Passenger Train: ರೈಲು ಪ್ರಯಾಣಿಕರಿಗೆ 'ಗುಡ್‌ ನ್ಯೂಸ್' ನೀಡಿದ ಕೇಂದ್ರ ರೈಲ್ವೆ ಸಚಿವ!

ಈ ತಿಂಗಳೊಳಗೆ ಶೇಕಡ 85ರಷ್ಟು ಪ್ರಯಾಣಿಕ ರೈಲುಗಳ ಕಾರ್ಯಾರಂಭ ಮಾಡಲಿವೆ

Last Updated : Mar 11, 2021, 07:59 PM IST
  • ಕೇಂದ್ರ ಸರ್ಕಾರ ರೈಲು ಪ್ರಯಾಣಿಕರಿಗೆ ಸಿಹಿ ಸುದ್ದಿ ನೀಡಿದ್ದು
  • ಈ ತಿಂಗಳೊಳಗೆ ಶೇಕಡ 85ರಷ್ಟು ಪ್ರಯಾಣಿಕ ರೈಲುಗಳ ಕಾರ್ಯಾರಂಭ ಮಾಡಲಿವೆ
  • 'ಸಾಮಾನ್ಯ ದಿನಗಳಲ್ಲಿ ಸಾಗಿಸುತ್ತಿದ್ದಕ್ಕಿಂತ ಹೆಚ್ಚಿನ ಪ್ರಮಾಣದ ಸರಕನ್ನ ಈಗ ಸಾಗಿಸಲಾಗ್ತಿದೆ
Passenger Train: ರೈಲು ಪ್ರಯಾಣಿಕರಿಗೆ 'ಗುಡ್‌ ನ್ಯೂಸ್' ನೀಡಿದ ಕೇಂದ್ರ ರೈಲ್ವೆ ಸಚಿವ! title=

ನವದೆಹಲಿ: ಕೇಂದ್ರ ಸರ್ಕಾರ ರೈಲು ಪ್ರಯಾಣಿಕರಿಗೆ ಸಿಹಿ ಸುದ್ದಿ ನೀಡಿದ್ದು, ಈ ತಿಂಗಳೊಳಗೆ ಶೇಕಡ 85ರಷ್ಟು ಪ್ರಯಾಣಿಕ ರೈಲುಗಳ ಕಾರ್ಯಾರಂಭ ಮಾಡಲಿವೆ ಎಂದು ರೈಲ್ವೆ ಸಚಿವ ಪೀಯೂಷ್‌ ಗೋಯಲ್‌ ಹೇಳಿದರು.

ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು(Piyush Goyal), 'ಸದ್ಯ ಉಪನಗರ ರೈಲುಗಳ ಪೈಕಿ ಶೇಕಡ 95ರಷ್ಟು ರೈಲುಗಳು ಸಂಚಾರ ಆರಂಭಗೊಂಡಿದ್ದು, ಶೇ 75ರಷ್ಟು ಮೇಲ್‌ ಹಾಗೂ ಎಕ್ಸ್‌ಪ್ರೆಸ್‌ ರೈಲುಗಳು ಓಡಾಡುತ್ತಿವೆ. ಈ ಪ್ರಮಾಣವನ್ನ ಶೀಘ್ರವೇ ಶೇಕಡ 85ರಷ್ಟು ಹೆಚ್ಚಿಸಲಾಗುವುದು' ಎಂದರು.

ದೆಹಲಿಯಲ್ಲಿ ಎರಡು ತಿಂಗಳ ನಂತರ ದಾಖಲೆಯ 409 ಕೊರೊನಾ ಪ್ರಕರಣ ಹೆಚ್ಚಳ

'ಸಾಮಾನ್ಯ ದಿನಗಳಲ್ಲಿ ಸಾಗಿಸುತ್ತಿದ್ದಕ್ಕಿಂತ ಹೆಚ್ಚಿನ ಪ್ರಮಾಣದ ಸರಕನ್ನ ಈಗ ಸಾಗಿಸಲಾಗ್ತಿದೆ. ಕಳೆದ ವರ್ಷ ಕೋವಿಡ್(Covid)‌ ವ್ಯಾಪಿಸಿದ ಅವಧಿಗೆ ಹೋಲಿಸಿದಾಗ ಪ್ರಸಕ್ತ ಹಣಕಾಸು ವರ್ಷದ ಅಂತ್ಯದ ಒಳಗಾಗಿ 10 ದಶಲಕ್ಷ ಟನ್‌ʼನಷ್ಟು ಅಧಿಕ ಸರಕು ಸಾಗಿಸುವ ನಿರೀಕ್ಷೆಯಿದೆ. ಇನ್ನು ಕಳೆದ ವರ್ಷದ ಮಾರ್ಚ್‌ 9ರ ವರೆಗಿನ ಅವಧಿಗೆ ಹೋಲಿಸಿದರೆ, ಈ ಮಾರ್ಚ್‌ನ ಇದೇ ಅವಧಿಯಲ್ಲಿ ಶೇ 6.75ರಷ್ಟು ಅಧಿಕ ಸರಕು ಸಾಗಣೆ ಮಾಡಲಾಗಿದೆ' ಎಂದು ಹೇಳಿದರು.

YouTube: ಭಾರತದ ಯೂಟ್ಯೂಬರ್​​ಗಳಿಗೆ 'ಬಿಗ್ ಶಾಕ್' ನೀಡಿದ ಗೂಗಲ್!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News