ದೇವರ ಫೋಟೋ ಬದಲು ಅಂಬೇಡ್ಕರ್,ಪುಲೆ ಏಕೆ ಇಟ್ಟುಕೊಂಡಿದ್ದಿರಿ? ಪ್ರೊಫೆಸರ್ ಗೆ ಪೋಲೀಸರ ಪ್ರಶ್ನೆ

ಮಂಗಳವಾರದಂದು ದೇಶಾದ್ಯಂತ ನಕ್ಸಲ್ ಸಂಪರ್ಕ ಹೊಂದಿದ್ದಾರೆ ಎಂದು ಹಲವು  ಬುದ್ಧಿ ಜೀವಿಗಳು, ಮಾನವಹಕ್ಕು ಹೋರಾಟಗಾರರು,ಪ್ರೊಪೆಸರ್ ಮನೆಗಳ ಮೇಲೆ ದಾಳಿ ಮಾಡಲಾಗಿದೆ ಅವರಲ್ಲಿ ಐವರನ್ನು ಬಂಧಿಸಲಾಗಿದೆ.

Last Updated : Aug 29, 2018, 08:14 PM IST
ದೇವರ ಫೋಟೋ ಬದಲು ಅಂಬೇಡ್ಕರ್,ಪುಲೆ ಏಕೆ ಇಟ್ಟುಕೊಂಡಿದ್ದಿರಿ? ಪ್ರೊಫೆಸರ್ ಗೆ  ಪೋಲೀಸರ ಪ್ರಶ್ನೆ title=
Photo:facebook

ನವದೆಹಲಿ: ಮಂಗಳವಾರದಂದು ದೇಶಾದ್ಯಂತ ನಕ್ಸಲ್ ಸಂಪರ್ಕ ಹೊಂದಿದ್ದಾರೆ ಎಂದು ಹಲವು  ಬುದ್ಧಿ ಜೀವಿಗಳು, ಮಾನವಹಕ್ಕು ಹೋರಾಟಗಾರರು,ಪ್ರೊಪೆಸರ್ ಮನೆಗಳ ಮೇಲೆ ದಾಳಿ ಮಾಡಲಾಗಿದೆ ಅವರಲ್ಲಿ ಐವರನ್ನು ಬಂಧಿಸಲಾಗಿದೆ.

ನಿನ್ನೆ ಹೈದರಾಬಾದ್ ನಲ್ಲಿರುವ ಇಎಫ್ಎಲ್ಯು(ಇಫ್ಳು)ವಿವಿಯಲ್ಲಿ ಪ್ರೋಸೆಸರ್ ಆಗಿರುವ  ಕೆ,ಸತ್ಯನಾರಾಯಣ ಅವರು ಮನೆ ಮೇಲೆ ಪೊಲೀಸರು ದಾಳಿ ಮಾಡಿ ಹಲವು ಸಿಡಿ ಇನ್ನಿತರ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಈ ಸಂದರ್ಭದಲ್ಲಿ ಪೊಲೀಸರು ಪ್ರೊಫೆಸರ್ ಅವರನ್ನು ವಿಚಾರಣೆಗೆ  ಒಳಪಡಿಸುತ್ತಾ ವಿಚಿತ್ರ ರೀತಿಯ ಪ್ರಶ್ನೆಗಳನ್ನು ಕೇಳಿದ್ದಾರೆ.ಈ ಕುರಿತಾಗಿ ಪ್ರತಿಕ್ರಿಯಿಸಿರುವ ಪ್ರೊ.ಕೆ ಸತ್ಯನಾರಾಯಣ " ನನ್ನ 30 ವರ್ಷಗಳ ಅಕ್ಯಾಡೆಮಿಕ್ ಜೀವನ ಕೇವಲ ಐದು ನಿಮಿಷಗಳಲ್ಲಿ ಹಾಳಾಗಿ ಹೋಯಿತು. ಅವರು ನನ್ನನ್ನು ಪ್ರಶ್ನಿಸುತ್ತಾ ನೀವೇಕೆ ಮಾವೋ, ಮಾರ್ಕ್ಸ್ ನನ್ನು ಓದುತ್ತಿರುವಿರಿ? ಮತ್ತು ನೀವೇಕೆ ಗದ್ದರ್ ಅವರ ಹಾಡುಗಳನ್ನು ಇಟ್ಟುಕೊಂಡಿರುವಿರಿ? ನೀವೇಕೆ ದೇವ ದೇವತೆಗಳ ಫೋಟೋಗಳ ಬದಲು ಅಂಬೇಡ್ಕರ್,ಪುಲೆ ಫೋಟೋಗಳನ್ನು ಇತ್ತುಕೊಂಡಿರುವಿರಿ? ನೀವೇಕೆ ಬುದ್ದಿಜೀವಿಗಳಾಗಬೇಕು, ನೀವೇಕೆ  ನಿಮಗೆ ಬರುತ್ತಿರುವ ಸಂಬಳದಲ್ಲಿ ನೆಮ್ಮದಿಯಿಂದ ಇರಬಾರದು ಎನ್ನುವುದನ್ನು ಸಹ ಅವರು ಕೇಳಿದರು, ನಾನು ಸಂತಸವಾಗಿದ್ದೇನೆ ಆದರೆ ನಾನು ಓದಬೇಕು ಮತ್ತು ಕಲಿಸಬೇಕು ಎಂದು " ಅವರು ಪ್ರತಿಕ್ರಿಯಿಸಿದರು.

ನಿನ್ನೆ ತೆಲಂಗಾಣ ಮತ್ತು ಮಹಾರಾಷ್ಟ್ರದಲ್ಲಿ ಭೀಮಾ ಕೊರೆಗಾಂ ಹಿಂಸಾಚಾರಕ್ಕೆ ಸಂಪರ್ಕ ಹೊಂದಿದ್ದಾರೆ ಎಂದು ಪೊಲೀಸರು ಆರೋಪಿಸಿ ಬುದ್ದಿ ಜೀವಿಗಳು ಹಾಗೂ ಮಾನವ ಹಕ್ಕು ಹೊರಟಗಾರ ಮನೆಯ ಮೇಲೆ ದಾಳಿ ಮಾಡಿದ್ದಲ್ಲದೆ ಹಲವರನ್ನು ಬಂಧಿಸಿದ್ದರು . 

Trending News