Loksabha Election : ಚುನಾವಣಾ ಪ್ರಚಾರದಲ್ಲಿ ಶಾರುಖ್ ಖಾನ್! ಯಾವ ಪಕ್ಷದ ಪರ ಇವರ ನಡೆ ?

loksabha election : ಮಹಾರಾಷ್ಟ್ರದ ಸೋಲಾಪುರದಲ್ಲಿ ಚುನಾವಣಾ ಪ್ರಚಾರದಲ್ಲಿ ಶಾರುಖ್ ಖಾನ್ ಅವರು ತೊಡಗಿದ್ದು, ಯಾವ ಪಕ್ಷದ ಪರ ಶಾರುಖ್ ಖಾನ್ ಪ್ರಚಾರ ಮಾಡಿದ್ದಾರೆ ಎನ್ನುವ ಕುರಿತು ಇಲ್ಲಿದೆ ಮಾಹಿತಿ ತಿಳಿಯಿರಿ.   

Written by - Zee Kannada News Desk | Last Updated : Apr 21, 2024, 01:48 PM IST
  • ಸದ್ಯಕ್ಕೆ ಶಾರುಖ್​ ಖಾನ್​ ಅವರನ್ನೇ ಹೋಲುವಂತಹ ವ್ಯಕ್ತಿಯಿಂದ ಚುನಾವಣಾ ಪ್ರಚಾರ ಮಾಡಿಸಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
  • ಕಾಂಗ್ರೆಸ್ ಅಭ್ಯರ್ಥಿ ಪ್ರಣಿತಿ ಶಿಂಧೆ ಪರ ಚುನಾವಣಾ ಪ್ರಚಾರ ಮಾಡಿಸಿದ ಘಟನೆ ಮಹಾರಾಷ್ಟ್ರದ ಸೊಲ್ಲಾಪುರ ಲೋಕಸಭಾ ಕ್ಷೇತ್ರದಲ್ಲಿ ನಡೆದಿದೆ
  • ಬಿಜೆಪಿ ಇದನ್ನು ಹಗರಣ ಎಂದು ಕರೆದಿದ್ದಾರೆ.
Loksabha Election : ಚುನಾವಣಾ ಪ್ರಚಾರದಲ್ಲಿ ಶಾರುಖ್ ಖಾನ್! ಯಾವ ಪಕ್ಷದ ಪರ ಇವರ ನಡೆ ? title=

Sharukh Khan in Loksabha election polls : ಮಹಾರಾಷ್ಟ್ರದ ಸೊಲ್ಲಾಪುರ ಲೋಕಸಭಾ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರದಲ್ಲಿ ಶಾರುಖ್ ಖಾನ್ ಭಾಗಿಯಾಗಿದ್ದರೂ ಎನ್ನುವದು ಕೇಳಿಬಂದಿದೆ ಆದರೆ ಸೋಲಾಪುರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪ್ರಣಿತಿ ಶಿಂಧೆ ಪರ ಶಾರುಖ್ ಖಾನ್ ಅವರನ್ನೇ ಹೋಲುವಂತಹ ವ್ಯಕ್ತಿಯನ್ನು ಕರೆತಂದು ಚುನಾವಣಾ ಪ್ರಚಾರ ಮಾಡಿಸಿದ್ದಾರೆ ಇದೊಂದು ಹಗರಣ ಎಂದು ಬಿಜೆಪಿ ಹೇಳಿದೆ

ಇದನ್ನು ಓದಿ : ನೇಹಾ ಹತ್ಯೆ ಕುರಿತು ಮೌನ ಮುರಿದ ಡಿಬಾಸ್‌, ಶಿವಣ್ಣ..! ಹೇಳಿದ್ದೇನು ಗೊತ್ತೆ..?

ಶಾರುಖ್​ ಖಾನ್​ ಅವರನ್ನೇ ಹೋಲುವಂತಹ ವ್ಯಕ್ತಿಯನ್ನು ಕರೆತಂದು ಕಾಂಗ್ರೆಸ್ ಅಭ್ಯರ್ಥಿ ಪ್ರಣಿತಿ ಶಿಂಧೆ ಪರ ಚುನಾವಣಾ ಪ್ರಚಾರ ಮಾಡಿಸಿದ ಘಟನೆ ಮಹಾರಾಷ್ಟ್ರದ ಸೊಲ್ಲಾಪುರ ಲೋಕಸಭಾ ಕ್ಷೇತ್ರದಲ್ಲಿ ನಡೆದಿದೆ

ನಟ ಶಾರುಖ್‌ ಖಾನ್‌ ಚುನಾವಣಾ ಪ್ರಚಾರಕ್ಕೆ ಇಳಿದಿದ್ದಾರೆ. ನಟ ಯಾವಾಗಲೂ ರಾಜಕೀಯ ಮತ್ತು ರಾಜಕಾರಣಿಗಳಿಂದ ದೂರ ಇರುತ್ತಿದ್ದರು. ಆದ್ರೆ ಈ ಬಾರಿ ಪ್ರಣಿತಿ ಶಿಂಧೆ  ಪರ ಪ್ರಚಾರಕ್ಕೆ ಇಳಿದಿದ್ದಾರೆ ಎಂದು ಎಲ್ಲಾರೂ ಆಶ್ಚರ್ಯ ವ್ಯಕ್ತಪಡಿಸಿದ್ದರು. ಆದರೆ ಇವರು ರಿಯಲ್ ಶಾರುಖ್ ಖಾನ್ ಅಲ್ಲ. ಶಾರುಖ್​ ಖಾನ್​ ಅವರನ್ನೇ ಹೋಲುವಂತಹ ವ್ಯಕ್ತಿಯನ್ನು ಕಾಂಗ್ರೆಸ್ ಕರೆತಂದು ಪ್ರಣಿತಿ ಶಿಂಧೆ  ಪರ ಚುನಾವಣಾ ಪ್ರಚಾರ ಮಾಡಿಸಿದ್ದಾರೆ. ಚುನಾವಣಾ ಪ್ರಚಾರ ಮಾಡಿರುವ ವಿಡಿಯೋ ಸದ್ಯಕ್ಕೆ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿದೆ. 

ಭಾರತದ ಚುನಾವಣಾ ಆಯೋಗ ಮತ್ತು ಶಾರುಖ್ ಖಾನ್ ಅವರನ್ನು ಎಕ್ಸ್‌ನಲ್ಲಿ ಟ್ಯಾಗ್ ಮಾಡಿ, ಬಿಜೆಪಿ ರಾಷ್ಟ್ರೀಯ ವಕ್ತಾರ ಶೆಹಜಾದ್ ಪೂನಾವಾಲಾ ಅವರು ಪ್ರಚಾರದ ಕುರಿತು ಕೆಲವು ಪೋಸ್ಟ್‌ಗಳನ್ನು ಹಂಚಿಕೊಂಡಿದ್ದಾರೆ 

ಬಿಜೆಪಿ ರಾಷ್ಟ್ರೀಯ ವಕ್ತಾರ ಶೆಹಜಾದ್ ಪೂನಾವಾಲಾ ತಮ್ಮ ಎಕ್ಸ್ ಖಾತೆಯಲ್ಲಿ  " ಜನರನ್ನು ಎಷ್ಟು ನಿರ್ಲಜ್ಜವಾಗಿ ಮತ್ತು ಬಹಿರಂಗವಾಗಿ ಮರುಳು ಮಾಡಲು ಪಕ್ಷವು ಯಾವ ರೀತಿಯ ಕಾರ್ಯವನ್ನು ಮಾಡುತ್ತವೆ. ಸೆಲೆಬ್ರಿಟಿಗಳನ್ನು ಬಳಸಿಕೊಂಡು ಯಾವ ರೀತಿಯಲ್ಲಿ ಜನರನ್ನು ಮರಳು ಮಾಡುತ್ತಾರೆ ಎಂದು ಬರೆದುಕೊಂಡಿದ್ದಾರೆ. 

ಇದನ್ನು ಓದಿ : Neha Murder Case :  ನೇಹಾ ಮನೆಗೆ "ಒಳ್ಳೆ ಹುಡುಗ ಪ್ರಥಮ" ಭೇಟಿ

ಸದ್ಯಕ್ಕೆ ಶಾರುಖ್​ ಖಾನ್​ ಅವರನ್ನೇ ಹೋಲುವಂತಹ ವ್ಯಕ್ತಿಯಿಂದ ಚುನಾವಣಾ ಪ್ರಚಾರ ಮಾಡಿಸಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಬಿಜೆಪಿ ಇದನ್ನು ಹಗರಣ ಎಂದು ಕರೆದಿದ್ದಾರೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News