ನವೆಂಬರ್ 9ಕ್ಕೆ ಪ್ರಧಾನಿ ಮೋದಿಯಿಂದ ಕರ್ತಾರ್‌ಪುರ ಕಾರಿಡಾರ್ ಉದ್ಘಾಟನೆ

ಗುರುನಾನಕ್ ದೇವ್ ಅವರ 550ನೇ ಜನ್ಮ ದಿನಾಚರಣೆಗೆ ಮೂರೂ ದಿನಗಳು ಮುಂಚಿತವಾಗಿ  ಕರ್ತಾರ್‌ಪುರ ಕಾರಿಡಾರ್ ಅನ್ನು ಕಾರ್ಯರೂಪಕ್ಕೆ ತರಲು ಕೇಂದ್ರ ಸರ್ಕಾರ ಇಚ್ಚಿಸಿದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.

Last Updated : Oct 22, 2019, 02:40 PM IST
ನವೆಂಬರ್ 9ಕ್ಕೆ ಪ್ರಧಾನಿ ಮೋದಿಯಿಂದ ಕರ್ತಾರ್‌ಪುರ ಕಾರಿಡಾರ್ ಉದ್ಘಾಟನೆ title=

ನವದೆಹಲಿ: ಬಹುನಿರೀಕ್ಷಿತ ಕರ್ತಾರ್‌ಪುರ ಕಾರಿಡಾರ್ ನ ಭಾರತದ ಬದಿಯ ಚೆಕ್ ಪೋಸ್ಟ್ ಅನ್ನು ಪ್ರಧಾನಿ ನರೇಂದ್ರ ಮೋದಿ ಅವರು ನವೆಂಬರ್ 9ರಂದು ಉದ್ಘಾಟಿಸಲಿದ್ದು, ಪಾಕಿಸ್ತಾನದಲ್ಲಿರುವ ಸಿಖ್ ದೇವಾಲಯಕ್ಕೆ ಮೊದಲ ಬ್ಯಾಚ್ ಯಾತ್ರಿಕರನ್ನು ಕಳುಹಿಸಿಕೊಡಲಿದ್ದಾರೆ.

ಪಂಜಾಬ್‌ನ ಗುರುದಾಸ್‌ಪುರ ಜಿಲ್ಲೆಯಲ್ಲಿ ಕರ್ತಾರ್‌ಪುರ ಯಾತ್ರಿಕರಿಗಾಗಿ ಹೊಸದಾಗಿ ನಿರ್ಮಿಸಲಾದ ಟರ್ಮಿನಲ್‌ನಲ್ಲಿ ನಡೆಯುವ ಸಮಾರಂಭದಲ್ಲೂ ಅವರು ಪ್ರಧಾನಿ ಮೋದಿ ಭಾಗವಹಿಸಲಿದ್ದಾರೆ.

ಪಾಕಿಸ್ತಾನವೂ ಸಹ ಅಂದೇ ನರೋವಾಲ್ ಜಿಲ್ಲೆಯಲ್ಲಿರುವ ಕರ್ತಾರ್‌ಪುರ ಕಾರಿಡಾರ್ ಟರ್ಮಿನಲ್ ಅನ್ನು ಉದ್ಘಾಟಿಸಲಿದ್ದು, ಭಾರತೀಯ ಯಾತ್ರಾರ್ಥಿಗಳ ಮೊದಲ ಬ್ಯಾಚ್ ಅನ್ನು ಸ್ವೀಕರಿಸಲಿದೆ. 

ಗುರುನಾನಕ್ ದೇವ್ ಅವರ 550ನೇ ಜನ್ಮ ದಿನಾಚರಣೆಗೆ ಮೂರೂ ದಿನಗಳು ಮುಂಚಿತವಾಗಿ 
ಕರ್ತಾರ್‌ಪುರ ಕಾರಿಡಾರ್ ಅನ್ನು ಕಾರ್ಯರೂಪಕ್ಕೆ ತರಲು ಕೇಂದ್ರ ಸರ್ಕಾರ ಇಚ್ಚಿಸಿದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.

ಗುರುದ್ವಾರ ದರ್ಬಾರ್ ಸಾಹಿಬ್ ಕರ್ತಾರ್‌ಪುರಕ್ಕೆ ಭೇಟಿ ನೀಡುವ ಭಾರತೀಯ ಯಾತ್ರಿಕರಿಂದ ಪಾಕಿಸ್ತಾನ 1,417 ರೂ. ಸೇವಾ ಶುಲ್ಕವನ್ನು ನಿಗದಿಪಡಿಸಿದೆ. ದುಬಾರಿ ಮೊತ್ತದ ಶುಲ್ಕ ವಿಧಿಸುವುದನ್ನು ಮತ್ತೊಮ್ಮೆ ಪರಿಶೀಲಿಸುವಂತೆ ಭಾರತ ಸರ್ಕಾರ ಪಾಕಿಸ್ತಾನಕ್ಕೆ ಮನವಿ ಮಾಡಿದೆ. 

Trending News