಅನುದಾನ ನೀಡುತ್ತದೆ. ಎಲ್ಲ ಯೋಜನೆಗಳಲ್ಲಿ ಕೇಂದ್ರ ಸರ್ಕಾರ ಶೇ 50ರಷ್ಟು ಅನುದಾನ ನೀಡುತ್ತಿದೆ. ಸ್ಮಾರ್ಟ್ ಸಿಟಿ ಯೋಜನೆಗೂ ಕೇಂದ್ರ ಸರ್ಕಾರ ಅನುದಾನ ನೀಡುತ್ತಿದೆ ಎಂದು ಹೇಳಿದರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News