ಜಿಮ್‌ಗಳಲ್ಲಿ ಅನಧಿಕೃತ ಪ್ರೊಟೀನ್ ಪೌಡರ್‌ ಮಾರಾಟದ ವಿರುದ್ಧ ಕ್ರಮಕ್ಕೆ ಸೂಚನೆ

ಜಿಮ್‌ಗಳಲ್ಲಿ ಹಾನಿಕಾರಕ ಪ್ರೊಟೀನ್ ಪೌಡರ್‌ ಮಾರಾಟ ನಿಯಂತ್ರಣಕ್ಕೆ ಸರ್ಕಾರ ಮುಂದಾಗಿದ್ದು, ಅನಧಿಕೃತ ಪ್ರೋಟೀನ್ ಪುಡಿ ಮಾರಾಟಮಾಡುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಆರೋಗ್ಯಾಧಿಕಾರಿಗಳು, ಆಹಾರ ಸುರಕ್ಷತಾ ಅಂಕಿತಾಧಿಕಾರಿಗಳಿಗೆ ಸೂಚನೆ ನೀಡಿದೆ.

Written by - Krishna N K | Last Updated : Sep 21, 2022, 01:37 PM IST
  • ಜಿಮ್‌ಗಳಲ್ಲಿ ಹಾನಿಕಾರಕ ಪ್ರೊಟೀನ್ ಪೌಡರ್‌ ಮಾರಾಟ ನಿಯಂತ್ರಣಕ್ಕೆ ಮುಂದಾದ ಸರ್ಕಾರ
  • ಅನಧಿಕೃತ ಪ್ರೋಟೀನ್ ಪುಡಿ ಮಾರಾಟಮಾಡುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಆರೋಗ್ಯಾಧಿಕಾರಿಗಳು, ಆಹಾರ ಸುರಕ್ಷತಾ ಅಂಕಿತಾಧಿಕಾರಿಗಳಿಗೆ ಸೂಚನೆ
  • ಉತ್ಪನ್ನಗಳನ್ನ ಖರೀದಿಸುವ ಮುನ್ನ fssaiindia ಮಾನ್ಯತೆ ನಮೂದಿಸಿರುವ ಬಗ್ಗೆ ತಪ್ಪದೇ ಖಚಿತಪಡಿಸಿಕೊಳ್ಳಲು ಜನರಿಗೆ ಸಲಹೆ
ಜಿಮ್‌ಗಳಲ್ಲಿ ಅನಧಿಕೃತ ಪ್ರೊಟೀನ್ ಪೌಡರ್‌ ಮಾರಾಟದ ವಿರುದ್ಧ ಕ್ರಮಕ್ಕೆ ಸೂಚನೆ title=

ಬೆಂಗಳೂರು : ಜಿಮ್‌ಗಳಲ್ಲಿ ಹಾನಿಕಾರಕ ಪ್ರೊಟೀನ್ ಪೌಡರ್‌ ಮಾರಾಟ ನಿಯಂತ್ರಣಕ್ಕೆ ಸರ್ಕಾರ ಮುಂದಾಗಿದ್ದು, ಅನಧಿಕೃತ ಪ್ರೋಟೀನ್ ಪುಡಿ ಮಾರಾಟ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಆರೋಗ್ಯಾಧಿಕಾರಿಗಳು, ಆಹಾರ ಸುರಕ್ಷತಾ ಅಂಕಿತಾಧಿಕಾರಿಗಳಿಗೆ ಸೂಚನೆ ನೀಡಿದೆ.

ಜಿಮ್‌ಗೆ ಬರುವ ಯುವಕರಿಗೆ ದೇಹವನ್ನು ಹುರಿಗೊಳಿಸುವ ನಿಟ್ಟಿನಲ್ಲಿ ಪ್ರೊಟೀನ್ ಪೌಡರ್ ನೀಡಲಾಗುತ್ತದೆ. ಇವುಗಳಲ್ಲಿ ಕೆಲವೊಂದಿಷ್ಟು ಅನಧಿಕೃತವಾಗಿ ಮಾರಾಟ ಮಾಡಲಾಗುತ್ತಿದೆ. ಈ ಪೌಡರ್‌ ಆರೋಗ್ಯಕ್ಕೆ ಹಾನಿಕಾರಕ. ಸದ್ಯ ಯುವಜನತೆಯ ಆರೋಗ್ಯವನ್ನು ದೃಷ್ಟಿಯಲ್ಲಿಟ್ಟುಕೊಂಡು ಸರ್ಕಾರ ಈ ಕ್ರಮಕೈಗೊಂಡಿದೆ.

ಇದನ್ನೂ ಓದಿ: Apple: ಐಫೋನ್ 14 ಬಿಡುಗಡೆಯ ಬೆನ್ನಲ್ಲೇ ಗ್ರಾಹಕರಿಗೆ ದೊಡ್ಡ ಶಾಕ್ ನೀಡಿದ ಆ್ಯಪಲ್!

ಈ ಕುರಿತು ಟ್ವೀಟ್ ಮೂಲಕ ಮಾಹಿತಿ ನೀಡಿರುವ ಸಚಿವರ ಡಾ.ಕೆ. ಸುಧಾಕರ್ ಅವರು, ಜಿಮ್ ಗಳಲ್ಲಿ ಆರೋಗ್ಯಕ್ಕೆ ಹಾನಿಕರವಾದ ಪ್ರೊಟೀನ್ ಪೌಡರ್ ಮಾರಾಟವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಮಾದರಿ ಸಂಗ್ರಹಗಳನ್ನು ಪರೀಕ್ಷೆಗೊಳಪಡಿಸಿ ಅಗತ್ಯ ಕಾನೂನು ಕ್ರಮ ಜರುಗಿಸಲು ಸೂಚಿಸಲಾಗಿದೆ. ಸಾರ್ವಜನಿಕರು ಸಂಸ್ಕರಿಸಿದ ಆಹಾರ ಉತ್ಪನ್ನಗಳನ್ನ ಖರೀದಿಸುವ ಮುನ್ನ fssaiindia ಮಾನ್ಯತೆ ನಮೂದಿಸಿರುವ ಬಗ್ಗೆ ತಪ್ಪದೇ ಖಚಿತಪಡಿಸಿಕೊಳ್ಳಬೇಕು ಎಂದು ತಿಳಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News