ಕೇರಳದ ಜಿಹಾದಿ ಗುಂಪುಗಳಿಗೆ ತುರ್ಕಿ ಹಾಗೂ ದುಬೈನಿಂದ ಹರಿದುಬರುತ್ತಿದೆ ಹಣ

ಈ ಕುರಿತು ಮಾಹಿತಿ ಕೇಳಿರುವ ಕೇಂದ್ರ ಗೃಹ ಸಚಿವಾಲಯ ಕಳೆದ ತಿಂಗಳಿನಿಂದ ಯಾವ ಯಾವ ದೇಶಗಳಿಂದ ಎಷ್ಟು ಎಷ್ಟು ಹಣ ಹರಿದುಬಂದಿದೆ ಎಂದು ಪ್ರಶ್ನಿಸಿದೆ.

Last Updated : Dec 31, 2019, 05:58 PM IST
ಕೇರಳದ ಜಿಹಾದಿ ಗುಂಪುಗಳಿಗೆ ತುರ್ಕಿ ಹಾಗೂ ದುಬೈನಿಂದ ಹರಿದುಬರುತ್ತಿದೆ ಹಣ title=

ನವದೆಹಲಿ: ಟೆರರ್ ಫಂಡಿಂಗ್ ಗೆ ಸಂಬಂಧಿಸದಂತೆ ರಕ್ಷಣಾ ಏಜೆನ್ಸಿಗಳು ತಮ್ಮ ಸತತ ಕಾರ್ಯಾಚರಣೆಗಳನ್ನು ಮುಂದುವರೆಸಿವೆ. ಟೆರರ್ ಫಂಡಿಂಗ್ ಪ್ರಕರಣಗಳಿಗೆ ಸಂಬಂಧಿಸಿದ ಈಗಾಗಲೇ ಹಲವು ಜನರನ್ನು ಬಂಧಿಸಿ ಜೈಲಿಗಟ್ಟಲಾಗಿದೆ. ಏತನ್ಮಧ್ಯೆ ಕೇರಳದ ಹಲವು ಜಿಹಾದಿ ಗುಂಪುಗಳಿಗೆ ತುರ್ಕಿ ಹಾಗೂ ದುಬೈನಿಂದ ಹಣ ಹರಿದುಬರುತ್ತಿದೆ ಎಂದು ಗುಪ್ತಚರ ಇಲಾಖೆಯ ಮೂಲಗಳು ಮಾಹಿತಿ ನೀಡಿವೆ.

ಜಿಹಾದಿ ಸಂಘಟನೆಗೆ ಒಳಪಟ್ಟ ಓರ್ವ ವ್ಯಕ್ತಿ ಟೆರರ್ ಫಂಡಿಂಗ್ ಗೂ ಒಂದು ತಿಂಗಳ ಮೊದಲು ದುಬೈಗೆ ಭೇಟಿ ನೀಡಿದ್ದ ಎಂದು ತಿಳಿದುಬಂದಿದೆ. ಈ ಸಂದರ್ಭದಲ್ಲಿ ಆ ವ್ಯಕ್ತಿಗೆ 40 ಲಕ್ಷ ರೂ.ಗಳ ಸಹಾಯ ನೀಡಲಾಗಿತ್ತು. ಕಳೆದ ಅಕ್ಟೋಬರ್ 1 ರಂದು ಮತ್ತೊಂದು ಜಿಹಾದಿ ಸಂಘಟನೆ ಕತಾರ್ ನಲ್ಲಿ ತುರ್ಕಿ ಮೂಲದ ಕೆಲ ಜನರನ್ನು ಸಂಪರ್ಕಿಸಿತ್ತು ಎನ್ನಲಾಗಿದೆ.  ಈ ವೇಳೆ ಕೇರಳದ ಜಿಹಾದಿ ಸಂಘಟನೆಗಳಿಗೆ ನೆರವು ಒದಗಿಸುವ ಕುರಿತು ಚರ್ಚಿಸಲಾಗಿತ್ತು.

ಟೆರರ್ ಫಂಡಿಂಗ್ ನ ಈ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಗಲ್ಫ್ ದೇಶಗಳಿಂದ ಭಾರತದ ಜಿಹಾದಿ ಸಂಘಟನೆಗಳಿಗೆ ಹರಿದು ಬರುತ್ತಿರುವ ಹಣದ ಕುರಿತು ವಿಸ್ತೃತ ವರದಿ ನೀಡುವಂತೆ ಗುಪ್ತಚರ ಇಲಾಖೆಗೆ, ಕೇಂದ್ರ ಗೃಹ ಸಚಿವಾಲಯ ಸೂಚಿಸಿದೆ. ಈ ಕುರಿತು ಮಾಹಿತಿ ಕೇಳಿರುವ ಕೇಂದ್ರ ಗೃಹ ಸಚಿವಾಲಯ ಕಳೆದ ತಿಂಗಳಿನಿಂದ ಯಾವ ಯಾವ ದೇಶಗಳಿಂದ ಎಷ್ಟು ಎಷ್ಟು ಹಣ ಹರಿದುಬಂದಿದೆ ಎಂದು ಪ್ರಶ್ನಿಸಿದೆ. ಈ ಮಾಹಿತಿಯನ್ನು ಕೂಡಲೇ ನೀಡುವಂತೆ ಸೂಚಿಸಲಾಗಿದೆ. ಮೂಲಗಳಿಂದ ಬಂದ ವರದಿಗಳ ಪ್ರಕಾರ ಯಾವ ಜಿಹಾದಿ ಸಂಘಟನೆಗಳಿಗೆ ಈ ಹಣ ಹರಿದುಬಂದಿದೆ, ಆ ಸಂಧತನೆಗಳು ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ನಡೆಸಲಾದ ಪ್ರತಿಭಟನೆಗಳಲ್ಲಿಯೂ ಕೂಡ ಶಾಮೀಲಾಗಿವೆ ಎನ್ನಲಾಗಿದೆ.

Trending News