Home Loan ಪಡೆಯಲು ಬಯಸುವವರಿಗೆ ಇಲ್ಲಿದೆ ಒಂದು ಸಂತಸದ ಸುದ್ದಿ, ಈ ಬ್ಯಾಂಕ್ ಆರಂಭಿಸಿದೆ ಹೊಸ ಸೌಲಭ್ಯ

ಕೊರೊನಾ ಕಾಲ(Corona Pandemichttps://zeenews.india.com/kannada/google?search=corona%20pandemic)ದಲ್ಲಿ ಬಹುತೇಕ ಬ್ಯಾಂಕ್ ಗಳು ತಮ್ಮ ಗ್ರಾಹಕರಿಗೆ ಡಿಜಿಟಲ್ ಮಾಧ್ಯಮದ ಮೂಲಕ ತಮ್ಮ ಸೇವೆಗಳನ್ನು ಅಂದಿಸುತ್ತಿವೆ. ಇಂತಹುದರಲ್ಲಿ ಇನ್ಮುಂದೆ ಹೋಮ್ ಲೋನ್ ಪಡೆಯಲು ಕೂಡ ಬ್ಯಾಂಕ್ ಗೆ ಚಕ್ಕರ್ ಹೊಡೆಯುವ ಅವಶ್ಯಕತೆ ಇಲ್ಲ.

Last Updated : Sep 16, 2020, 12:56 PM IST
  • ಹೋಮ್ ಲೋನ್ ಪಡೆಯಲು ಕೊಟಕ್ ಮಹಿಂದ್ರ ಬ್ಯಾಂಕ್ ಆರಂಭಿಸಿದೆ ನೂತನ ಯೋಜನೆ.
  • 48 ಗಂಟೆಗಳಲ್ಲಿ ಸಿಗಲಿದೆ ಹೋಮ್ ಲೋನ್.
  • ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸುವ ಮೂಲಕ ಸಿಗಲಿದೆ ಹೋಮ್ ಲೊಅ ಸಿಗಲಿದೆ.
Home Loan ಪಡೆಯಲು ಬಯಸುವವರಿಗೆ ಇಲ್ಲಿದೆ ಒಂದು ಸಂತಸದ ಸುದ್ದಿ, ಈ ಬ್ಯಾಂಕ್ ಆರಂಭಿಸಿದೆ ಹೊಸ ಸೌಲಭ್ಯ title=

ನವದೆಹಲಿ:ಕೊರೊನಾ ಕಾಲ(Corona Pandemic)ದಲ್ಲಿ ಬಹುತೇಕ ಬ್ಯಾಂಕ್ ಗಳು ತಮ್ಮ ಗ್ರಾಹಕರಿಗೆ ಡಿಜಿಟಲ್ ಮಾಧ್ಯಮದ ಮೂಲಕ ತಮ್ಮ ಸೇವೆಗಳನ್ನು ಅಂದಿಸುತ್ತಿವೆ. ಇಂತಹುದರಲ್ಲಿ ಇನ್ಮುಂದೆ ಹೋಮ್ ಲೋನ್ ಪಡೆಯಲು ಕೂಡ ಬ್ಯಾಂಕ್ ಗೆ ಚಕ್ಕರ್ ಹೊಡೆಯುವ ಅವಶ್ಯಕತೆ ಇಲ್ಲ. ಖಾಸಗಿ ವಲಯದ ಬ್ಯಾಂಕ್ ಆಗಿರುವ ಕೊಟಕ್ ಮಹಿಂದ್ರಾ ಬ್ಯಾಂಕ್ ನೂತನ ಸೇವೆಯೊಂದನ್ನು ಆರಂಭಿಸಿದ್ದು, ಇದರ ಅಡಿ ಗ್ರಾಹಕರು ಕೇವಲ 48 ಗಂಟೆಗಳಿಗಿಂತ ಕಡಿಮೆ ಅವಧಿಯಲ್ಲಿ ಹೋಮ್ ಲೋನ್ ಪಡೆಯಬಹುದಾಗಿದೆ. ಇದಕ್ಕಾಗಿ ಗ್ರಾಹಕರು ತಮ್ಮ ಎಲ್ಲ ದಾಖಲೆಗಳನ್ನು ಆನ್ಲೈನ್ ಮೂಲಕವೇ ಸಲ್ಲಿಸಬೇಕು.

ಯಾರಿಗೆ ಸಿಗಲಿದೆ ಸಾಲ?
ಪ್ರಸ್ತುತ ಬ್ಯಾಂಕ್ ನ ಗ್ರಾಹಕರಾಗಿರುವ ಹಾಗೂ ನೂತನವಾಗಿ ಗ್ರಾಹಕರಾಗುವವರಿಗೆ ಕೊಟಕ್ ಡಿಜಿ ಹೋಮ್ ಲೋನ್ ಸೌಲಭ್ಯದ ಮೂಲಕ ಹೋಂ ಲೋನ್ ಗೆ ಅರ್ಜಿ ಸಲ್ಲಿಸಬಹುದು.

ಕೊಟಕ್ ಡಿಜಿ ಗೃಹ ಸಾಲ ಸೌಲಭ್ಯವು ಎಲ್ಲಾ ಹೊಸ ಗೃಹ ಸಾಲ ಮತ್ತು ಬಾಕಿ ವರ್ಗಾವಣೆ ಪ್ರಕರಣಗಳಿಗೆ ಹಾಗೂ ಸಂಬಳ ಪಡೆಯುವ, ಸ್ವಯಂ ಉದ್ಯೋಗಿ ಉದ್ಯಮಿಗಳು ಮತ್ತು ವೃತ್ತಿಪರರು ಸೇರಿದಂತೆ ಇತರ ಗ್ರಾಹಕರಿಗೆ ಸಿಗಲಿದೆ.

ಹೇಗೆ ಅರ್ಜಿ ಸಲ್ಲಿಸಬೇಕು?
1. ಕೊಟಕ್ ಡಿಜಿ ಗೃಹ ಸಾಲಕ್ಕಾಗಿ ಅರ್ಜಿ ಸಲ್ಲಿಸುವ ಪ್ರಕ್ರಿಯೆಯು ಸುಗಮ ಮತ್ತು ಸರಳವಾಗಿದೆ.
2. ಅರ್ಜಿದಾರರು www.kotak.com ನ ಗೃಹ ಸಾಲ ಅರ್ಜಿ ಪುಟದಲ್ಲಿ ಕೆಲವು ವೈಯಕ್ತಿಕ ಮತ್ತು ಆಸ್ತಿ ವಿವರಗಳನ್ನು ಒದಗಿಸಬೇಕಾಗುತ್ತದೆ.
3. ತರುವಾಯ, ಸಂಬಂಧ ವ್ಯವಸ್ಥಾಪಕರು ಅರ್ಜಿದಾರರಿಗೆ ಸುಲಭವಾದ ಆನ್‌ಲೈನ್ ಪ್ರಕ್ರಿಯೆಯ ಮೂಲಕ ಮಾರ್ಗದರ್ಶನ ನೀಡುತ್ತಾರೆ.
4. ಆನ್‌ಲೈನ್‌ನಲ್ಲಿ ಡಿಜಿಟಲ್ ಅರ್ಜಿ ನಮೂನೆ ಮತ್ತು ಸಂಬಂಧಿತ ದಾಖಲೆಗಳನ್ನು ಸಲ್ಲಿಸಿದಾಗ, ಸಾಲವನ್ನು 48 ಗಂಟೆಗಳ ಒಳಗೆ ಪ್ರಕ್ರಿಯೆಗೊಳಿಸಿ ಅನುಮೋದಿಸಲಾಗುತ್ತದೆ.

ಕೊಟಕ್ ಮಹೀಂದ್ರಾ ಬ್ಯಾಂಕಿನ ಗ್ರಾಹಕ ಸ್ವತ್ತುಗಳ ಅಧ್ಯಕ್ಷ ಅಂಬು ಚಾಂದನಾ ಮಾತನಾಡಿ, "ಕರೋನಾ ಯುಗದಲ್ಲಿ ಗೃಹ ಬ್ಯಾಂಕಿಂಗ್ ಹೆಚ್ಚಾಗಿದೆ. ಗ್ರಾಹಕರು ಇದನ್ನು ತುಂಬಾ ಸುಲಭಗೊಳಿಸಿದ್ದಾರೆ ಮತ್ತು ಸೌಲಭ್ಯಗಳನ್ನು ಸಹ ಒದಗಿಸಲಾಗಿದೆ. ಡಿಜಿಟಲ್-ವಹಿವಾಟಕ್ಕೆ ಮೊದಲ ಆದ್ಯತೆ ನೀಡುವ ಬ್ಯಾಂಕ್ ಆಗಿ, ಗ್ರಾಹಕರು ತಮ್ಮ ಮನೆಗಳಲಿಯೇ ಲಭ್ಯವಿರುವ ಸೌಕರ್ಯವನ್ನು ಬಳಸಿ ಸುರಕ್ಷಿತ ಬ್ಯಾಂಕಿಂಗ್ ಮಾಡಬಹುದು ಎಂಬುಡು ನಮ್ಮ ಉದ್ದೇಶ. ಇದನ್ನು ಗಮನದಲ್ಲಿಟ್ಟುಕೊಂಡು, ಕೊಟಕ್ ಡಿಜಿ ಗೃಹ ಸಾಲವನ್ನು ಪ್ರಾರಂಭಿಸುವುದಾಗಿ ನಾವು ಸಂತೋಷಪಡುತ್ತೇವೆ. ಇದು ಸಂಪೂರ್ಣವಾಗಿ ಆನ್‌ಲೈನ್ ಅನುಮೋದನೆ ಪ್ರಕ್ರಿಯೆಯಾಗಿದ್ದು, ಇದರ ಮೂಲಕ ಗ್ರಾಹಕರು ತಮ್ಮ ಕನಸಿನ ಮನೆಯನ್ನು ಕೆಲವೇ ಕ್ಲಿಕ್‌ಗಳ ಮೂಲಕ ಸುರಕ್ಷಿತ ಮತ್ತು ಶೂನ್ಯ-ಸಂಪರ್ಕದ ರೀತಿಯಲ್ಲಿ ನಿರ್ಮಿಸಬಹುದು.

Trending News