ಡ್ರಗ್ಸ್ ಪ್ರಕರಣದಲ್ಲಿ Rhea Chakraborty ಬಂಧನ ಕುರಿತು, ಅಂಕಿತಾ ಲೋಖಂಡೆ ಹೇಳಿದ್ದೇನು?

ಡ್ರಗ್ಸ್ ಪ್ರಕರಣದಲ್ಲಿ ರಿಯಾ ಚಕ್ರವರ್ತಿ ಬಂಧನದ ಕುರಿತು ಮೊದಲ ತನ್ನ ಮೊದಲ ಪ್ರತಿಕ್ರಿಯೆ ನೀಡಿರುವ ಸುಶಾಂತ್ ಸಿಂಗ್ ರಾಜ್ಪುತ್ ಅವರ ಮಾಜಿ ಗೆಳತಿ ಅಂಕಿತಾ ಲೋಖಂಡೆ, ಕರ್ಮ ಭಾಗ್ಯವನ್ನು ನಿರ್ಧರಿಸುತ್ತದೆ ಎಂದು ಹೇಳಿದ್ದಾರೆ.

Last Updated : Sep 8, 2020, 08:16 PM IST
  • ರಿಯಾ ಚಕ್ರವರ್ತಿ ಬಂಧನದ ಕುರಿತು ಮೊದಲ ಪ್ರತಿಕ್ರಿಯೆ ನೀಡಿದ ಅಂಕಿತಾ ಲೋಖಂಡೆ.
  • ಕರ್ಮ ಭಾಗ್ಯವನ್ನು ನಿರ್ಧರಿಸುತ್ತದೆ ಎಂದು ಅಂಕಿತಾ.
  • ಸುಶಾಂತ್ ಪ್ರಕರಣದಲ್ಲಿ ರಿಯಾ ಚಕ್ರವರ್ತಿಯನ್ನು ಬಂಧಿಸಿದ NCB ಅಧಿಕಾರಿಗಳು.
ಡ್ರಗ್ಸ್ ಪ್ರಕರಣದಲ್ಲಿ Rhea Chakraborty ಬಂಧನ ಕುರಿತು, ಅಂಕಿತಾ ಲೋಖಂಡೆ ಹೇಳಿದ್ದೇನು? title=

ನವದೆಹಲಿ: ಡ್ರಗ್ಸ್ ಪ್ರಕರಣದಲ್ಲಿ ರಿಯಾ ಚಕ್ರವರ್ತಿ ಬಂಧನದ ಕುರಿತು ಮೊದಲ ತನ್ನ ಮೊದಲ ಪ್ರತಿಕ್ರಿಯೆ ನೀಡಿರುವ ಸುಶಾಂತ್ ಸಿಂಗ್ ರಾಜ್ಪುತ್ (Sushant Singh Rajput) ಅವರ ಮಾಜಿ ಗೆಳತಿ ಅಂಕಿತಾ ಲೋಖಂಡೆ, ಕರ್ಮ ಭಾಗ್ಯವನ್ನು ನಿರ್ಧರಿಸುತ್ತದೆ ಎಂದು ಹೇಳಿದ್ದಾರೆ.

ಸುಶಾಂತ್ ಸಿಂಗ್ ರಾಜಪುತ್ ಜೊತೆಗೆ ಲಿವ್ ಇನ್ ಪಾರ್ಟ್ನರ್ ಆಗಿದ್ದ ರಿಯಾ ಚಕ್ರವರ್ತಿಯನ್ನು NCB ಅಧಿಕಾರಿಗಳು ಡ್ರಗ್ಸ್ ಪ್ರಕರಣದಲ್ಲಿ ಬಂಧಿಸಿದ್ದಾರೆ. ಈ ಕುರಿತು ಹೇಳಿಕೆ ನೀಡಿರುವ ಅಧಿಕಾರಿಗಳು, ಮೂರು ದಿನಗಳ ವಿಚಾರಣೆಯ ಬಳಿಕ ಆಕೆಯನ್ನು ಬಂಧಿಸಲಾಗಿದೆ.

NCB ಅಧಿಕಾರಿಗಳು ಭಾನುವಾರ ಆರು ಗಂಟೆಗಳ ಕಾಲ ಹಾಗೂ ಸೋಮವಾರ 8 ಗಂಟೆಗಳ ಕಾಲ ವಿಚಾರಣೆ ನಡೆಸಿದ್ದರು. ರಿಯಾ ಸಹೋದರ ಶೋವಿಕ್ ಚಕ್ರವರ್ತಿಯನ್ನು ಈಗಾಗಲೇ ಅಧಿಕಾರಿಗಳು ರಿಮಾಂಡ್ ಮೇಲೆ ತೆಗೆದುಕೊಂಡಿದ್ದಾರೆ. 

ರಿಯಾ ಬಂಧನದ ಬಳಿಕ ತನ್ನ ಟ್ವಿಟ್ಟರ್ ಖಾತೆಯ ಮೂಲಕ ಪ್ರತಿಕ್ರಿಯೆ ನೀಡಿದ್ದ ಸುಶಾಂತ್ ಸಿಂಗ್ ರಾಜ್ಪುತ್ ಸಹೋದರಿ ಶ್ವೇತಾ ಸಿಂಗ್ ಹ್ಯಾಶ್ ಟ್ಯಾಗ್ ಬಳಸಿ "ದೇವರು ನಮ್ಮೊಂದಿಗೆ ಇದ್ದಾನೆ" ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ಮೊದಲಿನಿಂದಲೂ ಕೂಡ ಅಂಕಿತಾ ಲೋಖಂಡೆ ಸುಶಾಂತ್ ಸಿಂಗ್ ಪ್ರಕರಣದಲ್ಲಿ  ನ್ಯಾಯಕ್ಕಾಗಿ ಬೇಡಿಕೆ ಇಡುತ್ತಲೇ ಬಂದಿದ್ದಾರೆ. ಇಂದೂ ಕೂಡ ಸುಶಾಂತ್ ಅವರ ಸಹೋದರಿ ಶ್ವೇತಾ ಸಿಂಗ್ ಟ್ವೀಟ್ ಗೆ ಮರು ಟ್ವೀಟ್ ಮಾಡಿ, ತಾವು ಸುಶಾಂತ್ ಸಿಂಗ್ ಕುಟುಂಬ ಸದಸ್ಯರ ಬೆಂಬಲಕ್ಕೆ ನಿಲ್ಲುವುದಾಗಿ ಹೇಳಿದ್ದಾರೆ.

ಸಾಮಾಜಿಕ ಮಾಧ್ಯಮದ ಮೂಲಕ ಅಂಕಿತಾ ಲೋಖಂಡೆ, ಜಸ್ಟಿಸ್ ಫಾರ್ ಎಸ್.ಎಸ್.ಆರ್ ಎಂದು ನಿರಂತರವಾಗಿ ಬರೆದುಕೊಳ್ಳುತ್ತಿದ್ದಾರೆ . ಇನ್ನೊಂದೆಡೆ ಸುಶಾಂತ್ ಸಿಂಗ್ ರಾಜ್ಪುತ್ ಡಿಪ್ರೆಶನ್ ಗೆ ಬಲಿಯಾಗಿದ್ದರು ಎಂಬುದನ್ನು ಅಂಕಿತಾ ಆರಂಭದಿಂದಲೂ ಕೂಡ ಅಲ್ಲಗಳೇಯುತ್ತಿದ್ದಾರೆ.

Trending News