ದೆಹಲಿ-NCR ಪ್ರಾಂತ್ಯದಲ್ಲಿ ಮತ್ತೆ ಕಂಪಿಸಿದ ಭೂಮಿ

ದೆಹಲಿ-NCR ಪ್ರಾಂತ್ಯದಲ್ಲಿ ಮತ್ತೊಮ್ಮೆ ಭೂಮಿ ಕಂಪಿಸಿದೆ. ಇಂದು ರಾತ್ರಿ 9 ಗಂಟೆ 8 ನಿಮಿಷಕ್ಕೆ ಸುಮಾರು 20 ನಿಮಿಷಗಳ ಕಾಲ ಭೂಮಿ ಕಂಪಿಸಿದ್ದು, ಹರಿಯಾಣದ ರೋಹ್ಟಕ್ ಭೂಕಂಪದ ಕೇಂದ್ರ ಬಿಂದು ಇದೆ ಎನ್ನಲಾಗುತ್ತಿದೆ.

Last Updated : May 29, 2020, 09:29 PM IST
ದೆಹಲಿ-NCR ಪ್ರಾಂತ್ಯದಲ್ಲಿ ಮತ್ತೆ ಕಂಪಿಸಿದ ಭೂಮಿ title=

ದೆಹಲಿ: ದೆಹಲಿ-NCR ಪ್ರಾಂತ್ಯದಲ್ಲಿ ಮತ್ತೊಮ್ಮೆ ಭೂಮಿ ಕಂಪಿಸಿದೆ. ಇಂದು ರಾತ್ರಿ 9 ಗಂಟೆ 8 ನಿಮಿಷಕ್ಕೆ ಸುಮಾರು 20 ನಿಮಿಷಗಳ ಕಾಲ ಭೂಮಿ ಕಂಪಿಸಿದ್ದು, ಹರಿಯಾಣದ ರೋಹ್ಟಕ್ ಭೂಕಂಪದ ಕೇಂದ್ರ ಬಿಂದು ಇದೆ ಎನ್ನಲಾಗುತ್ತಿದೆ. ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಸಿಸ್ಮಾಲಾಜಿ ನೀಡಿರುವ ಮಾಹಿತಿ ಪ್ರಕಾರ ರಿಕ್ಟರ್ ಮಾಪಕದಲ್ಲಿ ಈ ಭೂಕಂಪದ ತೀವ್ರತೆ 4.6ರಷ್ಟು ದಾಖಲಾಗಿದೆ. ಈ ಭೂಕಂಪನದ ಕೇಂದ್ರ ರೋಹ್ಟಕ್ ನಲ್ಲಿ ಸುಮಾರು 3.3 ಕೀ.ಮೀ ಆಳದಲ್ಲಿದೆ ಎನ್ನಲಾಗಿದೆ. ಇದಲ್ಲದೆ ಹರ್ಯಾಣಾ-ಪಂಜಾಬ್ ಗಳಲ್ಲಿಯೂ ಕೂಡ ಜನರಿಗೆ ಭೂಮಿ ಕಂಪಿಸಿರುವ ಅನುಭವವಾಗಿದ್ದು, ಜನರು ಭಯಭೀತರಾಗಿ ತಮ್ಮ-ತಮ್ಮ ಮನೆಗಳಿಂದ ಹೊರಗೆ ಓಡಿ ಹೊರಬಂದಿದ್ದಾರೆ. ಇದಕ್ಕೂ ಮೊದಲು ಈ ವರ್ಷ ಮೂರು ಬಾರಿಗೆ ದೆಹಲಿ-NCR ಪ್ರಾಂತ್ಯದಲ್ಲಿ ಲಘು ಪ್ರಮಾಣದ ಭೂಕಂಪಗಳು ಸಂಭವಿಸಿವೆ. ಆದರೆ ಇದುವರೆಗೆ ಯಾವುದೇ ರೀತಿಯ ಕುರಿತು ಹಾನಿಯ ವರದಿಯಾಗಿಲ್ಲ.

ಇದಕ್ಕೂ ಮೊದಲು 10.5.2020 ರ ಸುಮಾರಿಗೆ ಮಧ್ಯಾಹ್ನ 1.45 ರ ಸುಮಾರಿಗೆ ಭೂಕಂಪ ಸಂಭವಿಸಿದೆ. ದೆಹಲಿಯ ಹೊರತಾಗಿ, ಗಾಜಿಯಾಬಾದ್, ನೋಯ್ಡಾ ಮತ್ತು ಗ್ರೇಟರ್ ನೋಯ್ಡಾ ಸೇರಿದಂತೆ  ಎನ್‌ಸಿಆರ್‌ನ ಅನೇಕ ಪ್ರದೇಶಗಳಲ್ಲಿ ಈ ಭೂಕಂಪನ ಸಂಭವಿಸಿದೆ.

ಈ ಭೂಕಂಪವು ರಿಕ್ಟರ್ ಮಾಪಕದಲ್ಲಿ 3.5 ರಷ್ಟಿತ್ತು.ಮತ್ತು ಇದರ  ಕೇಂದ್ರ ಬಿಂದು ದೆಹಲಿಯ ವಾಯುವ್ಯ ಭಾಗದಲ್ಲಿತ್ತು. ಈ ಭೂಕಂಪದ ಕೇಂದ್ರಬಿಂದು ಭೂಮಿಯ ಸುಮಾರು 5 ಕಿಲೋಮೀಟರ್ ಆಳದಲ್ಲಿ ಇತ್ತು ಎನ್ನಲಾಗಿದೆ.

ಭಾರದದಲ್ಲಿ ಕೊರೊನಾ ವೈರಸ್ ಸಾಂಕ್ರಾಮಿಕದ ಹಿನ್ನೆಲೆ ಸಧ್ಯ ದೇಶಾದ್ಯಂತ ಲಾಕ್ ಡೌನ್ ಘೋಷಿಸಲಾಗಿದ್ದು, ದೆಹಲಿ ಮತ್ತು NCR ಪ್ರಾಂತ್ಯದಲ್ಲಿ ಬಹುತೇಕ ಜನರು ತಮ್ಮ ತಮ್ಮ ಮನೆಗಳಲ್ಲಿ ಬಂಧಿಯಾಗಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಭೂಕಂಪ ಸಂಭವಿಸಿದ ಕಾರಣ ಜನರು ಭಯಭೀತರಾಗಿ ತಮ್ಮ ಮನೆಗಳಿಂದ ಹೊರಬಂದಿದ್ದಾರೆ.

Trending News