47 ಇಂಡಿಗೋ ವಿಮಾನಗಳ ಹಾರಾಟ ರದ್ದು

ಇಂಡಿಗೋ  ಮಂಗಳವಾರ ತನ್ನ 47 ವಿಮಾನಗಳ ಹಾರಾಟವನ್ನು ರದ್ದುಪಡಿಸಿದೆ.

Last Updated : Mar 13, 2018, 01:05 PM IST
47 ಇಂಡಿಗೋ ವಿಮಾನಗಳ ಹಾರಾಟ ರದ್ದು  title=

ಮುಂಬೈ: ದೇಶದ ವಾಯುಯಾನ ನಿಯಂತ್ರಕ ಡಿಜಿಸಿಎ ದೋಷಯುಕ್ತ ಪ್ರ್ಯಾಟ್ ಮತ್ತು ಇಂಜಿನ್ಗಳನ್ನು ಹೊಂದಿದ್ದ ತನ್ನ ಎಂಟು A320Neo ವಿಮಾನಗಳನ್ನು ಮತ್ತು ಗೋ ಏರ್'ನ ಮೂರು ವಿಮಾನಗಳ ಹಾರಾಟವನ್ನು ರದ್ದುಪಡಿಸಿದ ಹಿನ್ನೆಲೆಯಲ್ಲಿ ಇಂಡಿಗೋ  ಮಂಗಳವಾರ ತನ್ನ 47 ವಿಮಾನಗಳ ಹಾರಾಟವನ್ನು ರದ್ದುಪಡಿಸಿದೆ.

ಇಂಡಿಗೋ ಮಾರ್ಚ್ 13 ರಂದು 47  ದೇಶಿಯ ವಿಮಾನಗಳನ್ನು ರದ್ದುಪಡಿಸಿರುವುದಾಗಿ ತನ್ನ ವೆಬ್ಸೈಟ್ನಲ್ಲಿ ಪ್ರಕಟಿಸಿದೆ. ದೆಹಲಿ, ಮುಂಬೈ, ಚೆನ್ನೈ, ಕೊಲ್ಕತ್ತಾ, ಹೈದರಾಬಾದ್, ಬೆಂಗಳೂರು, ಪಟ್ನಾ, ಶ್ರೀನಗರ, ಭುವನೇಶ್ವರ, ಅಮೃತಸರ್, ಶ್ರೀನಗರ ಮತ್ತು ಗುವಾಹಟಿ ವಿಮಾನ ನಿಲ್ದಾಣಗಳಿಂದ ಹೊರಡುವ ವಿಮಾನಗಳನ್ನು ರದ್ದುಪಡಿಸಿರುವುದಾಗಿ ತಿಳಿಸಿದೆ. 

ಸೋಮವಾರ ಮಿಡ್-ಏರ್ ಎಂಜಿನ್ ವೈಫಲ್ಯದ ಕಾರಣದಿಂದಾಗಿ, ಲಕ್ನೌನ ಇಂಡಿಗೊ ವಿಮಾನವು ಅಹಮದಾಬಾದ್ಗೆ 40 ನಿಮಿಷಗಳಲ್ಲಿ ಮರಳಿದ ನಂತರ ಡಿಜಿಸಿಎ ಈ ನಿರ್ಧಾರ ಕೈಗೊಂಡಿದೆ.

Trending News