ಈ ರೀತಿ ಗೃಹ ಸಾಲ ಪಡೆಯುವುದು ಹೆಚ್ಚು ಲಾಭಕರ

ಆದಾಯ ತೆರಿಗೆ ಕಾಯ್ದೆಯ ಯಾವ ಸೆಕ್ಷನ್ ಅಡಿ ನಿಮಗೆ ಟ್ಯಾಕ್ಸ್ ಉಳಿತಾಯದ ಲಾಭ ಸಿಗಲಿದೆ ಎಂಬುದನ್ನು ಮೊದಲು ತಿಳಿದುಕೊಳ್ಳಿ. ಆದಾಯ ತೆರಿಗೆ ಕಾಯ್ದೆಯ ಒಟ್ಟು ಎರಡು ಸೆಕ್ಷನ್ ಗಳ ಅಡಿ ನೀವು ತೆರಿಗೆ ಉಳಿತಾಯದ ಲಾಭ ಪಡೆಯಬಹುದಾಗಿದೆ. 

Last Updated : Jan 14, 2020, 02:36 PM IST
ಈ ರೀತಿ ಗೃಹ ಸಾಲ ಪಡೆಯುವುದು ಹೆಚ್ಚು ಲಾಭಕರ title=

ನವದೆಹಲಿ: ಗೃಹ ನಿರ್ಮಾಣ ಅಥವಾ ಫ್ಲಾಟ್ ಖರೀದಿಸುವ ವೇಳೆ ಜನರು ಹೋಂ ಲೋನ್ ಪಡೆಯುವುದು ಸಾಮಾನ್ಯ ಪ್ರಕ್ರಿಯೆ. ಆದರೆ, ನಿಮಗೆ ಸಾಲ ನೀಡುವ ಮುನ್ನ ಬ್ಯಾಂಕ್ ಗಳು ನಿಮ್ಮ ಸಾಲ ಮರುಪಾವತಿ ಕ್ಷಮತೆಯನ್ನು ಆಧರಿಸಿ ಸಾಲ ನೀಡುತ್ತವೆ. ಹೀಗಿರುವಾಗ ಒಂದು ವೇಳೆ ನಿಮಗೆ ಹೆಚ್ಚಿನ ಸಾಲ ಬೇಕಾದಲ್ಲಿ ಜಂಟಿಯಾಗಿ ಗೃಹ ಸಾಲ ಪಡೆಯುವುದು ಉತ್ತಮ. ಈ ರೀತಿಯ ಸಾಲ ಪಡೆಯುವುದರಿಂದ ನೀವು ನಿಮ್ಮ ಸಾಲದ ರಾಶಿ ಕೂಡ ಹೆಚ್ಚಿಸಬಹುದು ಹಾಗೂ ಇದರಿಂದ ನೀವು ಟ್ಯಾಕ್ಸ್ ಉಳಿತಾಯ ಕೂಡ ಮಾಡಬಹುದು. ಅಷ್ಟೇ ಅಲ್ಲ ಇದರಿಂದ ನಿಮ್ಮ ಮೇಲಿನ EMI ಹೊರೆ ಕೂಡ ಕಡಿಮೆಯಾಗುತ್ತದೆ.  ಜಂಟಿಯಾಗಿ ಗೃಹ ಸಾಲ ಪಡೆಯುವುದರಿಂದಾಗುವ ಲಾಭಗಳು ಇಲ್ಲಿವೆ.

ಹೆಚ್ಚಿನ ಸಾಲ ಪಡೆಯಬಹುದು
ಹೋಂ ಲೋನ್ ಪಡೆಯಲು ಜಂಟಿ ಗೃಹ ಸಾಲ ಪಡೆಯುವುದು ಒಂದು ಉತ್ತಮ ಆಯ್ಕೆಯಾಗಿದೆ. ಏಕೆಂದರೆ ಇದು ನಿಮ್ಮ ಟ್ಯಾಕ್ಸ್ ಉಳಿತಾಯ ಮಾಡುತ್ತದೆ. ಸಿಂಗಲ್ ಹೋಂ ಲೋನ್ ನಲ್ಲಿ ಕೇವಲ ಸಾಲ ಪಡೆಯುವರಿಗೆ ಮಾತ್ರ ಟ್ಯಾಕ್ಸ್ ಉಳಿತಾಯದ ಲಾಭ ಸಿಗುತ್ತದೆ. ಆದರೆ, ಜಂಟಿ ಗೃಹ ಸಾಲ ಪಡೆದರೆ, ನಿಮ್ಮ ಪಾರ್ಟ್ನರ್ ಗೂ ಕೂಡ ಟ್ಯಾಕ್ಸ್ ಉಳಿತಾಯದ ಲಾಭ ಸಿಗಲಿದೆ. ಈ ರೀತಿಯ ಸಾಲದಿಂದ ನೀವು ಹೆಚ್ಚಿನ ಪ್ರಮಾಣದ ಸಾಲ ಪಡೆಯಬಹುದು. ಏಕೆಂದರೆ ಬ್ಯಾಂಕ್ ಗಳು ಸಾಲ ನೀಡುವಾಗ ನಿಮ್ಮ ಹಾಗೂ ನಿಮ್ಮ ಪಾರ್ಟ್ನರ್ ಅವರ ಆದಾಯ ಎರಡನ್ನೂ ಪರಿಗಣಿಸುತ್ತವೆ. 

ಹೆಚ್ಚಿನ ಟ್ಯಾಕ್ಸ್ ಉಳಿತಾಯದ ಲಾಭ
ಆದಾಯ ತೆರಿಗೆ ಕಾಯ್ದೆಯ ಯಾವ ಸೆಕ್ಷನ್ ಅಡಿ ನಿಮಗೆ ಟ್ಯಾಕ್ಸ್ ಉಳಿತಾಯದ ಲಾಭ ಸಿಗಲಿದೆ ಎಂಬುದನ್ನು ಮೊದಲು ತಿಳಿದುಕೊಳ್ಳಿ. ಆದಾಯ ತೆರಿಗೆ ಕಾಯ್ದೆಯ ಒಟ್ಟು ಎರಡು ಸೆಕ್ಷನ್ ಗಳ ಅಡಿ ನೀವು ತೆರಿಗೆ ಉಳಿತಾಯದ ಲಾಭ ಪಡೆಯಬಹುದಾಗಿದೆ. ಹೆಚ್ಚಿನ ಗ್ರಾಹಕರು ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80ಸಿ ಹಾಗೂ 24ಬಿ ಅಡಿ ಬಡ್ಡಿದರದಲ್ಲಿ 2ಲಕ್ಷ ರೂ.ವರೆಗೆ ಟ್ಯಾಕ್ಸ್ ಉಳಿತಾಯ ಮಾಡಬಹುದು. ಜೊತೆಗೆ ಪ್ರಿನ್ಸಿಪಲ್ ಅಮೌಂಟ್ ಮೇಲೆ 80ಸಿ ಅಡಿ ಗರಿಷ್ಟ1.5 ಲಕ್ಷ ರೂ.ವರೆಗೆ ಡಿಡಕ್ಷನ್ ಸಿಗುತ್ತದೆ. ಜಂಟಿ ಹೋಂ ಲೋನ್ ಗಾಗಿ ಅರ್ಜಿ ಸಲ್ಲಿಸಿದ ಇಬ್ಬರೂ ಕೂಡ ತೆರಿಗೆ ಉಳಿತಾಯದ ಲಾಭ ಪಡೆಯಬಹುದು. ಆದರೆ, ಅರ್ಜಿ ಸಲ್ಲಿಸುವ ಇಬ್ಬರೂ ಕೂಡ ಮಾಲೀಕರಾದ ವೇಳೆ ಮಾತ್ರ ಈ ತೆರಿಗೆ ಉಳಿತಾಯ ಮಾಡಬಹುದು.

ಮಹಿಳಾ ಅರ್ಜಿದಾರರಿಗೆ ಕಡಿಮೆ ಬಡ್ಡಿದರ
ಸಾಲ ನೀಡುವ ಬಹುತೇಕ ಸಂಸ್ಥೆಗಳು ಮಹಿಳಾ ಅರ್ಜಿದಾರರಿಗೆ ಕಡಿಮೆ ಬಡ್ಡಿ ದರ ನಿಗದಿಪಡಿಸಿವೆ. ಸಾಮಾನ್ಯವಾಗಿ ಮಹಿಳೆಯರಿಗೆ ನೀಡಲಾಗುವ ಬಡ್ಡಿ ಪುರುಷರಿಗೆ ನೀಡಲಾಗುವ ಬಡ್ಡಿ ದರದ ಹೊಲಿಕೆಯಲ್ಲಿ 0.5ರಷ್ಟು ಅಂದರೆ 5 ಬೇಸಿಕ್ ಪಾಯಿಂಟ್ ರಷ್ಟು ಕಡಿಮೆಯಾಗಿರುತ್ತದೆ. ಹೆಚ್ಚಿನ ಬ್ಯಾಂಕ್ ಗಳು, ನಿರ್ಮಿಸಲಾಗುತ್ತಿರುವ ಆಸ್ತಿಯಲ್ಲಿ ಮಹಿಳೆಯರಿಗೆ ಪಾಲುದಾರಿಕೆ ಇದ್ದಾಗ ಮಾತ್ರ ಅವರನ್ನು ಸಹ ಅರ್ಜಿದಾರರು ಎಂದು ಪರಿಗಣಿಸುತ್ತವೆ.

ಸಹೋದರ-ಸಹೋದರಿಗೆ ಒಂದೇ ಬಾರಿಗೆ ಗೃಹಸಾಲ ಸಿಗುವುದಿಲ್ಲ
ಒಂದು ವೇಳೆ ನಿಮ್ಮ ಕುಟುಂಬದಲ್ಲಿ ಇಬ್ಬರು ಆದಾಯ ಗಳಿಸುತ್ತಿದ್ದರೆ, ಅವರಲ್ಲಿ ಸಹೋದರ-ಸಹೋದರಿಯನ್ನು ಹೊರತುಪಡಿಸಿ, ಬ್ಯಾಂಕ್ ಗಳು ತಾಯಿ-ಮಗ, ತಂದೆ-ಮಗ, ತಂದೆ-ಮಗಳು ಅಥವಾ ಪತಿ-ಪತ್ನಿಯರನ್ನು ಜಂಟಿ ಗೃಹ ಸಾಲಕ್ಕೆ ಪರಿಗಣಿಸುತ್ತವೆ. ಸರ್ಕಾರಿ ಸ್ವಾಮ್ಯದ ಬ್ಯಾಂಕ್ ನ ಹಿರಿಯ ಅಧಿಕಾರಿಗಳು ನೀಡುವ ಮಾಹಿತಿ ಪ್ರಕಾರ ಬಹುತೇಕ ಬ್ಯಾಂಕ್ ಗಳು ಸಹೋದರ-ಸಹೋದರಿಗೆ ನೀಡುವುದಿಲ್ಲ ಎಂದು ನೀಡಿದ್ದಾರೆ.

Trending News