Coronavirus: Face Maskಗಳ ಕುರಿತು ರಾಷ್ಟ್ರೀಯ ಆರೋಗ್ಯ ಸಂಸ್ಥೆ ನೀಡಿರುವ ಈ ಗಂಭೀರ ಮಾಹಿತಿ ನಿಮಗೂ ತಿಳಿದಿರಲಿ

ದೀರ್ಘ ಸಮಯದವರೆಗೆ ಫೇಸ್ ಮಾಸ್ಕ್ ಧರಿಸುವುದು ಆರೋಗ್ಯಕ್ಕೆ ಅಪಾಯಕಾರಿ ಎಂದು ರಾಷ್ಟ್ರೀಯ ಆರೋಗ್ಯ ಸಂಸ್ಥೆ ಬೆಚ್ಚಿಬೀಳಿಸುವ ಮಾಹಿತಿ ಬಹಿರಂಗಪಡಿಸಿದೆ.

Last Updated : May 19, 2020, 04:40 PM IST
Coronavirus: Face Maskಗಳ ಕುರಿತು ರಾಷ್ಟ್ರೀಯ ಆರೋಗ್ಯ ಸಂಸ್ಥೆ ನೀಡಿರುವ ಈ ಗಂಭೀರ ಮಾಹಿತಿ ನಿಮಗೂ ತಿಳಿದಿರಲಿ title=

ನವದೆಹಲಿ: ಕೊರೊನಾ ವೈರಸ್ ವಿರುದ್ಧದ ಹೋರಾಟದಲ್ಲಿ ಒಂದು ವೇಳೆ ನಿಮ್ಮ ಬಳಿ ಫೇಸ್ ಮಾಸ್ಕ ಇದ್ದರೆ, ಸೋಂಕಿನ ಅಪಾಯ ಬಹುತೇಕ ಕಡಿಮೆಯಾಗುತ್ತದೆ ಎಂದು ಹೇಳಲಾಗುತ್ತದೆ. ಹೀಗಾಗಿ ಭಾರತದಲ್ಲಿಯೂ ಕೂಡ ಫೇಸ್ ಮಾಸ್ಕ್ ಧರಿಸುವುದನ್ನು ಇದೀಗ ಕಡ್ಡಾಯಗೊಳಿಸಲಾಗಿದೆ. ಒಂದು ವೇಳೆ ನೀವು ಮನೆಯಿಂದ ಹೊರಗೆ ಹೋಗಲು ಬಯಸುತ್ತಿದ್ದರೆ ನೀವು ಫೇಸ್ ಮಾಸ್ಕ್ ಧರಿಸಿಯೇ ಹೊರಗೆ ಹೋಗಬೇಕು. ಆದರೆ ಇದೇ ಫೇಸ್ ಮಾಸ್ಕ್ ಧಾರಣೆಯ ಕುರಿತು ರಾಷ್ಟ್ರೀಯ ಆರೋಗ್ಯ ಸಂಸ್ಥೆ ಬೆಚ್ಚಿಬೀಳಿಸುವ ಮಾಹಿತಿ ಬಹಿರಂಗಗೊಳಿಸಿದೆ.

ದೀರ್ಘಕಾಲದವರೆಗೆ ನಿರಂತರವಾಗಿ ಫೇಸ್ ಮಾಸ್ಕ್ ಧರಿಸುವುದರಿಂದ ದೇಹದಲ್ಲಿ ಆಮ್ಲಜನಕದ ಕೊರತೆ ಮತ್ತು ರಕ್ತದಲ್ಲಿನ ಇಂಗಾಲದ ಡೈಆಕ್ಸೈಡ್ ಪ್ರಮಾಣವು ಹೆಚ್ಚಾಗುತ್ತದೆ ಎಂಬ ಹಲವಾರು ಪೋಸ್ಟ್‌ಗಳನ್ನು ನಿರಂತರವಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. ಆದರೆ ಮುಖವಾಡಗಳನ್ನು ಅತಿಯಾಗಿ ಬಳಸುವುದರಿಂದ ದೇಹದಲ್ಲಿ ಆಮ್ಲಜನಕದ ಕೊರತೆ ಉಂಟಾಗಬಹುದೇ? ಅಥವಾ ಜನರನ್ನು ಹೆದರಿಸುವ ಸಲುವಾಗಿ ಇಂತಹ ಪೋಸ್ಟ್‌ಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಇಂತಹ ಪೋಸ್ಟ್ ಗಳನ್ನೂ ಹಂಚಿಕೊಳ್ಳಲಾಗುತ್ತಿದೆಯೇ? ಎಂಬ ಪ್ರಶ್ನೆಗಳು ಇದೀಗ ಉದ್ಭವಿಸಿವೆ.

ಈ ಕುರಿತು ಹೇಳಿಕೆ ನೀಡಿರುವ ರಾಷ್ಟ್ರೀಯ ಆರೋಗ್ಯ ಸಂಸ್ಥೆ, ಅನೇಕ ಸಂದರ್ಭಗಳಲ್ಲಿ ಫೇಸ್ ಮಾಸ್ಕ್ ಗಳನ್ನೂ ದೀರ್ಘಕಾಲದವರೆಗೆ ಬಳಸುವುದು ಅಪಾಯಕಾರಿ ಎಂದು ಹೇಳಿದೆ.ಹೆಚ್ಚಿನ ಪ್ರಮಾಣದಲ್ಲಿ ಇಂಗಾಲದ ಡೈಆಕ್ಸೈಡ್‌ನಲ್ಲಿ ಉಸಿರಾಡುವುದು ಮಾರಕವಾಗಬಹುದು. ಅದರಲ್ಲಿರುವ ಹೈಪರ್ ಕ್ಯಾಪ್ನಿಯಾದಿಂದ ತಲೆನೋವು, ತಲೆ ಸುತ್ತುವಿಕೆ, ಕಣ್ಣಿನ ತೊಂದರೆ, ಕಿವಿಯಲ್ಲಿ ಧ್ವನಿ ಬರುವ, ಫೋಕಸ್ ತೊಂದರ ಇತ್ಯಾದಿಗಳಂತಹ ಸಮಸ್ಯೆಗಳು ಎದುರಾಗುತ್ತವೆ ಎಂದು ಸಂಸ್ಥೆ ಹೇಳಿದೆ.

ಈ ಸಮಸ್ಯೆಗಳು ಎದುರಾಗಳು ಕಾರಣ ಏನು?
ಸಾಮಾನ್ಯವಾಗಿ ವಾತಾವರಣದಲ್ಲಿನ ಇಂಗಾಲದ ಡೈಆಕ್ಸೈಡ್ ಪ್ರಮಾಣವು ಶೇ. 0.04 ರಷ್ಟಿರುತ್ತದೆ. ಆದರೆ ಅದೇ ಪ್ರಮಾಣವು ಶೇಕಡಾ 10 ಅಥವಾ ಅದಕ್ಕಿಂತ ಹೆಚ್ಚಾದರೆ  ಅದು ಮಾರಕವಾಗಿ ಪರಿಣಮಿಸುತ್ತದೆ. ನೀವು ಫೇಸ್ ಮಾಸ್ಕ್ ಗಳನ್ನೂ ಧರಿಸಿದಾಗ, ಶ್ವಾಸ ತೆಗೆದುಕೊಳ್ಳುವ ಮತ್ತು ಬಿಡುವ  ಪ್ರಕ್ರಿಯೆಯು ಮುಂದುವರಿಯುತ್ತದೆ. ಈ ಸಮಯದಲ್ಲಿ, ಫೇಸ್ ಮಾಸ್ಕ್ ಗಳ ಕಾರಣ ಆಮ್ಲಜನಕದ ಹರಿವು ಕಡಿಮೆಯಾಗುತ್ತದೆ ಮತ್ತು ಇಂಗಾಲದ ಡೈಆಕ್ಸೈಡ್ ಪ್ರಮಾಣವು ಹೆಚ್ಚಾಗುತ್ತದೆ. ಏಕೆಂದರೆ ನೀವು ಬಿಡುಗಡೆ ಮಾಡುವ ಉಸಿರು ಸ್ವಲ್ಪ ಸಮಯದವರೆಗೆ ಮುಖವಾಡದಲ್ಲಿ ಉಳಿಯುವ ಕಾರಣ ಈ ರೀತಿ ಆಗುತ್ತದೆ. ಇಂತಹ ಸಂದರ್ಭದಲ್ಲಿ ನೀವು ದೇಹದಿಂದ ಹೊರಹಾಕಿದ ಕಾರ್ಬನ್ ಡೈಆಕ್ಸೈಡ್ ನ ಸ್ವಲ್ಪ ಪ್ರಮಾಣವನ್ನು ನೀವು ಪುನಃ ಆಕ್ಸಿಜನ್ ಜೊತೆಗೆ ದೇಹದ ಒಳಗೆ ತೆಗೆದುಕೊಳ್ಳುತ್ತಿರಿ. Co2 ರಕ್ತದಲ್ಲಿನ pH ಪ್ರಮಾಣವನ್ನು ನಿಯಂತ್ರಿಸುತ್ತದೆ.Co2 ಕಾರಣ ರಕ್ತ ಆಮ್ಲೀಯವಾಗುತ್ತದೆ. ರಕ್ತ ಆಮ್ಲೀಯವಾಗುತ್ತಿದ್ದಂತೆ ದೇಹ ಆಮ್ಲಜನಕ ಬಯಸುತ್ತದೆ. ಈ ವೇಳೆ ಸರಿಯಾದ ಪ್ರಮಾಣದಲ್ಲಿ ಆಮ್ಲಜನಕ ಸಿಗದೇ ಹೋದಲ್ಲಿ ಆರೋಗ್ಯ ಸಮಸ್ಯೆಗಳು ಎದುರಾಗುತ್ತವೆ.

ಹಾಗಾದರೆ ಮಾಸ್ಕ್ ಗಳನ್ನು ಹೇಗೆ ಬಳಸಬೇಕು
ಸಾಮಾನ್ಯವಾಗಿ ಆರೋಗ್ಯ ಕಾರ್ಯಕರ್ತರು N95 ಮಾಸ್ಕ್ ಗಳನ್ನು ಬಳಸುತ್ತಾರೆ. ಆದರೆ ಒಂದುವೇಳೆ ನೀವೂ ಕೂಡ ಈ ರೀತಿಯ ಮಾಸ್ಕ್ ಗಳನ್ನು ಬಳಸುತ್ತಿದ್ದರೆ, ಅವುಗಳನ್ನು ಹೆಚ್ಚು ಹೊತ್ತು ಧರಿಸಬೇಡಿ. ಓಡಾಡುವಾಗ ಅಥವಾ  ವಾಯುವಿಹಾರ ಮಾಡುತ್ತಿರುವಾಗ N95 ಮಾಸ್ಕ್ ಗಳನ್ನು ತೆಗೆದು ಇಡಿ.  ಮಾಸ್ಕ್ ಧರಿಸದೆಯೇ ಮನೆಯಿಂದ ಹೊರಗೆ ಹೋಗಬೇಡಿ. ಆದರೆ, ಅಧಿಕ ಹೊತ್ತು ಮತ್ತು ಹೆಚ್ಚು ಟೈಟ್ ಆಗಿ ಅವುಗಳನ್ನು ಧರಿಸಬೇಡಿ. ಮನೆಯಲ್ಲಿಯೇ ತಯಾರಿಸಲಾಗಿರುವ ಮಾಸ್ಕ್ ಗಳು ಹೆಚ್ಚು ಉತ್ತಮವಾಗಿರುತ್ತವೆ. ಏಕೆಂದರೆ ಅವುಗಳಿಂದ ಉಸಿರಾಟದ ತೊಂದರೆ ಉಂಟಾಗುವುದಿಲ್ಲ. ಮನೆಯಲ್ಲಿಯೇ ಮಾಸ್ಕ್ ಗಳನ್ನು ತಯಾರಿಸಲು ಕಾಟನ್ ಬಟ್ಟೆಯನ್ನು ಬಳಸಿ. ಮಾಸ್ಕ್ ಧರಿಸಿದ ಬಳಿಕ ಒಂದು ವೇಳೆ ನಿಮಗೆ ಉಸಿರಾಟಕ್ಕೆ ತೊಂದರೆ  ಆಗುತ್ತಿದ್ದರೆ, ಅವುಗಳನ್ನು ತೆಗೆದು ಹಾಕಿ. ಬಳಿಕ ಸುರಕ್ಷಿತ ಸ್ಥಳದಲ್ಲಿ ವಿಶ್ರಾಂತಿ ಪಡೆದು ಕೂಡಲೇ ವೈದ್ಯರನ್ನು ಸಂಪರ್ಕಿಸಿ.

Trending News