ಅಗ್ಗದ ದರದಲ್ಲಿ ವಿಮಾನ ಪ್ರಯಾಣ ಮಾಡಬೇಕೇ? ಈ ಟಿಪ್ಸ್ ಅನುಸರಿಸಿ

ನೀವು ಯಾವ ಸಮಯದಲ್ಲಿ ಫ್ಲೈಟ್ ಟಿಕೆಟ್ ಬುಕ್ ಮಾಡುತ್ತೀರಿ ಎಂಬುದೂ ಕೂಡ ನಿಮ್ಮ ಟಿಕೆಟ್ ದರದ ಮೇಲೆ ಪ್ರಭಾವ ಬೀರುತ್ತದೆ. ಒಂದು ವೇಳೆ ನೀವು ಬಿಸಿನೆಸ್ ಅವರ್ ನಲ್ಲಿ ಟಿಕೆಟ್ ಬುಕ್ ಮಾಡಿದರೆ, ನೀವು ಹೆಚ್ಚಿಗೆ ಹಣ ನೀಡಬೇಕು.

Last Updated : Jan 9, 2020, 08:41 PM IST
ಅಗ್ಗದ ದರದಲ್ಲಿ ವಿಮಾನ ಪ್ರಯಾಣ ಮಾಡಬೇಕೇ? ಈ ಟಿಪ್ಸ್ ಅನುಸರಿಸಿ title=

ನವದೆಹಲಿ: ಇಂದಿನ ಬ್ಯುಸಿ ಶೆಡ್ಯೂಲ್ ನಲ್ಲಿ ಪ್ರಯಾಣ ಮಾಡಲು ನಿಮಗೆ ಅವಕಾಶ ಸಿಕ್ಕರೆ, ಇದಕ್ಕಿಂತ ಉತ್ತಮವಾದದ್ದು ಏನೂ ಇಲ್ಲ. ನೀವೂ ಸಹ ಪ್ರಯಾಣ ಬೆಳೆಸಲು ಯೋಜನೆ ರೂಪಿಸುತ್ತಿದ್ದರೆ, ನಾವು ನಿಮಗೆ ಅಗ್ಗದ ದರದಲ್ಲಿ ವಿಮಾನ ಟಿಕೆಟ್‌ ಹೇಗೆ ಪಡೆಯಬೇಕು ಎಂಬ  ಮಾರ್ಗವನ್ನು ಹೇಳಲಿದ್ದೇವೆ. ನೀವು ವಿದೇಶಕ್ಕೆ ಹೋಗಲು ಯೋಜನೆ ರೂಪಿಸುತ್ತಿದ್ದರೆ ಮತ್ತು ನೀವು ನಿರೀಕ್ಷಿತ ಹಣಕ್ಕಿಂತ ಕಡಿಮೆ ದರದಲ್ಲಿ ವಿಮಾನ ಟಿಕೆಟ್ ಪಡೆದರೆ ಯೋಚಿಸಿ, ಆಗ ನಿಮ್ಮ ಸಂತೋಷವು ಎರಡರಷ್ಟು ಹೆಚ್ಚಾಗಲಿದೆ. ಇಂದು ನಾವು ಅಂತಹ ಕೆಲವು ಟಿಪ್ಸ್ ಗಳನ್ನು ನಿಮಗೆ ಹೇಳಿಕೊಡಲಿದ್ದೇವೆ, ಈ ಟಿಪ್ಸ್ ಬಳಸಿ ನೀವು ಅಗ್ಗದ ದರದಲ್ಲಿ ಟಿಕೆಟ್‌ಗಳನ್ನು  ಕಾಯ್ದಿರಿಸಬಹುದು.

ಮೊದಲೇ ಪ್ಲಾನ್ ಮಾಡಿ ಟಿಕೆಟ್ ಕಾಯ್ದಿರಿಸಿ
ನಿಮ್ಮ ಪ್ರಯಾಣದ ಕುರಿತು ನೀವು ಮುಂಚಿತವಾಗಿ ಯೋಜನೆ ರೂಪಿಸಿದರೆ, ನೀವು ಅಗ್ಗದ ಟಿಕೆಟ್ ಪಡೆಯುವ ಸಾಧ್ಯತೆಯಿದೆ. ಏಕೆಂದರೆ ನೀವು ನಿಮ್ಮಏರ್ ಟಿಕೆಟ್ ಅನ್ನು ಎಷ್ಟು ಮುಂಚಿತವಾಗಿ ಬುಕ್ ಅದರ ಮೇಲೆ ದರ ಕಡಿಮೆಯಾಗುತ್ತದೆ. ಪ್ರಯಾಣಕ್ಕೂ ಎರಡು ದಿನ ಮೊದಲು ಒಂದು ವೇಳೆ ನೀವು ಟಿಕೆಟ್ ಕಾಯ್ದಿರಿಸಿದರೆ ನೀವು ದುಪ್ಪಟ್ಟು ಹಣ ಪಾವತಿಸಬೇಕಾಗುತ್ತದೆ.

ಕೊಡುಗೆಗಳ ಅಡಿ ನೀವು ಅಗ್ಗದ ಟಿಕೆಟ್ ಬುಕ್ ಮಾಡಬಹುದು
ಕೊಡುಗೆಗಳ ಅಡಿ ಕೂಡ ನೀವು ಅಗ್ಗದ ಟಿಕೆಟ್ ಬುಕ್ ಮಾಡಬಹುದು. ದೇಶದ ಹಲವಾರು ಪ್ರೈವೇಟ್ ಹಾಗೂ ಸರ್ಕಾರಿ ಸ್ವಾಮ್ಯದ ವಿಮಾನಯಾನ ಸಂಸ್ಥೆಗಳು ಕಾಲ ಕಾಲಕ್ಕೆ ಹೊಸ ಹೊಸ ಕೊಡುಗೆಗಳನ್ನು ಘೋಶಿಸುತ್ತವೆ. ಈ ಕೊಡುಗೆಗಳ ಅಡಿ ನೀವು ಅಗ್ಗದ ಬೆಲೆಗೆ ಟಿಕೆಟ್ ಕಾಯ್ದಿರಿಸಬಹುದು. ಆದರೆ, ಈ ಆಫರ್ ಗಳು ಸೀಮಿತ ಅವಧಿಗಾಗಿ ಮಾತ್ರ ಇರುತ್ತವೆ. ಈ ಆಫರ್ ಗಳ ಮೇಲೆ ನೀವು ಕಣ್ಣಿಟ್ಟಿರಬೇಕು. ಆಫರ್ ಗಳು ಬಿಡುಗಡೆಯಾದ ತಕ್ಷಣ ನೀವು ಟಿಕೆಟ್ ಬುಕ್ ಮಾಡಬೇಕು.

ಸಮಯ ಕೂಡ ಫ್ಲೈಟ್ ಗಳ ಬಾಡಿಗೆಯ ಮೇಲೆ ಪರಿಣಾಮ ಬೀರುತ್ತವೆ 
ನೀವು ಯಾವ ಸಮಯದಲ್ಲಿ ಫ್ಲೈಟ್ ಟಿಕೆಟ್ ಬುಕ್ ಮಾಡುತ್ತೀರಿ ಎಂಬುದೂ ಕೂಡ ನಿಮ್ಮ ಟಿಕೆಟ್ ದರದ ಮೇಲೆ ಪ್ರಭಾವ ಬೀರುತ್ತದೆ. ಒಂದು ವೇಳೆ ನೀವು ಬಿಸಿನೆಸ್ ಅವರ್ ನಲ್ಲಿ ಟಿಕೆಟ್ ಬುಕ್ ಮಾಡಿದರೆ, ನೀವು ಹೆಚ್ಚಿಗೆ ಹಣ ನೀಡಬೇಕು. ಒಂದು ವೇಳೆ ನೀವು ತಡರಾತ್ರಿಯ ಅಥವಾ ಬೆಳಗಿನ ಜಾವದ ಟಿಕೆಟ್ ಬುಕ್ ಮಾಡಿದರೆ ನಿಮಗೆ ಅಗ್ಗದ ದರದಲ್ಲಿ ಟಿಕೆಟ್ ಸಿಗುವ ಸಾಧ್ಯತೆ ಇದೆ.

ಆಪ್ ಗಳ ಮೇಲೆ ಸಿಗಲಿದೆ ಹೆಚ್ಚಿನ ರಿಯಾಯಿತಿ
ಇದನ್ನು ಹೊರತುಪಡಿಸಿ ಒಂದು ವೇಳೆ ನೀವು ಮೊಬೈಲ್ ಆಪ್ ಬಳಸಿ ಟಿಕೆಟ್ ಬುಕ್ ಮಾಡಿದರೆ ನಿಮಗೆ ವಿಶೇಷ ಆಫರ್ ಗಳು ಸಿಗುವ ಸಾಧ್ಯತೆ ಇದೆ. ಹಲವು ಬಾರಿ ವಿಮಾನಯಾನ ಅಥವಾ ಆಪ್ ಕಂಪನಿಗಳು ವಿಶೇಷ ಆಫರ್ ಹೊತ್ತು ತರುತ್ತವೆ. ನೀವು ಕೂಡ ಅವುಗಳ ಲಾಭ ಪಡೆಯಬಹುದು. 

ಹಿರಿಯ ನಾಗರಿಕರಿಗೆ ಸಿಗುತ್ತದೆ ವಿಶೇಷ ಡಿಸ್ಕೌಂಟ್
ಟಿಕೆಟ್ ಕಾಯ್ದಿರಿಸುವ ಮುನ್ನ ನೀವು ಯಾರಿಗಾಗಿ ಟಿಕೆಟ್ ಬುಕ್ ಮಾಡುತ್ತಿದ್ದೀರಿ ಎಂಬುದನ್ನು ಮೊದಲು ತಿಳಿದುಕೊಳ್ಳಿ. ಏಕೆಂದರೆ , ಒಂದು ವೇಳೆ ನೀವು ಮಕ್ಕಳಿಗಾಗಿ ಅಥವಾ ಹಿರಿಯ ನಾಗರಿಕರಿಗಾಗಿ ಟಿಕೆಟ್ ಬುಕ್ ಮಾಡುತ್ತಿದ್ದಾರೆ ನಿಮಗೆ ವಿಶೇಷ ರಿಯಾಯಿತಿ ಸಿಗಲಿದೆ. ಮಕ್ಕಳಿಗಾಗಿ ಸ್ಟೂಡೆಂಟ್ ಡಿಸ್ಕೌಂಟ್ ದೊರೆತರೆ, ಹಿರಿಯ ನಾಗರಿಕರಿಗೆ ಸಿನಿಯರ್ ಸಿಟಿಜನ್ ಅಡಿ ಟಿಕೆಟ್ ಪಡೆದು ಈ ರಿಯಾಯಿತಿಯ ಲಾಭ ಪಡೆಯಬಹುದು.

Trending News