'ಭಾರತದ ಮುಂದಿನ ಗುರಿ 5 ಟ್ರಿಲಿಯನ್ ಆರ್ಥಿಕತೆ'; ಬ್ಯಾಂಕಾಕ್‌ನಲ್ಲಿ ಮೋದಿ

ಥೈಲ್ಯಾಂಡ್ಗೆ ಭೇಟಿ ನೀಡಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ, ಈ ಸಮಯದಲ್ಲಿ ಭಾರತದಲ್ಲಿ ಹೂಡಿಕೆ ಮಾಡಲು ಇದು ಅತ್ಯುತ್ತಮ ಸಮಯ ಎಂದು ಹೇಳಿದರು.   

Last Updated : Nov 3, 2019, 10:18 AM IST
'ಭಾರತದ ಮುಂದಿನ ಗುರಿ 5 ಟ್ರಿಲಿಯನ್ ಆರ್ಥಿಕತೆ'; ಬ್ಯಾಂಕಾಕ್‌ನಲ್ಲಿ ಮೋದಿ title=
Photo Courtesy: ANI

ಬ್ಯಾಂಕಾಕ್: ಥೈಲ್ಯಾಂಡ್ಗೆ ಭೇಟಿ ನೀಡಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ, ಈ ಸಮಯದಲ್ಲಿ ಭಾರತದಲ್ಲಿ ಹೂಡಿಕೆ ಮಾಡಲು ಇದು ಅತ್ಯುತ್ತಮ ಸಮಯ ಎಂದು ತಿಳಿಸಿದ್ದಾರೆ. ಆದಿತ್ಯ ಬಿರ್ಲಾ ಸಮೂಹದ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಪಿಎಂ ಮೋದಿ ಈ ವಿಷಯ ತಿಳಿಸಿದರು.

ಭಾರತದಲ್ಲಿ ತೆರಿಗೆಗಳು, ತೆರಿಗೆ ದರಗಳು, ಭ್ರಷ್ಟಾಚಾರ ಕಡಿಮೆಯಾಗುತ್ತಿದೆ. ದೇಶದಲ್ಲಿರಲು ಇದು ಅತ್ಯುತ್ತಮ ಸಮಯ. ಭಾರತದಲ್ಲೀಗ ವ್ಯಾಪಾರ ಮಾಡುವುದು ಸುಲಭ, ಜೀವನ ಸುಲಭ, ಎಫ್‌ಡಿಐ, ಅರಣ್ಯ ವ್ಯಾಪ್ತಿ, ಉತ್ಪಾದಕತೆ, ಮೂಲಸೌಕರ್ಯಗಳು ಹೆಚ್ಚಾಗುತ್ತಿವೆ ಎಂದವರು ಮಾಹಿತಿ ನೀಡಿದರು. 

ಭಾರತದ ಮುಂದಿನ ಗುರಿ 5 ಟ್ರಿಲಿಯನ್ ಆರ್ಥಿಕತೆ ಸಾಧಿಸುವುದು. ನನ್ನ(ನರೇಂದ್ರ ಮೋದಿ) ಸರ್ಕಾರ 2014 ರಲ್ಲಿ ಅಧಿಕಾರಕ್ಕೆ ಬಂದಾಗ, ಭಾರತದ ಜಿಡಿಪಿ ಸುಮಾರು 2 ಟ್ರಿಲಿಯನ್ ಡಾಲರ್ ಆಗಿತ್ತು. 65 ವರ್ಷಗಳಲ್ಲಿ 2 ಟ್ರಿಲಿಯನ್, ಆದರೆ ಈಗ ಕೇವಲ ಐದು ವರ್ಷಗಳಲ್ಲಿ ನಾವು ಅದನ್ನು ಸುಮಾರು 3 ಟ್ರಿಲಿಯನ್ಗೆ ಹೆಚ್ಚಿಸಿದ್ದೇವೆ ಎಂದರು.

ಕಳೆದ ಐದು ವರ್ಷಗಳಲ್ಲಿ ಭಾರತವು ಅನೇಕ ಯಶಸ್ಸಿನ ಕಥೆಗಳನ್ನು ನೋಡಿದೆ. ಇದಕ್ಕೆ ಕಾರಣ ಕೇವಲ ಸರ್ಕಾರವಲ್ಲ, ಭಾರತ ಈಗ ಹಳೆಯ ಅಧಿಕಾರಶಾಹಿ ಮನೋಭಾವದಲ್ಲಿ ಕೆಲಸ ಮಾಡುವುದನ್ನು ನಿಲ್ಲಿಸಿರುವುದು ಎಂದು ನರೇಂದ್ರ ಮೋದಿ ಹೇಳಿದರು.

'ವರ್ಷಗಳಿಂದ ಬಡವರಿಗಾಗಿ ಖರ್ಚು ಮಾಡಿದ ಹಣ ಬಡವರಿಗೆ ತಲುಪಲಿಲ್ಲ ಎಂದು ತಿಳಿದರೆ ನಿಮಗೆ ಆಶ್ಚರ್ಯವಾಗುತ್ತದೆ. ನಮ್ಮ ಸರ್ಕಾರ ನೇರ ಲಾಭ ವರ್ಗಾವಣೆಯ ಮೂಲಕ ಈ ಸಂಸ್ಕೃತಿಯನ್ನು ರದ್ದುಗೊಳಿಸಿದೆ' ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ನುಡಿದರು.

Trending News