9 ರಿಂದ 12ನೇ ತರಗತಿಗಳ ಆಯ್ದ ಶಾಲೆಗಳಲ್ಲಿ ಪ್ರಾಯೋಗಿಕವಾಗಿ ತೆರೆದ ಪುಸ್ತಕ ಪರೀಕ್ಷೆ ಚಾಲನೆಗೆ ಯೋಜನೆ : ಸಿಬಿಎಸ್ಇ

CBSE : ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿಯು 9 ರಿಂದ 12ನೇ ತರಗತಿಗಳಿಗೆ ಪ್ರಾಯೋಗಿಕವಾಗಿ ತೆರೆದ ಪುಸ್ತಕ ಪರೀಕ್ಷೆಗಳಿಗೆ ಚಾಲನೆ ನೀಡಲು ಯೋಚಿಸುತ್ತಿದೆ ಎಂದು ಸಿಬಿಎಸ್ಇ  ಅಧಿಕಾರಿಗಳು ತಿಳಿಸಿದ್ದಾರೆ.

Written by - Zee Kannada News Desk | Last Updated : Feb 22, 2024, 09:02 PM IST
  • ಈ ತರಹದ ಪರೀಕ್ಷೆಯಿಂದ ವಿದ್ಯಾರ್ಥಿಗಳಲ್ಲಿ ಹೊಸ ಹೊಸ ಚಿಂತನೆಗಳನ್ನು ಉತ್ತೇಜಿಸುವ ಉದ್ದೇಶವಿತ್ತು
  • 2023 ಡಿಸೆಂಬರ್ ನಲ್ಲಿ ಆಡಳಿತ ಮಂಡಳಿಯ ಕೊನೆಯ ಸಭೆಯಲ್ಲಿ ಈ ವಿಚಾರದ ಕುರಿತು ಪ್ರಸ್ತಾಪಿಸಲಾಗಿತ್ತು
  • 10 ಮತ್ತು 12ನೇ ತರಗತಿಯ ಬೋರ್ಡ್ ಪರೀಕ್ಷೆಗಳಲ್ಲಿ ಅಳವಡಿಸಿಕೊಳ್ಳುವ ಯಾವುದೇ ಯೋಜನೆ ಇಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ
9 ರಿಂದ 12ನೇ ತರಗತಿಗಳ ಆಯ್ದ ಶಾಲೆಗಳಲ್ಲಿ ಪ್ರಾಯೋಗಿಕವಾಗಿ ತೆರೆದ ಪುಸ್ತಕ ಪರೀಕ್ಷೆ ಚಾಲನೆಗೆ ಯೋಜನೆ : ಸಿಬಿಎಸ್ಇ  title=

Open Book Examination :ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ ಈ ವರ್ಷದ ಕೊನೆಯಲ್ಲಿ ಒಂಬತ್ತರಿಂದ ಹನ್ನೆರಡನೇ ತರಗತಿ ಗಳಿಗೆ ಆಯ್ದ ಶಾಲೆಗಳಲ್ಲಿ ಪ್ರಾಯೋಗಿಕವಾಗಿ ತೆರೆದ ಪುಸ್ತಕ ಪರೀಕ್ಷೆ ಗಳಿಗೆ ಚಾಲನೆ ನೀಡಲು ಯೋಜಿಸುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ

ಸಿಬಿಎಸ್ಇದ ಶಾಲೆಗಳಲ್ಲಿ ತೆರೆದ ಪುಸ್ತಕ ಪರೀಕ್ಷೆಗೆ ಪ್ರಾಯೋಗಿಕವಾಗಿ ಚಾಲನೆ ನೀಡಲು ಯೋಚಿಸಿದ್ದು, ಈ ತೆರೆದ ಪುಸ್ತಕ ಪರೀಕ್ಷೆಯ ಉದ್ದೇಶ ಮಕ್ಕಳು ಇದನ್ನ ಪೂರ್ಣಗೊಳಿಸಲು ತೆಗೆದುಕೊಳ್ಳುವ ಸಮಯ ಮತ್ತು ಈ ಸಂಬಂಧಿಸಿದ ಕುರಿತು ಅವರ ಪ್ರತಿಕ್ರಿಯೆಗಳನ್ನು ಸಂಗ್ರಹಿಸುವುದಾಗಿದೆ. 

ಇದನ್ನು ಓದಿ :ʼಘಟ ಸರ್ಪʼವನ್ನು ಕೈಯಲ್ಲಿ ಹಿಡಿದು ನಿಭರ್ಯವಾಗಿ ಉಪನ್ಯಾಸ ಮಾಡಿದ ಯುವಕ..!

2023 ಡಿಸೆಂಬರ್ ನಲ್ಲಿ ಆಡಳಿತ ಮಂಡಳಿಯ ಕೊನೆಯ ಸಭೆಯಲ್ಲಿ ಈ ವಿಚಾರದ ಕುರಿತು ಪ್ರಸ್ತಾಪಿಸಲಾಗಿತ್ತು ಮತ್ತು ತೆರೆದ ಪುಸ್ತಕ ಪರೀಕ್ಷಾ ಪದ್ಧತಿಯನ್ನು 10 ಮತ್ತು 12ನೇ ತರಗತಿಯ ಬೋರ್ಡ್ ಪರೀಕ್ಷೆಗಳಲ್ಲಿ ಅಳವಡಿಸಿಕೊಳ್ಳುವ ಯಾವುದೇ ಯೋಜನೆ ಇಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ

ಇದನ್ನು ಓದಿ :ಒಂದೇ ಓವರ್’ನಲ್ಲಿ 6 ಸಿಕ್ಸರ್! ಯುವರಾಜ್ ಸಿಂಗ್ ಕ್ಲಬ್ ಸೇರಿದ ಮತ್ತೊಬ್ಬ ಭಾರತೀಯ ಬ್ಯಾಟ್ಸ್’ಮನ್

ಈ ತರಹದ ಪರೀಕ್ಷೆಯಿಂದ ವಿದ್ಯಾರ್ಥಿಗಳಲ್ಲಿ ಹೊಸ ಹೊಸ ಚಿಂತನೆಗಳನ್ನು ಉತ್ತೇಜಿಸುವ ಉದ್ದೇಶವಿತ್ತು ಮತ್ತು ಇದು ಸದ್ಯಕ್ಕೆ ಪ್ರಾಯೋಗಿಕ ಹಂತದಲ್ಲಿದೆ.

ಈ ಯೋಜನೆಯು ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟಿನಲ್ಲಿ ಮಾಡಲಾದ ಶಿಫಾರಸ್ಸು ಗಳಿಗೆ ಅನುಗುಣವಾಗಿ ಮತ್ತು ಪರೀಕ್ಷೆ ಪೂರ್ಣಗೊಳಿಸುವ ಸಮಯ ರಚನಾತ್ಮಕ ಮತ್ತು ಕ್ರೂಡಿಕೃತ ಮೌಲ್ಯಮಾಪನದ ಸಮರ್ಪಕತೆ ಸಂಬಂಧಿಸಿದವರ ದೃಷ್ಟಿಕೋನ ಒಳಗೊಂಡಂತೆ ವಿವಿಧ ಅಂಶಗಳನ್ನು ಮೌಲ್ಯಮಾಪನ ಮಾಡಲು ಈ ರೀತಿಯ ಪರೀಕ್ಷೆಗಳನ್ನು ಶಾಲೆಗಳಲ್ಲಿ ಪ್ರಾಯೋಗಿಕವಾಗಿ ನಡೆಸುವ ಯೋಜನೆಯನ್ನು ಈ ಮಂಡಳಿ ಹೊಂದಿದೆ ಎಂದು ಮಂಡಳಿಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News