ಮುಂಬೈ ವಿಮಾನ ನಿಲ್ದಾಣವನ್ನು ಅದಾನಿ ಸಂಸ್ಥೆಗೆ ಹಸ್ತಾಂತರಿಸಲು ಯಾರ ಒತ್ತಡವೂ ಇರಲಿಲ್ಲ : GVK ಸ್ಪಷ್ಟನೆ

ಮೋದಿ ಸರ್ಕಾರವು CBI ಮತ್ತು ED ಯಂತಹ ಏಜೆನ್ಸಿಗಳನ್ನು ಬಳಸಿಕೊಂಡು GVK ಯಿಂದ "ಭಾರತದ ಅತ್ಯಂತ ಲಾಭದಾಯಕ ವಿಮಾನ ನಿಲ್ದಾಣವನ್ನು" "ಹೈಜಾಕ್" ಮಾಡಿ ಅದನ್ನು ಅದಾನಿಗೆ ನೀಡಿದೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದರು. ಆದರೆ, ಯಾರಿಂದಲೂ ಅಂತಹ ಯಾವುದೇ ರೀತಿಯ ಒತ್ತಡವಿರಲಿಲ್ಲ ಎಂದು ರೆಡ್ಡಿ ತಿಳಿಸಿದ್ದಾರೆ.

Written by - Ranjitha R K | Last Updated : Feb 8, 2023, 03:40 PM IST
  • ಮುಂಬೈ ವಿಮಾನ ನಿಲ್ದಾಣ ಹಸ್ತಾಂತರಕ್ಕೆ ಒತ್ತಡ ಇರಲಿಲ್ಲ - GVK
  • ರಾಹುಲ್ ಗಾಂಧಿ ಆರೋಪ ತಳ್ಳಿ ಹಾಕಿದ GVK
  • ಸಾಲ ಮರುಪಾವತಿ ಅನಿವಾರ್ಯವಾಗಿತ್ತು ಎಂದ ಸಂಸ್ಥೆ
ಮುಂಬೈ ವಿಮಾನ ನಿಲ್ದಾಣವನ್ನು ಅದಾನಿ ಸಂಸ್ಥೆಗೆ ಹಸ್ತಾಂತರಿಸಲು ಯಾರ ಒತ್ತಡವೂ ಇರಲಿಲ್ಲ : GVK ಸ್ಪಷ್ಟನೆ  title=

ನವದೆಹಲಿ : ನರೇಂದ್ರ ಮೋದಿ  ಸರ್ಕಾರ  ಮುಂಬೈ ವಿಮಾನ ನಿಲ್ದಾಣವನ್ನು ಅದಾನಿ ಗ್ರೂಪ್‌ಗೆ ಹಸ್ತಾಂತರಿಸುವಂತೆ ಜಿವಿಕೆಯನ್ನು ಒತ್ತಾಯಿಸಲಿಲ್ಲ ಎಂದು  ಜಿವಿಕೆ ಉಪಾಧ್ಯಕ್ಷ  ಜಿ. ವಿ ಸಂಜಯ್ ರೆಡ್ಡಿ ಸ್ಪಷ್ಟಪಡಿಸಿದ್ದಾರೆ.  ಈ ಬಗ್ಗೆ  ರಾಹುಲ್ ಗಾಂಧಿ ಮಾಡಿರುವ ಆರೋಪವನ್ನು ಅವರು ತಳ್ಳಿ ಹಾಕಿದ್ದಾರೆ. 

ಜುಲೈ 2021 ರಲ್ಲಿ, GVK ಮುಂಬೈ ವಿಮಾನ ನಿಲ್ದಾಣದ ನಿಯಂತ್ರಣವನ್ನು ಅದಾನಿ ಏರ್‌ಪೋರ್ಟ್ ಹೋಲ್ಡಿಂಗ್ಸ್ ಲಿಮಿಟೆಡ್‌ಗೆ ಹಸ್ತಾಂತರಿಸಲಾಗಿತ್ತು. ಮೋದಿ ಸರ್ಕಾರವು CBI ಮತ್ತು ED ಯಂತಹ ಏಜೆನ್ಸಿಗಳನ್ನು ಬಳಸಿಕೊಂಡು GVK ಯಿಂದ "ಭಾರತದ ಅತ್ಯಂತ ಲಾಭದಾಯಕ ವಿಮಾನ ನಿಲ್ದಾಣವನ್ನು" "ಹೈಜಾಕ್" ಮಾಡಿ ಅದನ್ನು ಅದಾನಿಗೆ ನೀಡಿದೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದರು. ಆದರೆ, ಯಾರಿಂದಲೂ ಅಂತಹ ಯಾವುದೇ ರೀತಿಯ ಒತ್ತಡವಿರಲಿಲ್ಲ ಎಂದು ರೆಡ್ಡಿ ತಿಳಿಸಿದ್ದಾರೆ.

ಇದನ್ನೂ ಓದಿ : ಸಂಸತಿನಲ್ಲಿ ಅದಾನಿ ವಿರುದ್ಧ ಗುಡುಗಿದ ರಾಹುಲ್ ಗಾಂಧಿ

ಹೂಡಿಕೆಯ ಮೇಲೆ ಹಲವಾರು ನಿರ್ಬಂಧಗಳು ಇದ್ದವು. ಆಗಲೇ ಕೊರೊನಾ ಮಹಾಮಾರಿ ಶುರುವಾಯಿತು. ವಿಮಾನ ನಿಲ್ದಾಣದ ವ್ಯವಹಾರವನ್ನು ಮೂರು ತಿಂಗಳ ಕಾಲ ಮುಚ್ಚಬೇಕಾಯಿತು. ಇದರಿಂದಾಗಿ ಯಾವುದೇ ರೀತಿಯಲ್ಲಿಯೂ ಹಣ ಗಳಿಕೆ ಸಾಧ್ಯವಾಗಲಿಲ್ಲ. ಇದೇ ವೇಳೆ, ಅದಾನಿ ರೆಡ್ಡಿಯನ್ನು ಸಂಪರ್ಕಿಸಿ,  ಮುಂಬೈ ವಿಮಾನ ನಿಲ್ದಾಣದಲ್ಲಿ ತನಗೆ ತುಂಬಾ ಆಸಕ್ತಿ ಇದೆ ಎಂದು ಹೇಳಿದರು. ಒಂದು ತಿಂಗಳೊಳಗೆ ಸಂಪೂರ್ಣ ವಹಿವಾಟು ಪೂರ್ಣಗೊಳಿಸುವುದಾಗಿ ಭರವಸೆ ನೀಡಿದರೂ. ಈ ಹಿನ್ನೆಲೆಯಲ್ಲಿ  ನಿಯಮಗಳು ಮತ್ತು ಷರತ್ತುಗಳ ಅಡಿಯಲ್ಲಿ ಒಪ್ಪಂದ ಮಾಡಿಕೊಳ್ಳಲಾಯಿತು ಎಂದು ಜಿವಿಕೆ ತಿಳಿಸಿದರು. 

ಕೇಂದ್ರ ಅಥವಾ ಸಿಬಿಐ ಅಥವಾ ಇಡಿ ಯಂತಹ ಏಜೆನ್ಸಿಗಳ ಯಾವುದೇ ಒತ್ತಡವನ್ನು ನಿರಾಕರಿಸಿದ ರೆಡ್ಡಿ, ಜಿವಿಕೆಗೆ ತೀರಾ ಅಗತ್ಯವಿದ್ದ ಹಿನ್ನೆಲೆಯಲ್ಲಿ ಅದಾನಿ ಒಪ್ಪಂದ ನಡೆದಿದೆ ಎಂದು ತಿಳಿಸಿದರು. "ನಾವು ಸಾಲ ಮರುಪಾವತಿ ಮಾಡಬೇಕಾಗಿತ್ತೇ  ಹೊರತು ಬೇರೆಯವರಿಂದ ಒತ್ತಡವಿರಲಿಲ್ಲ ಎಂದು  ಹೇಳಿದರು.

ಇದನ್ನೂ ಓದಿ : Rahul Gandhi : 'ಅದಾನಿ 2014 ರಲ್ಲಿ 609ನೇ ಶ್ರೀಮಂತ, ನಂತರ ಮ್ಯಾಜಿಕ್ ಮೂಲಕ 2ನೇ ಸ್ಥಾನ ತಲುಪಿದ್ದಾರೆ'

ಮೋದಿ ಆಡಳಿತವು ಅದಾನಿಗೆ ಅನುಕೂಲವಾಗುವಂತೆ ಹಲವು ನಿಯಮಗಳನ್ನು ಬದಲಾಯಿಸಿದೆ ಎಂದು ಫೆಬ್ರವರಿ 7 ರಂದು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಆರೋಪಿಸಿದ್ದಾರೆ. "ಪ್ರಧಾನಿ ಮೋದಿ ಅವರು ಆಸ್ಟ್ರೇಲಿಯಾಕ್ಕೆ ಹೋಗುತ್ತಾರೆ ನಂತರ ಎಸ್‌ಬಿಐ ಅದಾನಿಗೆ 1 ಬಿಲಿಯನ್ ಡಾಲರ್ ಸಾಲವನ್ನು ನೀಡುತ್ತದೆ.  ಮೋದಿ ಬಾಂಗ್ಲಾದೇಶಕ್ಕೆ ತೆರಳಿದನಂತರ  ಬಾಂಗ್ಲಾದೇಶದ ವಿದ್ಯುತ್ ಅಭಿವೃದ್ಧಿ ಮಂಡಳಿಯು ಅದಾನಿಯೊಂದಿಗೆ 25 ವರ್ಷಗಳ ಒಪ್ಪಂದಕ್ಕೆ ಸಹಿ ಹಾಕುತ್ತದೆ" ಎಂದು  ಆರೋಪಿಸಿದ್ದರು.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News