RRB Level-1 Recruitment 2020: ಅಪ್ರೆಂಟಿಸ್‌ಗಳಿಗೆ 20% ಹುದ್ದೆಗಳನ್ನು ಕಾಯ್ದಿರಿಸಿದ ರೈಲ್ವೆ

RRB Level-1 Recruitment 2020: ಲೆವೆಲ್ -1 ನೇಮಕಾತಿಗಾಗಿ 1,03,769 ಅಧಿಸೂಚನೆ ಹುದ್ದೆಗಳಲ್ಲಿ ಅಪ್ರೆಂಟಿಸ್‌ಗಳಿಗೆ ಶೇ 20 ರಷ್ಟು ಖಾಲಿ ಹುದ್ದೆಗಳನ್ನು ಕಾಯ್ದಿರಿಸಿದೆ ಎಂದು ಭಾರತೀಯ ರೈಲ್ವೆ ಗುರುವಾರ ತಿಳಿಸಿದೆ.

Written by - Yashaswini V | Last Updated : Oct 23, 2020, 02:20 PM IST
  • RRB Level-1 Recruitment 2020: ಲೆವೆಲ್ -1 ನೇಮಕಾತಿ
  • ಲೆವೆಲ್ -1 ನೇಮಕಾತಿಗಾಗಿ 1,03,769 ಅಧಿಸೂಚನೆ ಹುದ್ದೆಗಳಲ್ಲಿ ಅಪ್ರೆಂಟಿಸ್‌ಗಳಿಗೆ ಶೇ 20 ರಷ್ಟು ಖಾಲಿ ಹುದ್ದೆಗಳನ್ನು ಕಾಯ್ದಿರಿಸಿದೆ ಎಂದು ಭಾರತೀಯ ರೈಲ್ವೆ ಗುರುವಾರ ತಿಳಿಸಿದೆ.
RRB Level-1 Recruitment 2020:  ಅಪ್ರೆಂಟಿಸ್‌ಗಳಿಗೆ 20% ಹುದ್ದೆಗಳನ್ನು ಕಾಯ್ದಿರಿಸಿದ ರೈಲ್ವೆ  title=
File Image

RRB Level-1 Recruitment 2020: ಲೆವೆಲ್ -1 ನೇಮಕಾತಿಗಾಗಿ 1,03,769 ಪ್ರಮಾಣೀಕೃತ ಖಾಲಿ ಹುದ್ದೆಗಳಲ್ಲಿ 20 ರಷ್ಟು ಖಾಲಿ ಹುದ್ದೆಗಳನ್ನು ಅಪ್ರೆಂಟಿಸ್‌ಗಳಿಗೆ ಕಾಯ್ದಿರಿಸಲಾಗಿದೆ ಎಂದು ಭಾರತೀಯ ರೈಲ್ವೆ (Indian Railways) ಗುರುವಾರ ತಿಳಿಸಿದೆ. ಅಧಿಕೃತ ಪ್ರಕಟಣೆಯ ಪ್ರಕಾರ, ಈ ಉದ್ಯೋಗ ಅಧಿಸೂಚನೆಗಳ ವಿರುದ್ಧ, 2.40 ಕೋಟಿಗೂ ಹೆಚ್ಚು ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದಾರೆ.

ಅಪ್ರೆಂಟಿಸ್ ಆಕ್ಟ್ 2016 ರ ಪ್ರಕಾರ, ಭಾರತೀಯ ರೈಲ್ವೆ 1,03,769 ರಲ್ಲಿ 20 ರಷ್ಟು ಖಾಲಿ ಹುದ್ದೆಗಳನ್ನು (ಅಂದರೆ 20,734 ಹುದ್ದೆಗಳನ್ನು) ಅಪ್ರೆಂಟಿಸ್‌ಗಳಿಗೆ ಕಾಯ್ದಿರಿಸಿದೆ ಎಂದು ಪ್ರಕಟಣೆ ತಿಳಿಸಿದೆ.

ರೈಲ್ವೆ ತಮ್ಮ ಸಂಸ್ಥೆಗಳಲ್ಲಿ ತರಬೇತಿ ನೀಡಲು ಅಪ್ರೆಂಟಿಸ್‌ಗಳನ್ನು ತೊಡಗಿಸುತ್ತದೆ. ತರಬೇತಿ ಪಡೆದ ಅಪ್ರೆಂಟಿಸ್‌ಗಳು ರೈಲ್ವೆ ಸಂಸ್ಥೆಗಳಲ್ಲಿ ನಿಯಮಿತವಾಗಿ ನೇಮಕ ಮಾಡಬೇಕೆಂದು ಒತ್ತಾಯಿಸಿದ ಪ್ರಕರಣಗಳ ನಂತರ ರೈಲ್ವೆ ಈ ನಿರ್ಧಾರ ಕೈಗೊಳ್ಳಲಾಗಿದೆ. ದೇಶದ ಎಲ್ಲ ಅರ್ಹ ನಾಗರಿಕರು ಸ್ಪರ್ಧಿಸಲು ಮತ್ತು ಅರ್ಜಿ ಸಲ್ಲಿಸಲು ಅರ್ಹರು. ಯಾವುದೇ ಮುಕ್ತ ಸ್ಪರ್ಧೆಯಿಲ್ಲದೆ ನೇರ ನೇಮಕಾತಿ ನಿಯಮಗಳಿಗೆ ವಿರುದ್ಧವಾಗಿದೆ.

ಪ್ರಯಾಣಿಕರೇ ದಯವಿಟ್ಟು ಗಮನಿಸಿ, ರೈಲಿನಲ್ಲಿ ಪ್ರಮುಖ ಬದಲಾವಣೆ

ಇದಲ್ಲದೆ ಅಪ್ರೆಂಟಿಸ್ ಆಕ್ಟ್ 2016 ರಲ್ಲಿ ಮಾಡಿದ ತಿದ್ದುಪಡಿಯ ಪ್ರಕಾರ, ಪ್ರತಿ ಉದ್ಯೋಗದಾತರು ಅದರ ಸ್ಥಾಪನೆಯಲ್ಲಿ ತರಬೇತಿ ಕಾಯ್ದೆ ಅಪ್ರೆಂಟಿಸ್ ನೇಮಕ ನೀತಿಯನ್ನು ರೂಪಿಸಬೇಕಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ಇದನ್ನು ಗಮನದಲ್ಲಿಟ್ಟುಕೊಂಡು, ರೈಲ್ವೆ ಅಂತಹ ಅಪ್ರೆಂಟಿಸ್‌ಗಳಿಗೆ ಲೆವೆಲ್ 1 ನೇಮಕಾತಿಯಲ್ಲಿ (RRB Recruitment) 20 ಪ್ರತಿಶತದಷ್ಟು ಖಾಲಿ ಹುದ್ದೆಗಳನ್ನು ಕಾಯ್ದಿರಿಸಲಾಗಿದೆ ಮತ್ತು ಎಲ್ಲರಿಗೂ ನ್ಯಾಯಯುತ ಅವಕಾಶವನ್ನು ನೀಡುತ್ತದೆ ಎಂದು ಪ್ರಕಟಣೆ ತಿಳಿಸಿದೆ.

ಡಿಸೆಂಬರ್ 22, 2014ರಂದು ತಿದ್ದುಪಡಿ ಮಾಡಲಾದ ಆಕ್ಟ್ ಅಪ್ರೆಂಟಿಸ್ ಆಕ್ಟ್ 1961ರ ಸೆಕ್ಷನ್ 22 (ಐ) ಪ್ರಕಾರ, 'ಪ್ರತಿ ಉದ್ಯೋಗದಾತನು ತನ್ನ ಸ್ಥಾಪನೆಯಲ್ಲಿ ಅಪ್ರೆಂಟಿಸ್‌ಶಿಪ್ ತರಬೇತಿಯ ಅವಧಿಯನ್ನು ಪೂರ್ಣಗೊಳಿಸಿದ ಯಾವುದೇ ಅಪ್ರೆಂಟಿಸ್‌ನನ್ನು ನೇಮಕ ಮಾಡಿಕೊಳ್ಳಲು ತನ್ನದೇ ಆದ ನೀತಿಯನ್ನು ರೂಪಿಸಿಕೊಳ್ಳಬೇಕು ಎಂದು ರೈಲ್ವೆ ಹೇಳಿದೆ .

ಭಾರತೀಯ ರೈಲ್ವೆಯ ಟಿಕೆಟ್ ರಿಸರ್ವೇಶನ್ ನಿಯಮದಲ್ಲಿ ಬದಲಾವಣೆ

2018ರ ಅವಧಿಯಲ್ಲಿ ರೈಲ್ವೆ ನೇಮಕಾತಿ ಮಂಡಳಿಗಳು ಲೆವೆಲ್ -1 ಹುದ್ದೆಗಳಲ್ಲಿ 1288 ಅಪ್ರೆಂಟಿಸ್‌ಗಳನ್ನು ನೇಮಕ ಮಾಡಿಕೊಂಡಿವೆ ಎಂದು ರೈಲ್ವೆ ತಿಳಿಸಿದೆ.

Trending News