ಬಿಯರ್‌ಗೆ 50 ರೂಪಾಯಿ ಹೆಚ್ಚಿಗೆ ತೆಗೆದುಕೊಂಡಿದ್ದಕ್ಕೆ ಮರವನ್ನೇರಿ ಆತ್ಮಹತ್ಯೆಗೆ ಯತ್ನಿಸಿದ ಭೂಪ!

Madhya Pradeşh bizarre incident: ಮಧ್ಯಪ್ರದೇಶ ರಾಜ್ಯ ಸರ್ಕಾರವು 100 ಇರುವ ಮದ್ಯದ ಮೇಲೆ 20 ರೂ. ಹಾಗೂ ಬಿಯರ್ ಬಾಟಲ್​ಗೆ​ 30 ರೂ. ಹೆಚ್ಚಳ ಮಾಡಿದೆ. ಒಟ್ಟು 50 ರೂ. ಹೆಚ್ಚುವರಿ ಶುಲ್ಕ ವಿಧಿಸಿದಂತೆ ಆಗಿದೆ. 

Written by - Puttaraj K Alur | Last Updated : Mar 24, 2024, 12:00 PM IST
  • ಬಿಯರ್ ಬಾಟಲ್ ಮೇಲೆ 50 ರೂಪಾಯಿ ಹೆಚ್ಚುವರಿ ಶುಲ್ಕ ವಿಧಿಸಿದ ಸರ್ಕಾರ
  • ಮಧ್ಯಪ್ರದೇಶದ ರಾಜ್‌ಗಢ್ ಜಿಲ್ಲೆಯಲ್ಲಿ ಮರ ಏರಿ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ
  • ಹರಸಾಹಸಪಟ್ಟು ವ್ಯಕ್ತಿಯನ್ನು ಮರದಿಂದ ಕೆಳಗಿಳಿಸಿದ ಪೊಲೀಸರು
ಬಿಯರ್‌ಗೆ 50 ರೂಪಾಯಿ ಹೆಚ್ಚಿಗೆ ತೆಗೆದುಕೊಂಡಿದ್ದಕ್ಕೆ ಮರವನ್ನೇರಿ ಆತ್ಮಹತ್ಯೆಗೆ ಯತ್ನಿಸಿದ ಭೂಪ! title=
ಮರ ಏರಿ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ!

ಭೋಪಾಲ್: ಬಿಯರ್ ಬಾಟಲ್ ಮೇಲೆ 50 ರೂಪಾಯಿ ಹೆಚ್ಚುವರಿ ಶುಲ್ಕ ವಿಧಿಸಿದ್ದಕ್ಕೆ ವ್ಯಕ್ತಿಯೊಬ್ಬ ಮರ ಏರಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಮಧ್ಯಪ್ರದೇಶದ ರಾಜ್‌ಗಢ್ ಜಿಲ್ಲೆಯಲ್ಲಿ ನಡೆದಿದೆ.  

ರಾಜ್‌ಗಢ್ ಜಿಲ್ಲೆಯ ನಿವಾಸಿ ಬ್ರಿಜ್‌ ಮೋಹನ್ ಶಿವಹರೆ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ. ಮಧ್ಯಪ್ರದೇಶ ರಾಜ್ಯ ಸರ್ಕಾರವು 100 ಇರುವ ಮದ್ಯದ ಮೇಲೆ 20 ರೂ. ಹಾಗೂ ಬಿಯರ್ ಬಾಟಲ್​ಗೆ​ 30 ರೂ. ಹೆಚ್ಚಳ ಮಾಡಿದೆ. ಒಟ್ಟು 50 ರೂ. ಹೆಚ್ಚುವರಿ ಶುಲ್ಕ ವಿಧಿಸಿದಂತೆ ಆಗಿದೆ. 

ಇದನ್ನೂ ಓದಿ: ತಂದೆಯನ್ನು ಹತ್ಯೆಗೈದು ಮನೆಯೊಳಗೆ ಶವ ಹೂತಿಟ್ಟ ಮಗ: ಕಾರಣವೇನು ಗೊತ್ತಾ?

ಇದನ್ನು ಪ್ರಶ್ನಿಸಿ ಬ್ರಿಜ್‌ ಮೋಹನ್ ಮುಖ್ಯಮಂತ್ರಿ ಸಹಾಯವಾಣಿ, ಜಿಲ್ಲಾಧಿಕಾರಿಗಳಿಗೆ, ಮಾನವ ಹಕ್ಕುಗಳ ಆಯೋಗ ಹಾಗೂ ಸ್ಥಳೀಯ ಪೊಲೀಸ್ ಠಾಣೆಗೆ ಫೆಬ್ರವರಿ ತಿಂಗಳಿನಲ್ಲಿಯೇ ದೂರು ನೀಡಿದ್ದರು. ಏಕಾಏಕಿ ಮದ್ಯದ ಬೆಲೆ ಏರಿಕೆ ಮಾಡಿದ್ದಕ್ಕೆ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದ. 

ಮದ್ಯದ ಹೆಚ್ಚುವರಿ ಶುಲ್ಕ ವಿಚಾರವಾಗಿ ಅಧಿಕಾರಿಗಳು ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲವೆಂದು ಬೇಸರಗೊಂಡಿದ್ದ ಬ್ರಿಜ್‌ ಮೋಹನ್‌, ಮರ ಏರಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ ಎಂದು ವರದಿಯಾಗಿದೆ.  ಈ ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಹರಸಾಹಸಪಟ್ಟು ಬ್ರಿಜ್‌ ಮೋಹನ್‌ನನ್ನು ಮರದಿಂದ ಕೆಳಗಿಳಿಸಿ ಠಾಣೆಗೆ ಕರೆದುಕೊಂಡು ಹೋಗಿ ವಿಚಾರಣೆ ನಡೆಸಿದ್ದಾರೆ ಎಂದು ಹೇಳಲಾಗಿದೆ. 

ಇದನ್ನೂ ಓದಿ: ಮಾರ್ಚ್ 28ರವರೆಗೆ ನ್ಯಾಯಾಂಗ ಬಂಧನ: ಜೈಲಿನಲ್ಲೇ ಹೋಳಿ ಆಚರಿಸಲಿರುವ ಅರವಿಂದ್‌ ಕೇಜ್ರಿವಾಲ್!‌

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News