ಪ್ರಯಾಣಿಕರಿಗೆ ತೊಂದರೆಯಾಗದಂತೆ ರೈಲ್ವೆ ಭರ್ಜರಿ ತಯಾರಿ : 2 ತಿಂಗಳವರೆಗಿನ ಪ್ಲಾನ್ ರೆಡಿ

ಲಾಕ್ ಡೌನ್ ಮತ್ತು ನಿರುದ್ಯೋಗ ಸಮಸ್ಯೆಯಿಂದ ಸಾಕಷ್ಟು ಜನರು ಊರಿಗೆ ಮುಖ ಮಾಡುತ್ತಿದ್ದಾರೆ. ಇದೇ ವೇಳೆ ಏಪ್ರಿಲ್ ಮತ್ತು ಮೇ ತಿಂಗಳಿನಲ್ಲಿ 330 ಹೆಚ್ಚುವರಿ ರೈಲುಗಳನ್ನು ಓಡಿಸಲು ರೈಲ್ವೆ ಇಲಾಖೆ  ನಿರ್ಧರಿಸಿದೆ.

Written by - Ranjitha R K | Last Updated : Apr 26, 2021, 11:00 AM IST
  • ಕರೋನಾ ಹಿನ್ನೆಲೆಯಲ್ಲಿ ಸಾಕಷ್ಟು ಮುನ್ನೆಚ್ಚರಿಕೆ ವಹಿಸಿರುವ ರೈಲ್ವೆ
  • ಏಪ್ರಿಲ್, ಮೇ ತಿಂಗಳ ಮಟ್ಟಿಗೆ ಹೆಚ್ಚುವರಿ ರೈಲುಗಳ ಸಂಚಾರ
  • ಯಾವುದೇ ಆಪತ್ಕಾಲೀನ ಸ್ಥಿತಿಗೆ ಸಜ್ಜಾಗಿದೆ ರೈಲ್ವೆ
ಪ್ರಯಾಣಿಕರಿಗೆ ತೊಂದರೆಯಾಗದಂತೆ ರೈಲ್ವೆ ಭರ್ಜರಿ ತಯಾರಿ : 2 ತಿಂಗಳವರೆಗಿನ ಪ್ಲಾನ್ ರೆಡಿ  title=
ಕರೋನಾ ಹಿನ್ನೆಲೆಯಲ್ಲಿ ಸಾಕಷ್ಟು ಮುನ್ನೆಚ್ಚರಿಕೆ ವಹಿಸಿರುವ ರೈಲ್ವೆ (file photo)

ನವದೆಹಲಿ : ಕರೋನಾ (Coronavirus) ಎರಡನೇ ಅಲೆ ದೇಶಾದ್ಯಂತ ಹಾಹಾಕಾರ  ಎಬ್ಬಿಸಿದೆ. ದಿನಕ್ಕೆ ಮೂರುವರೆ ಲಕ್ಷಕ್ಕೂ ಅಧಿಕ ಮಂದಿ ಕರೋನಾದಿಂದ ಸಾಂಕ್ರಾಮಿತರಾಗುತ್ತಿದ್ದಾರೆ. ದೇಶದ ದೊಡ್ಡ ದೊಡ್ಡ ನಗರಗಳು ಕರೋನಾ (COVID-19) ಹೊಡೆತಕ್ಕೆ ಸಿಕ್ಕಿ ತತ್ತರಿಸಿ ಹೋಗಿದೆ.  ಹಾಗಾಗಿ ಈ ನಗರಗಳಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರು ಮತ್ತೆ ತಮ್ಮ ಊರಿಗೆ ಮರಳುವ ಮನಸ್ಥಿತಿಯಲ್ಲಿದ್ದಾರೆ. ಕಳೆದ ವರ್ಷವೂ ಇದೇ ಸನ್ನಿವೇಶ ಸೃಷ್ಟಿಯಾಗಿತ್ತು. ಲಾಕ್ ಡೌನ್ (Lockdown) ಕಾರಣದಿಂದಾಗಿ ಊರಿಗೆ ಹೋಗಲು ಸರಿಯಾದ ಮೂಲಸೌಕರ್ಯ ಸಿಗದೆ ವಲಸೆ ಕಾರ್ಮಿಕರು ಸಾಕಷ್ಟು ಸಮಸ್ಯೆಗಳನ್ನೆದುರಿಸಿದ್ದರು. ಕಳೆದ ವರ್ಷದ ಕೆಟ್ಟ ಅನುಭವದಿಂದ ಪಾಠ ಕಲಿತಿರುವ ರೈಲ್ವೆ ಇಲಾಖೆ, ಈ ವರ್ಷ ಕೂಡಾ ಅದೇ ರೀತಿಯ ವಾತಾವರಣ ಸೃಷ್ಟಿಯಾಗದಂತೆ ಮಾಡಲು ಹಲವು ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದೆ.  ಮುಂದಿನ  ಎರಡು ತಿಂಗಳ ಮಟ್ಟಿಗೆ ರೈಲ್ವೆ ಪ್ಲಾನ್ ತಯಾರು ಮಾಡಿದ್ದು, ಯಾವುದೇ ಅಪತ್ಕಾಲ  ಎದುರಿಸಲು ಸಜ್ಜಾಗಿದೆ.

ಸಂಚರಿಸಲಿದೆ 330 ಹೆಚ್ಚುವರಿ ರೈಲು :
ಲಾಕ್ ಡೌನ್ (Lockdown) ಮತ್ತು ನಿರುದ್ಯೋಗ ಸಮಸ್ಯೆಯಿಂದ ಸಾಕಷ್ಟು ಜನರು ಊರಿಗೆ ಮುಖ ಮಾಡುತ್ತಿದ್ದಾರೆ. ಇದೇ ವೇಳೆ ಏಪ್ರಿಲ್ ಮತ್ತು ಮೇ ತಿಂಗಳಿನಲ್ಲಿ 330 ಹೆಚ್ಚುವರಿ ರೈಲುಗಳನ್ನು ಓಡಿಸಲು ರೈಲ್ವೆ ಇಲಾಖೆ (Railway) ನಿರ್ಧರಿಸಿದೆ.  ರೈಲುಗಳು 674 ಹೆಚ್ಚುವರಿ ಟ್ರಿಪ್ ಮಾಡಲಿವೆ. ಯಾವ ರೂಟ್ ನಲ್ಲಿ ಬೇಡಿಕೆ ಹೆಚ್ಚಿದೆಯೋ ಅದೇ ರೂಟಿನಲ್ಲಿ ಸರ್ವಿಸ್ ಹೆಚ್ಚಾಗಲಿದೆ.  ಭಾರತೀಯ ರೈಲ್ವೆ (Indian Railway) ಈ ಹೊತ್ತಿನಲ್ಲಿ 1514 ವಿಶೇಷ ರೈಲುಗಳನ್ನು ಓಡಿಸುತ್ತಿದೆ. 5387 ಸಬ್ ಅರ್ಬನ್ ರೈಲುಗಳು ಕೂಡಾ ಓಡುತ್ತಿವೆ. 984 ಪ್ಯಾಸೆಂಜರ್ ರೈಲು , 28 ಸ್ಪೆಷಲ್ ರೈಲು  ಈ ಹೊತ್ತಿನಲ್ಲಿ ಓಡುತ್ತಿದೆ.

ಇದನ್ನೂ ಓದಿ : Covid-19 : ಕೊರೋನಾ ಪ್ರಕರಣದಲ್ಲಿ 'ವಿಶ್ವ ದಾಖಲೆ' ಬರೆದ ಭಾರತ..!

ಎಲ್ಲಿಂದ ಎಷ್ಟು ರೈಲು..?
ರೈಲೆಯು 330 ಹೆಚ್ಚುವರಿ ರೈಲುಗಳ ಘೋಷಣೆ ಮಾಡಿದೆ. ಇದರಲ್ಲಿ ಸೆಂಟ್ರಲ್ ರೈಲ್ವೆ (Central railway) 143, ವೆಸ್ಟರ್ನ್ ರೈಲ್ವೆ 154, ನಾರ್ದರ್ನ್ ರೈಲ್ವೆ 27, ಈಸ್ಟರನ್ ರೈಲ್ವೆ2, ನಾರ್ಥ್ ಈಸ್ಟರನ್ 9,  ನಾರ್ಥ್ ಸೆಂಟ್ರಲ್ ರೈಲ್ವೆ 1 ರೈಲು ಮತ್ತು ಸೌತ್ ವೆಸ್ಟರ್ನ್ ರೈಲ್ವೆ 3 ರೈಲನ್ನು ಓಡಿಸುತ್ತಿದೆ. 

ಇದನ್ನೂ ಓದಿ : ವ್ಯಾಕ್ಸಿನ್ ಗಾಗಿ ಕೊವಿನ್ ಪೋರ್ಟಲಿನಲ್ಲಿ ಹೆಸರು ನೊಂದಾಯಿಸುವುದು ಹೇಗೆ..?

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News