ರೈಲಿನಲ್ಲಿ ಪ್ರಯಾಣಿಸುವಾಗ ನಿಮ್ಮ ಬಳಿ ಈ ಅಧಿಕಾರಗಳು ಇರಲಿವೆ

ರೈಲಿನಲ್ಲಿ ಪ್ರಯಾಣಿಸುವಾಗ ತಮ್ಮ ಪ್ರಯಾಣ ಸುಖಕರವಾಗಬೇಕು ಎಂದು ಎಲ್ಲರು ಬಯಸುತ್ತಾರೆ. ಆದರೆ, ಸಾಮಾನ್ಯವಾಗಿ ಟ್ರೈನ್ ನಲ್ಲಾಗುವ ಸದ್ದು-ಗದ್ದಲ, ಟಿಕೆಟ್ ಚೆಕಿಂಗ್ ಹಾಗೂ ಸೀಟ್ ಗಾಗಿ ಯಾತ್ರಿಗಳು ನಡೆಸುವ ಓಡಾಟದಿಂದ ಪ್ರಯಾಣಿಕರು ತೊಂದರೆಗೆ ಒಳಗಾಗುತ್ತಾರೆ.

Last Updated : Feb 13, 2020, 01:45 PM IST
ರೈಲಿನಲ್ಲಿ ಪ್ರಯಾಣಿಸುವಾಗ ನಿಮ್ಮ ಬಳಿ ಈ ಅಧಿಕಾರಗಳು ಇರಲಿವೆ title=

ರೈಲಿನಲ್ಲಿ ಪ್ರಯಾಣಿಸುವಾಗ ತಮ್ಮ ಪ್ರಯಾಣ ಸುಖಕರವಾಗಬೇಕು ಎಂದು ಎಲ್ಲರು ಬಯಸುತ್ತಾರೆ. ಆದರೆ, ಸಾಮಾನ್ಯವಾಗಿ ಟ್ರೈನ್ ನಲ್ಲಾಗುವ ಸದ್ದು-ಗದ್ದಲ, ಟಿಕೆಟ್ ಚೆಕಿಂಗ್ ಹಾಗೂ ಸೀಟ್ ಗಾಗಿ ಯಾತ್ರಿಗಳು ನಡೆಸುವ ಓಡಾಟದಿಂದ ಪ್ರಯಾಣಿಕರು ತೊಂದರೆಗೆ ಒಳಗಾಗುತ್ತಾರೆ.

ನಿಮ್ಮ ಪ್ರಯಾಣದಲ್ಲಿ ಯಾರು ಅಡ್ಡಿಪಡಿಸಬಾರದು
 ಈ ಕುರಿತು ರೇಲ್ವೆ ವಿಭಾಗ ಕೆಲ ನಿಯಮಗಳನ್ನು ರೂಪಿಸಿದೆ. ರೇಲ್ವೆ ನಿಯಮಗಳ ಪ್ರಕಾರ ಯಾರೂ ಕೂಡ ನಿಮ್ಮ ಸುಖಕರ ಪ್ರವಾಸಕ್ಕೆ ಭಂಗ ತರುವಂತಿಲ್ಲ. ಅಷ್ಟೇ ಯಾಕೆ ರೈಲಿನಲ್ಲಿ ಟಿಕೆಟ್ ಪರಿಶೀಲಿಸುವವರೂ ಕೂಡ ನಿಮ್ಮ ಅನುಮತಿ ಇಲ್ಲದೆ ನಿಮ್ಮನ್ನು ಡಿಸ್ಟರ್ಬ್ ಮಾಡುವಂತಿಲ್ಲ. ಯಾತ್ರೆಯ ವೇಳೆ ಪ್ರಯಾಣಿಕರಿಗೆ ಸಿಗುವ ಅಧಿಕಾರಗಳ ಕುರಿತು ತುಂಬಾ ಕಡಿಮೆ ಜನರಿಗೆ ತಿಳಿದಿರುತ್ತದೆ. ಆದರೆ, ಈ ನಿಯಮಗಳು ತುಂಬಾ ಲಾಭಕಾರಿ ನಿಯಮಗಳಾಗಿದ್ದು, ಅರಿಯದ ಯಾತ್ರಿಗಳು ತೊಂದರೆಗೆ ಸಿಲುಕುತ್ತಾರೆ.

ರಾತ್ರಿ 10 ಗಂಟೆಯ ಬಳಿಕ TTE ಟಿಕೆಟ್ ಚೆಕ್ ಮಾಡುವಂತಿಲ್
ನೀವು ಯಾತ್ರೆ ಮಾಡುವ ಸಂದರ್ಭದಲ್ಲಿ ಟ್ರಾವೆಲ್ ಟಿಕೆಟ್ ಎಕ್ಷಾಮಿನರ್(TTE) ನಿಮ್ಮ ಬಳಿಗೆ ಟಿಕೆಟ್ ಪರಿಶೀಲಿಸಲು ಬರುತ್ತಾರೆ. ಹಲವು ಬಾರಿ ತುಂಬಾ ಲೇಟಾಗಿ ಬಂದು ಅವರು ನಿಮ್ಮನ್ನು ಎಬ್ಬಿಸಿ ಐಡಿ ತೋರಿಸಿ ಎಂದು ಹೇಳುತ್ತಾರೆ. ಆದರೆ, ರಾತ್ರಿ 10ಗಂಟೆಯ ಬಳಿಕ TTE ಕೂಡ ನಿಮಗೆ ಡಿಸ್ಟರ್ಬ ಮಾಡುವಂತಿಲ್ಲ. ಬೆಳಗ್ಗೆ 6 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ಮಾತ್ರ ಅವರು ನಿಮ್ಮ ಬಳಿ ಬಂದು ಟಿಕೆಟ್ ಹಾಗೂ ಇತರೆ ದಾಖಲೆ ಪರಿಶೀಲಿಸಬಹುದು. ರಾತ್ರಿ ಮಲಗಿರುವ ಯಾವುದೇ ಯಾತ್ರಿಗಳನ್ನು ಅವರು ಡಿಸ್ಟರ್ ಮಾಡುವಂತಿಲ್ಲ. ರೇಲ್ವೆ ಬೋರ್ಡ್ ನ ಗೈಡ್ ಲೈನ್ ಈ ರೀತಿ ಹೇಳುತ್ತದೆ. ಆದರೆ, ರಾತ್ರಿ 10ಗಂಟೆಯ ಬಳಿಕ ಪ್ರಯಾಣ ಆರಂಭಿಸುವ ಯಾತ್ರಿಗಳಿಗೆ ಈ ನಿಯಮ ಅನ್ವಯಿಸುವುದಿಲ್ಲ.

ಮಿಡಲ್ ಬರ್ತ್ ನಲ್ಲಿ ಮಲಗುವವರಿಗೆ ಈ ನಿಯಮ
ಸಾಮಾನ್ಯವಾಗಿ ಮಿಡಲ್ ಬರ್ತ್ ನಲ್ಲಿ ಪ್ರಯಾಣ ಬೆಳೆಸುವ ಯಾತ್ರಿಗಳು ಪ್ರಯಾಣ ಆರಂಭವಾಗುತ್ತಿದ್ದಂತೆ ತಮ್ಮ ಬರ್ತ್ ತೆರೆಯುತ್ತಾರೆ. ಇದರಿಂದ ಕೆಳಗಿನ ಬರ್ತ್ ನಲ್ಲಿ ಪ್ರಯಾಣ ಬೆಳೆಸುವ ಅಭ್ಯರ್ಥಿಗಳಿಗೆ ತುಂಬಾ ತೊಂದರೆ ಉಂಟಾಗುತ್ತದೆ. ಮಿಡಲ್ ಬರ್ತ್ ನಲ್ಲಿ ಪ್ರಯಾಣಿಸುವ ಯಾತ್ರಿಗಳಿಗೆ ರಾತ್ರಿ 10 ಗಂಟೆಯಿಂದ ಬೆಳಗ್ಗೆ 6 ಗಂಟೆಯವರೆಗೆ ಮಾತ್ರ ಮಲಗಲು ಅವಕಾಶವಿದೆ. ರಾತ್ರಿ 10ಗಂಟೆಗೂ ಮೊದಲು ಯಾರಾದರು ಮಿಡ್ಲ್ ಬರ್ತ್ ಮೇಲೆ ಮಲಗಿದ್ದರೆ ಅವರನ್ನು ನೀವು ತಡೆಯಬಹುದು. ಅಷ್ಟೇ ಅಲ್ಲ ಬೆಳಗ್ಗೆ 6 ಗಂಟೆಯ ಬಳಿಕ ಅವರು ತಮ್ಮ ಬರ್ತ್ ಅನ್ನು ಕೆಳಕ್ಕೆ ಇಳಿಸಬೇಕು.

ಎರಡು ಸ್ಟಾಪ್ ಗಳ ನಿಯಮ ಏನು?
ಒಂದು ವೇಳೆ ನೀವು ನಿಮ್ಮ ಟ್ರೈನ್ ಮಿಸ್ ಮಾಡಿಕೊಂಡ ಸಂದರ್ಭದಲ್ಲಿ ಮುಂದಿನ ಎರಡು ಸ್ಟಾಪ್ ಅಥವಾ ಮುಂದಿನ ಒಂದು ಗಂಟೆಯವರೆಗೆ TTE ನಿಮ್ಮ ಬರ್ತ್ ಅನ್ನು ಬೇರೆ ಯಾತ್ರಿಗಳಿಗೆ ಅಲಾಟ್ ಮಾಡುವಂತಿಲ್ಲ. ಇದರ ಅರ್ಥ, ಮುಂದಿನ ಎರಡು ಸ್ಟಾಪ್ ಗಳವರೆಗೆ ನೀವು ನಿಮ್ಮ ಟ್ರೈನ್ ಕ್ಯಾಚ್ ಮಾಡಬಹುದು. ಮೂರು ಸ್ಟಾಪ್ ಗಳನ್ನು ದಾಟಿದ ಬಳಿಕ ನಿಮ್ಮ ಬರ್ತ್ ಅನ್ನು ಬೇರೆಯವರಿಗೆ ಅಥವಾ RAC ಪಟ್ಟಿಯಲ್ಲಿ ಇರುವ ಯಾತ್ರಿಗಳಿಗೆ ನೀಡುವ ಅಧಿಕಾರ TTE ಬಳಿ ಇರಲಿದೆ.

ಯಾತ್ರೆ ಬೆಳೆಸುವ ನಿಯಮ ಏನು ಹೇಳುತ್ತದೆ?
ಹಲವು ಬಾರಿ ಪೀಕ್ ಸೀಸನ್ ನಲ್ಲಿ ನೀವು ಹೋಗಬಯಸುವ ಸ್ಥಳದವರೆಗೆ ಟಿಕೆಟ್ ಲಭಿಸುವುದಿಲ್ಲ. ಅಂತಹ ಪರಿಸ್ಥಿತಿಯಲ್ಲಿ ಯಾತ್ರಿಗಳು ಮುಂಚಿತವಾಗಿ ಬರುವ ಕೆಲ ಸ್ಟೇಷನ್ ವರೆಗೆ ಟಿಕೆಟ್ ಬುಕ್ ಮಾಡುತ್ತಾರೆ. ಈ ಸಂದರ್ಭದಲ್ಲಿ ನಿಮ್ಮ ನಿರ್ಧಾರಿತ ಸ್ಟೇಷನ್ ಸಮೀಪಿಸುತ್ತಿದ್ದಂತೆ TTEಗೆ ಸೂಚನೆ ನೀಡಿ ನೀವು ನಿಮ್ಮ ಯಾತ್ರೆಯನ್ನು ಮುಂದುವರೆಸಬಹುದಾಗಿದೆ. ಮುಂದಿನ ಯಾತ್ರೆಗಾಗಿ ತಗಲುವ ವೆಚ್ಚವನ್ನು ನಿಮ್ಮಿಂದ ಪಾವತಿಸಿಕೊಂಡು ನಿಮಗೆ ಟಿಕೆಟ್ ನೀಡಲಿದ್ದಾರೆ. ಈ ವೇಳೆ ಅವರು ನಿಮಗೆ ಬೇರೆ ಬರ್ತ್ ಕೂಡ ನೀಡಲಿದ್ದಾರೆ. ಒಂದು ವೇಳೆ ಖಾಲಿ ಬರ್ತ್ ಸಿಗದ ಸಂದರ್ಭದಲ್ಲಿ ನೀವು ಚೆರ್ ಕಾರ್ ನಲ್ಲಿ ಕುಳಿತು ಪ್ರಯಾಣ ಮುಂದುವರೆಸಬಹುದು.

Trending News