Railway New Guidelines: ಹಿರಿಯ ನಾಗರಿಕರಿಗೆ ಭಾರಿ ಉಡುಗೊರೆ ನೀಡಿದ ಭಾರತೀಯ ರೇಲ್ವೆ

IRCTC: ಭಾರತೀಯ ರೈಲ್ವೇ ಹಿರಿಯ ನಾಗರಿಕರಿಗೆ ಭರ್ಜರಿ ಗಿಫ್ಟ್ ನೀಡಿದೆ. ಈ ಉದಿಗೊರೆಯ ಬಳಿಕ ಇದೀಗ ಹಿರಿಯ ನಾಗರಿಕರು ಸುಲಭವಾಗಿ ಲೋವರ್ ಬರ್ತ್ ದೃಢೀಕರಿಸಲು ಸಾಧ್ಯವಾಗಲಿದೆ.  

Written by - Nitin Tabib | Last Updated : Oct 27, 2022, 01:26 PM IST
  • ತಿದಿನ ಲಕ್ಷಾಂತರ ಪ್ರಯಾಣಿಕರು ಭಾರತೀಯ ರೈಲ್ವೆಯ ಸಹಾಯದಿಂದ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಪ್ರಯಾಣಿಸುತ್ತಾರೆ.
  • ಅವರಿಗಾಗಿ ರೈಲ್ವೆ ನಿರಂತರವಾಗಿ ತನ್ನ ಸೇವೆಗಳನ್ನು ನವೀಕರಿಸುತ್ತದೆ.
  • ಅದೇ ರೀತಿ, IRCTC ಕೂಡ ಹೊಸ ನಿಯಮಗಳನ್ನು ಮಾಡುತ್ತದೆ ಮತ್ತು ಹಳೆಯ ನಿಯಮಗಳನ್ನು ಸಡಿಲಿಸುತ್ತದೆ.
Railway New Guidelines: ಹಿರಿಯ ನಾಗರಿಕರಿಗೆ ಭಾರಿ ಉಡುಗೊರೆ ನೀಡಿದ ಭಾರತೀಯ ರೇಲ್ವೆ title=
Indian Railways Update

Indian Railways: ಪ್ರತಿದಿನ ಲಕ್ಷಾಂತರ ಪ್ರಯಾಣಿಕರು ಭಾರತೀಯ ರೈಲ್ವೆಯ ಸಹಾಯದಿಂದ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಪ್ರಯಾಣಿಸುತ್ತಾರೆ. ಅವರಿಗಾಗಿ ರೈಲ್ವೆ ನಿರಂತರವಾಗಿ ತನ್ನ ಸೇವೆಗಳನ್ನು ನವೀಕರಿಸುತ್ತದೆ. ಅದೇ ರೀತಿ, IRCTC ಕೂಡ ಹೊಸ ನಿಯಮಗಳನ್ನು ಮಾಡುತ್ತದೆ ಮತ್ತು ಹಳೆಯ ನಿಯಮಗಳನ್ನು ಸಡಿಲಿಸುತ್ತದೆ. ಆದಾಗ್ಯೂ, ಇನ್ನೂ ಅನೇಕ ಪ್ರಯಾಣಿಕರು ವಿವಿಧ ರೀತಿಯ ದೂರುಗಳನ್ನು ನೀಡುತ್ತಲೇ ಇರುತ್ತಾರೆ. ಈ ದೂರುಗಳಲ್ಲಿ ಸುಲಭವಾಗಿ ಲೋವರ್ ಬರ್ತ್ ಸಿಗುವುದಿಲ್ಲ ಎಂಬ ಹಿರಿಯ ನಾಗರಿಕರ ದೂರೂ ಕೂಡ ಶಾಮೀಲಾಗಿದೆ. 

ಇತ್ತೀಚಿಗೆ ಟ್ವಿಟ್ಟರ್ ಬಳಕೆದಾರರೊಬ್ಬರು, 'ನಾನು ನಿನ್ನೆ ಸಂಜೆ (PNR 2448407929) ನನ್ನ ಚಿಕ್ಕಪ್ಪನಿಗೆ ಟಿಕೆಟ್ ಬುಕ್ ಮಾಡಿದ್ದೇನೆ ಎಂದು ಟ್ವೀಟ್ ಮಾಡಿದ್ದಾರೆ, ಅದರಲ್ಲಿ ಅವರು ಮೇಲಿನ ಅಥವಾ ಮಧ್ಯಮ ಬರ್ತ್ ಆಯ್ಕೆಯನ್ನು ನೀಡಿದ್ದರಿಂದ ನಾನು ಮೊದಲ ಆದ್ಯತೆಯಲ್ಲಿ ಲೋವರ್ ಬರ್ತ್ ಅನ್ನು ಆರಿಸಿದೆ. ಏಕೆಂದರೆ ಮೇಲಿನ ಬರ್ತ್ ಗಳಲ್ಲಿ ಪ್ರಯಾಣಿಸಲು ಅವರಿಂದ ಸಾಧ್ಯವಿಲ್ಲ. ಆದರೆ ಇದರ ಹೊರತಾಗಿಯೂ, ನನಗೆ ಮೇಲಿನ ಸ್ಥಾನ ದೊರೆತಿದೆ' ಎಂದು ಹೇಳಿದ್ದಾರೆ.

ಈ ಟ್ವೀಟ್‌ಗೆ ಪ್ರತಿಕ್ರಿಯೆಯಾಗಿ, ಆ ವ್ಯಕ್ತಿಗೆ ಏಕೆ ಲೋವರ್ ಬರ್ತ್ ಸಿಗಲಿಲ್ಲ ಎಂದು IRCTC ವಿವರಿಸಿದೆ. IRCTC ತನ್ನ ಟ್ವೀಟ್‌ನಲ್ಲಿ, 'ಸರ್, PNR ನಂ. 2448407929 ಅನ್ನು ಸಾಮಾನ್ಯ ಕೋಟಾದಡಿ ಕಾಯ್ದಿರಿಸಲಾಗಿದೆ. ನೀವು ಸಾಮಾನ್ಯ ಕೋಟಾದಲ್ಲಿ ಕೆಳಗಿನ ಬರ್ತ್‌ಗೆ ಆದ್ಯತೆ ನೀಡಬಹುದು ಆದರೆ ಬರ್ತ್‌ಗಳ ಹಂಚಿಕೆಯು ಲಭ್ಯತೆಗೆ ಒಳಪಟ್ಟಿರುತ್ತದೆ. ಇದರ ಬದಲು ನೀವು ಮೀಸಲಾತಿಯ ಅಡಿಯಲ್ಲಿ ಲೋವರ್ ಬರ್ತ ಆಯ್ಕೆಯನ್ನು ಆಯ್ಕೆ ಮಾಡಬಹುದು' ಎಂದು ಹೇಳಿದೆ.

ಇದನ್ನೂ ಓದಿ-Good News: ದೇಶಾದ್ಯಂತದ ಬ್ಯಾಂಕ್ ನೌಕರರಿಗೊಂದು ಭಾರಿ ಸಂತಸದ ಸುದ್ದಿ!

ಮತ್ತೊಂದು ಟ್ವೀಟ್‌ನಲ್ಲಿ, ಹೆಚ್ಚಿನ ಮಾಹಿತಿ ನೀಡಿರುವ IRCTC, "ಸಾಮಾನ್ಯ ಕೋಟಾದಲ್ಲಿ ಲೋವರ್ ಬರ್ತ್‌ಗಳ ಹಂಚಿಕೆಯು ಸಂಪೂರ್ಣವಾಗಿ ಲಭ್ಯತೆಗೆ ಒಳಪಟ್ಟಿರುತ್ತದೆ ಮತ್ತು ಯಾವುದೇ ಮಾನವ ಹಸ್ತಕ್ಷೇಪವಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ. ಅಲ್ಲದೆ, ನಿರ್ಗತಿಕರಿಗೆ ಖಾಲಿ ಇರುವ ಲೋವರ್ ಬರ್ತ್‌ಗಳನ್ನು ಒದಗಿಸಲು ಅಧಿಕಾರ ಹೊಂದಿರುವ ಆನ್ ಡ್ಯೂಟಿ ಟಿಟಿಇಯನ್ನು ನೀವು ಸಂಪರ್ಕಿಸಬಹುದು…" ಎಂದು ಹೇಳಿದೆ.

ಇದನ್ನೂ ಓದಿ-7th Pay Commission: ತುಟ್ಟಿ ಭತ್ಯೆ ಪರಿಹಾರಕ್ಕೆ ಸಂಬಂಧಿಸಿದಂತೆ ಸ್ಪಷ್ಟೀಕರಣ ನೀಡಿದ ಕೇಂದ್ರ ಸರ್ಕಾರ ಹೇಳಿದ್ದೇನು?

ನಿಯಮಗಳ ಪ್ರಕಾರ, ಹಿರಿಯ ನಾಗರಿಕರಿಗೆ ಸ್ಲೀಪರ್ ವರ್ಗವನ್ನು ಮೀಸಲಿಟ್ಟಿರುವ ಎಲ್ಲಾ ರೈಲುಗಳಲ್ಲಿ ಸ್ಲೀಪರ್ ಕ್ಲಾಸ್‌ನಲ್ಲಿ ಆರು ಲೋವರ್ ಬರ್ತ್‌ಗಳು ಮತ್ತು ಎಸಿ-3 ಟೈರ್ ಮತ್ತು ಎಸಿ-2 ಟೈರ್ ಕ್ಲಾಸ್‌ನಲ್ಲಿ 3 ಲೋವರ್ ಬರ್ತ್‌ಗಳನ್ನು ನಿಗದಿಪಡಿಸಲಾಗಿದೆ. ಇದೇ ವೇಳೆ ರೈಲು ನಿರ್ಗಮನದ ನಂತರ ಯಾವುದೇ ಕೆಳಗಿನ ಬರ್ತ್‌ಗಳು ಖಾಲಿಯಾಗಿದ್ದರೆ, ಮೇಲಿನ ಅಥವಾ ಮಧ್ಯಮ ಬರ್ತ್ ಪಡೆದ ಯಾವುದೇ ಅಂಗವಿಕಲರು, ಹಿರಿಯ ನಾಗರಿಕರು ಅಥವಾ ಗರ್ಭಿಣಿಯರ ಕೋರಿಕೆಯ ಮೇರೆಗೆ ಅದನ್ನು ಅವರಿಗೆ ನೀಡಬಹುದು. ಚಾರ್ಟ್‌ನಲ್ಲಿ ಅಗತ್ಯ ಬದಲಾವಣೆಗಳನ್ನು ಮಾಡುವ ಮೂಲಕ ಆನ್-ಬೋರ್ಡ್ ಟಿಕೆಟ್ ತಪಾಸಣೆ ಸಿಬ್ಬಂದಿ. ಕೆಳಗೆ ಸೀಟುಗಳನ್ನು ಹಂಚಿಕೆ ಮಾಡಬಹುದು ಎಂದು IRCTC ಹೇಳಿದೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News