ಎಸ್​ಬಿಐನಲ್ಲಿ PPF ತೆರೆಯಲು ಯೋಚಿಸುತ್ತಿರುವಿರೇ? ಹಾಗಿದ್ದರೆ ಈ 5 ವಿಷಯಗಳನ್ನು ತಿಳಿದುಕೊಳ್ಳಿ

ಪಿಪಿಎಫ್ ನಲ್ಲಿ ಹೂಡಿಕೆ ಮಾಡುವುದರಿಂದ ಉತ್ತಮ ಆದಾಯವನ್ನು ಪಡೆಯಬಹುದು. 

Last Updated : Jun 5, 2019, 12:37 PM IST
ಎಸ್​ಬಿಐನಲ್ಲಿ PPF ತೆರೆಯಲು ಯೋಚಿಸುತ್ತಿರುವಿರೇ? ಹಾಗಿದ್ದರೆ ಈ 5 ವಿಷಯಗಳನ್ನು ತಿಳಿದುಕೊಳ್ಳಿ title=

ನವದೆಹಲಿ: ಪಿಪಿಎಫ್ (ಪಬ್ಲಿಕ್ ಪ್ರಾವಿಡೆಂಟ್ ಫಂಡ್) ಹೂಡಿಕೆಯ ವಿಷಯದಲ್ಲಿ ಉತ್ತಮ ಮತ್ತು ಸುರಕ್ಷಿತ ಆಯ್ಕೆಯಾಗಿದೆ. ರಿಟರ್ನ್ಸ್ ಕೂಡ ಇಲ್ಲಿ ಉತ್ತಮವಾಗಿದೆ ಮತ್ತು ಹೂಡಿಕೆದಾರರು ಮಾರುಕಟ್ಟೆಯ ಪ್ರಕ್ಷುಬ್ಧತೆಯಿಂದ ಸುರಕ್ಷಿತವಾಗಿರುತ್ತಾರೆ. ಅಷ್ಟೇ ಅಲ್ಲದೆ ತೆರಿಗೆ ಪ್ರಯೋಜನಗಳು ಸಹ ಲಭ್ಯವಿದೆ. ಎಲ್ಲಾ ಬ್ಯಾಂಕುಗಳು ಮತ್ತು ಅಂಚೆ ಕಚೇರಿಗಳು PPF ಅನ್ನು ನೀಡುತ್ತವೆ. ಈ ಲೇಖನದಲ್ಲಿ, ಎಸ್​ಬಿಐನಲ್ಲಿ ಪಿಪಿಎಫ್ ತೆರೆಯುವ ಪ್ರಯೋಜನಗಳ ಬಗ್ಗೆ ಒಂದಿಷ್ಟು ಮಾಹಿತಿ ಸಿಗಲಿದೆ.

1. ಪಿಪಿಎಫ್ ಖಾತೆಯಲ್ಲಿ ವಾರ್ಷಿಕವಾಗಿ ಕನಿಷ್ಠ 500 ರೂಪಾಯಿ ಮತ್ತು ಗರಿಷ್ಠ 1.5 ಲಕ್ಷ ರೂಪಾಯಿ ಠೇವಣಿ ಮಾಡಬಹುದು. ಇದಕ್ಕಿಂತ ಹೆಚ್ಚು ಹಣವನ್ನು ಇಡುವುದರ ಮೇಲೆ ಹೆಚ್ಚಿನ ಬಡ್ಡಿ ದೊರೆಯುವುದಿಲ್ಲ ಮತ್ತು ತೆರಿಗೆ ಪ್ರಯೋಜನ ಲಭ್ಯವಿಲ್ಲ. ಮೊತ್ತವನ್ನು ಏಕಕಾಲದಲ್ಲಿ ಮತ್ತು ಪ್ರತಿ ತಿಂಗಳು ಜಮಾ ಮಾಡಬಹುದು.

2. ಬಡ್ಡಿದರ - ಪಿಪಿಎಫ್ ಮೇಲಿನ ಬಡ್ಡಿದರವನ್ನು ಪ್ರತಿ ಮೂರು ತಿಂಗಳಲ್ಲಿ ಆರ್ಬಿಐ ನಿರ್ಧರಿಸುತ್ತದೆ. ಪ್ರಸ್ತುತ, ಪಿಪಿಎಫ್ ಮೇಲೆ 8 ಪ್ರತಿಶತ ಬಡ್ಡಿದರ ನೀಡಲಾಗುತ್ತಿದೆ. ಪಿಪಿಎಫ್ ಖಾತೆಯ ಮೇಲಿನ ಬಡ್ಡಿಯು, ತಿಂಗಳ 5 ನೇ ತಾರೀಖಿನಿಂದ ತಿಂಗಳ ಕೊನೆ ದಿನದವರೆಗೆ ಲೆಕ್ಕಹಾಕಲಾಗುತ್ತದೆ. ಪ್ರತಿ ವರ್ಷ ಮಾರ್ಚ್ 31 ರಂದು ಬಡ್ಡಿಯನ್ನು ಪಾವತಿ ಮಾಡಲಾಗುತ್ತದೆ.

3. PPF ಖಾತೆಯು 15 ವರ್ಷಗಳಿಗೆ ಇರಲಿದೆ. ನಂತರ, ಅದನ್ನು ಐದು ವರ್ಷಗಳವರೆಗೆ ಹೆಚ್ಚಿಸಬಹುದು.

4. ಆದಾಯ ತೆರಿಗೆ ಕಾಯಿದೆಯ ವಿಭಾಗ 88 ರ ಅಡಿಯಲ್ಲಿ ತೆರಿಗೆ ಪ್ರಯೋಜನಗಳು ದೊರೆಯುತ್ತದೆ. ಇದರಿಂದ ದೊರೆಯುವ ಬಡ್ಡಿ ತೆರಿಗೆ ಮುಕ್ತವಾಗಿದೆ.

5. ಐದು ವರ್ಷಗಳು ಪೂರ್ಣಗೊಳ್ಳುವ ಮೊದಲು PPF ಖಾತೆಯಿಂದ ಹಣವನ್ನು ಹಿಂಪಡೆಯಲು ಸಾಧ್ಯವಿಲ್ಲ.
 

Trending News