ಅಹಮದಾಬಾದ್ ಎಕ್ಸ್‌ಪ್ರೆಸ್‌ ರೈಲಿನ ಸಮಯ ಬದಲಾವಣೆ

ಅಹಮದಾಬಾದ್ - ಯಶವಂತಪುರ - ಅಹಮದಾಬಾದ್ ಎಕ್ಸ್‌ಪ್ರೆಸ್ ರೈಲಿನ ಸಮಯ ಬದಲಾವಣೆಯಾಗಿದೆ ಎಂದು ನೈರುತ್ಯ ರೈಲ್ವೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಈ ಸಂಬಂಧ ಪ್ರಯಾಣ ಬೆಳೆಸುವ ಪ್ರಯಾಣಿಕರು ಸಹಕರಿಸಬೇಕಾಗಿ ಇಲಾಖೆ ಮನವಿ ಮಾಡಿದೆ. 

Written by - Manjunath Hosahalli | Edited by - Manjunath Naragund | Last Updated : Nov 26, 2022, 09:13 PM IST
  • 16502 ಯಶವಂತಪುರ - ಅಹಮದಾಬಾದ್ ಸಾಪ್ತಾಹಿಕ ಎಕ್ಸ್‌ಪ್ರೆಸ್ 27.11.2022 ರಿಂದ ಜಾರಿಗೆ ಬರುವಂತೆ
  • ಸಂಜೆ 04.15 ಗಂಟೆಗೆ ಬರುವ ಬದಲಾಗಿ ಸಂಜೆ 04:45ಕ್ಕೆ ಯಶವಂತಪುರದಿಂದ ಹೊರಡಲಿದೆ.
  • ಬೆಳಗ್ಗೆ 03.40 ಗಂಟೆಗೆ ಬದಲಾಗಿ ಮುಂಜಾನೆ 03.00 ಗಂಟೆಗೆ ಯಶವಂತಪುರವನ್ನು ತಲುಪಲಿದೆ
ಅಹಮದಾಬಾದ್ ಎಕ್ಸ್‌ಪ್ರೆಸ್‌ ರೈಲಿನ ಸಮಯ ಬದಲಾವಣೆ title=

ಬೆಂಗಳೂರು: ಅಹಮದಾಬಾದ್ - ಯಶವಂತಪುರ - ಅಹಮದಾಬಾದ್ ಎಕ್ಸ್‌ಪ್ರೆಸ್ ರೈಲಿನ ಸಮಯ ಬದಲಾವಣೆಯಾಗಿದೆ ಎಂದು ನೈರುತ್ಯ ರೈಲ್ವೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಈ ಸಂಬಂಧ ಪ್ರಯಾಣ ಬೆಳೆಸುವ ಪ್ರಯಾಣಿಕರು ಸಹಕರಿಸಬೇಕಾಗಿ ಇಲಾಖೆ ಮನವಿ ಮಾಡಿದೆ. 

ಪ್ರತಿ ಭಾನುವಾರ ಯಶವಂತಪುರದಿಂದ ಪ್ರಾರಂಭವಾಗುವ ರೈಲು ನಂ.16502 ಯಶವಂತಪುರ - ಅಹಮದಾಬಾದ್ ಸಾಪ್ತಾಹಿಕ ಎಕ್ಸ್‌ಪ್ರೆಸ್ 27.11.2022 ರಿಂದ ಜಾರಿಗೆ ಬರುವಂತೆ ಸಂಜೆ 04.15 ಗಂಟೆಗೆ ಬರುವ ಬದಲಾಗಿ ಸಂಜೆ 04:45ಕ್ಕೆ ಯಶವಂತಪುರದಿಂದ ಹೊರಡಲಿದೆ.

ಇದನ್ನೂ ಓದಿ- "ಈ ಸರ್ಕಾರಕ್ಕೆ ಕಣ್ಣು, ಕಿವಿ, ಹೃದಯವಿಲ್ಲ"

ಪ್ರತಿ ಗುರುವಾರ ಯಶವಂತಪುರಕ್ಕೆ ಆಗಮಿಸುವ ರೈಲು ಸಂಖ್ಯೆ.16501 ಅಹಮದಾಬಾದ್ - ಯಶವಂತಪುರ ಸಾಪ್ತಾಹಿಕ ಎಕ್ಸ್‌ಪ್ರೆಸ್ 29.11.2022 ರಿಂದ ಜಾರಿಗೆ ಬರುವಂತೆ ಬೆಳಗ್ಗೆ 03.40 ಗಂಟೆಗೆ ಬದಲಾಗಿ ಮುಂಜಾನೆ 03.00 ಗಂಟೆಗೆ ಯಶವಂತಪುರವನ್ನು ತಲುಪಲಿದೆ ಎಂದು ನೈರುತ್ಯ ರೈಲ್ವೇ ವಿಭಾಗದ ಅಧಿಕಾರಿಗಳ ಮಾಹಿತಿಯಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News