NCP Crisis: 'ನಾನೇ ಪಕ್ಷದ ಅಧ್ಯಕ್ಷ' ಪಕ್ಷದ ಸಭೆಯಲ್ಲಿ ಅಜಿತ್ ಪವಾರ್ ಗೆ ಶರದ್ ಪವಾರ್ ನೇರ ಚಾಲೆಂಜ್

NCP Crisis: ಅಜಿತ್ ಪವಾರ್ ನೇತೃತ್ವದಲ್ಲಿ ಎನ್‌ಸಿಪಿಯಲ್ಲಿ ಬಂಡಾಯವೆದ್ದ ನಂತರ, ಎರಡೂ ಬಣಗಳು (ಅಜಿತ್ ಪವಾರ್ ಮತ್ತು ಶರದ್ ಪವಾರ್) ಪಕ್ಷವನ್ನು ಪ್ರತಿಪಾದಿಸುತ್ತಿವೆ.  

Written by - Nitin Tabib | Last Updated : Jul 6, 2023, 07:33 PM IST
  • ಶರದ್ ಪವಾರ್ ಅವರೊಂದಿಗೆ 27 ರಾಜ್ಯ ಸಮಿತಿಗಳಿವೆ ಎಂದು ಚಾಕೊ ಹೇಳಿದ್ದಾರೆ.
  • ಯಾವುದೇ ಮುಂದಿನ ಕ್ರಮಕ್ಕಾಗಿ ನಾವು ಶರದ್ ಪವಾರ್ ಅವರಿಗೆ ಅಧಿಕಾರ ನೀಡಿದ್ದೇವೆ.
  • ಅಜಿತ್ ಪವಾರ್, ಛಗನ್ ಭುಜಬಲ್, ದಿಲೀಪ್ ವಲ್ಸೆ ಪಾಟೀಲ್ ಮತ್ತು ಹಸನ್ ಮುಶ್ರೀಫ್ ಸೇರಿದಂತೆ ಒಂಬತ್ತು ಶಾಸಕರು ಎನ್‌ಸಿಪಿ ವಿರುದ್ಧ ಬಂಡಾಯ ಎದ್ದಿರುವುದು ಇಲ್ಲಿ ಉಲ್ಲೇಖನೀಯ .
NCP Crisis: 'ನಾನೇ ಪಕ್ಷದ ಅಧ್ಯಕ್ಷ' ಪಕ್ಷದ ಸಭೆಯಲ್ಲಿ ಅಜಿತ್ ಪವಾರ್ ಗೆ ಶರದ್ ಪವಾರ್ ನೇರ ಚಾಲೆಂಜ್ title=
ಚಿತ್ರ ಕೃಪೆ - ಎಎನ್ಐ

NCP Crisis:  ಅಜಿತ್ ಪವಾರ್ ನೇತೃತ್ವದ ನ್ಯಾಶನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್‌ಸಿಪಿ) ಬಂಡಾಯ ಕಾಣಿಸಿಕೊಂಡ ಬಳಿಕ ಮಹಾರಾಷ್ಟ್ರದ ರಾಜಕೀಯದಲ್ಲಿ ಕಾವೇರಿದೆ. ಏತನ್ಮಧ್ಯೆ, ಶರದ್ ಪವಾರ್ ಅವರ ಎನ್‌ಸಿಪಿಯ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ಜುಲೈ 6 ರಂದು ದೆಹಲಿಯಲ್ಲಿ ಮುಕ್ತಾಯಗೊಂಡಿದೆ. 
ಸಭೆಯ ನಂತರ ಮಾತನಾಡಿದ ಮಾಜಿ ಸಿಎಂ ಶರದ್ ಪವಾರ್, ಅಜಿತ್ ಪವಾರ್ ಅವರನ್ನು ಪಕ್ಷದ ಅಧ್ಯಕ್ಷರನ್ನಾಗಿ ಮಾಡಿರುವ ಬಗ್ಗೆ ನನಗೆ ತಿಳಿದಿಲ್ಲ. ನಾನು ಎನ್‌ಸಿಪಿ ಅಧ್ಯಕ್ಷ. ಹೀಗಿರುವಾಗ ಈಗ ನಾನು ಎನ್‌ಸಿಪಿ ಅಧ್ಯಕ್ಷ ಎಂದು ಯಾರಾದರೂ ಹೇಳಿದರೆ ಅದಕ್ಕೆ ಪ್ರಾಮುಖ್ಯತೆ ನೀಡಬಾರದು ಎಂದಿದ್ದಾರೆ.

ಅಜಿತ್ ಪವಾರ್ ಅವರ ಶರದ್ ಪವಾರ ಅವರ ಬಗೆಗಿನ ನಿವೃತ್ತಿ ಹೇಳಿಕೆ ಕುರಿತು ಮಾತನಾಡಿರುವ ಅವರು, ನನಗೆ 82 ವರ್ಷವಾಗಲಿ ಅಥವಾ 92 ವರ್ಷವಾಗಲಿ ಅದರಿಂದ ಯಾವುದೇ ಬದಲಾವಣೆ ಆಗುವುದಿಲ್ಲ. ಮತ್ತೊಂದೆಡೆ ಎನ್‌ಡಿಎ ಜೊತೆ ಕೈಜೋಡಿಸಿರುವ ಪ್ರಫುಲ್ ಪಟೇಲ್, ಸುನೀಲ್ ತಟ್ಕರೆ ಮತ್ತು 9 ಶಾಸಕರನ್ನು ಉಚ್ಚಾಟಿಸುವ ಶರದ್ ಪವಾರ್ ಅವರ ನಿರ್ಧಾರವನ್ನು ಪಕ್ಷವು ಅನುಮೋದಿಸಿದೆ ಎಂದು ಸಭೆಯ ನಂತರ ಎನ್‌ಸಿಪಿ ನಾಯಕ ಪಿಸಿ ಚಾಕೊ ಹೇಳಿದ್ದಾರೆ..

ಶರದ್ ಪವಾರ್ ಅವರೊಂದಿಗೆ 27 ರಾಜ್ಯ ಸಮಿತಿಗಳಿವೆ ಎಂದು ಚಾಕೊ ಹೇಳಿದ್ದಾರೆ. ಯಾವುದೇ ಮುಂದಿನ ಕ್ರಮಕ್ಕಾಗಿ ನಾವು ಶರದ್ ಪವಾರ್ ಅವರಿಗೆ ಅಧಿಕಾರ ನೀಡಿದ್ದೇವೆ. ಅಜಿತ್ ಪವಾರ್, ಛಗನ್ ಭುಜಬಲ್, ದಿಲೀಪ್ ವಲ್ಸೆ ಪಾಟೀಲ್ ಮತ್ತು ಹಸನ್ ಮುಶ್ರೀಫ್ ಸೇರಿದಂತೆ ಒಂಬತ್ತು ಶಾಸಕರು ಎನ್‌ಸಿಪಿ ವಿರುದ್ಧ ಬಂಡಾಯ ಎದ್ದಿರುವುದು ಇಲ್ಲಿ ಉಲ್ಲೇಖನೀಯ .

ಸಭೆಯ ಕುರಿತು  ಅಜಿತ್ ಪವಾರ್ ಹೇಳಿದ್ದೇನು?
ಈ ಸಭೆಗೆ ಸಂಬಂಧಿಸಿದಂತೆ ಮಾತನಾಡಿರುವ ಉಪ ಮುಖ್ಯಮಂತ್ರಿ ಅಜಿತ್ ಪವಾರ್, ಇದಕ್ಕೆ ಯಾವುದೇ ಕಾನೂನು ಮಾನ್ಯತೆ ಇಲ್ಲ ಎಂದು ಹೇಳಿದ್ದಾರೆ. ಶಾಸಕರು ಮತ್ತು ಪಕ್ಷದ ಪದಾಧಿಕಾರಿಗಳಿಂದ ನನ್ನನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ, ಇಂತಹ ಪರಿಸ್ಥಿತಿಯಲ್ಲಿ ಶರದ್ ಪವಾರ್ ಅವರಿಗೆ ಇಂತಹ ಸಭೆ ನಡೆಸುವ ಹಕ್ಕು ಇಲ್ಲ ಎಂದಿದ್ದಾರೆ.

ಇದನ್ನೂ ಓದಿ-Rupee As Global Currency: ಈ ಕ್ರಮ ಕೈಗೊಂಡರೆ ಭಾರತೀಯ ರೂಪಾಯಿಗೆ ಸಿಗಲಿದೆ ಜಾಗತಿಕ ಕರೆನ್ಸಿ ಸ್ಥಾನಮಾನ, ಸಲಹೆ ನೀಡಿದ ಆರ್ಬಿಐ-ಐಡಿಜಿ

ಅಜಿತ್ ಪವಾರ್ ಮತ್ತೇನು ಹೇಳಿದ್ದಾರೆ?
ಬುಧವಾರ ತಮ್ಮ ಚಿಕ್ಕಪ್ಪ ಚಿಕ್ಕಪ್ಪ ಶರದ್ ಪವಾರ್ ಅವರನ್ನು ತರಾಟೆಗೆ ತೆಗೆದುಕೊಂಡ ಅಜಿತ್ ಪವಾರ್, ಐಎಎಸ್ ಅಧಿಕಾರಿಗಳು 60 ನೇ ವಯಸ್ಸಿನಲ್ಲಿ ನಿವೃತ್ತರಾಗುತ್ತಾರೆ ಎಂದು ಹೇಳಿದ್ದಾರೆ. ರಾಜಕೀಯದಲ್ಲಿಯೂ ಬಿಜೆಪಿ ನಾಯಕರ ನಿವೃತ್ತಿ ವಯಸ್ಸು 75 ವರ್ಷ. ಲಾಲ್ ಕೃಷ್ಣ ಅಡ್ವಾಣಿ ಮತ್ತು ಮುರಳಿ ಮನೋಹರ ಜೋಶಿಯವರ ಉದಾಹರಣೆಗಳನ್ನು ನೀವು ನೋಡಿದ್ದೀರಿ. ನಿಮಗೆ 83 ವರ್ಷ. ನೀವು ನಿಲ್ಲಲು ಯೋಚಿಸುವುದಿಲ್ಲವೇ? ನಿಮ್ಮ ಆಶೀರ್ವಾದವನ್ನು ನೀಡಿ ಮತ್ತು ನಿಮ್ಮ ದೀರ್ಘಾಯುಷ್ಯಕ್ಕಾಗಿ ನಾವು ಪ್ರಾರ್ಥಿಸುತ್ತೇವೆ ಎಂದಿದ್ದಾರೆ.

ಇದನ್ನೂ ಓದಿ-Good News: ಡೆಬಿಟ್-ಕ್ರೆಡಿಟ್ ಕಾರ್ಡ್ ಪಡೆಯಬಯಸುವವರಿಗೆ ಒಂದು ಗುಡ್ ನ್ಯೂಸ್, ಆರ್ಬಿಐ ಕರಡು ಸುತ್ತೋಲೆ ಜಾರಿ

ಮೂಲಗಳ ಪ್ರಕಾರ, ಜೂನ್ 30 ರಂದು, 40 ಶಾಸಕರ ಬೆಂಬಲ ಪತ್ರದೊಂದಿಗೆ, ಅಜಿತ್ ಪವಾರ್ ಅವರನ್ನು ಎನ್‌ಸಿಪಿ ಅಧ್ಯಕ್ಷರನ್ನಾಗಿ ಮಾಡುವ ಮಾಹಿತಿಯನ್ನು ಚುನಾವಣಾ ಆಯೋಗಕ್ಕೆ ಕಳುಹಿಸಲಾಗಿದೆ ಎಂಬುದು ಇಲ್ಲಿ ಗಮನಾರ್ಹ. ಜುಲೈ 5 ರಂದು ಕೇಂದ್ರ ಚುನಾವಣಾ ಆಯೋಗಕ್ಕೆ ಈ ಪತ್ರ ಬಂದಿದೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/38l6m8543Vk?feature=share

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News