ರೈಲು ಅಪಘಾತ ತಪ್ಪಿಸಲು ಹೊಸ ಯೋಜನೆ: 1000 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗ್ತಿದೆ ʼಕವಚ್‌ʼ

ಹಳಿಗಳ ಮೇಲೆ ನಡೆಯುವ ಕಾಮಗಾರಿಗಳ ಅಂದಾಜು ವೆಚ್ಚ ಪ್ರತಿ ಕಿಲೋಮೀಟರ್‌ಗೆ 20 ಲಕ್ಷ ರೂಪಾಯಿಗಳಾಗಿದ್ದರೆ, ಇಂಜಿನ್‌ನ ಒಳಗೆ ಅಳವಡಿಸುವ ವೆಚ್ಚವು ಪ್ರತಿ ಲೋಕೋ (ರೈಲ್ ಇಂಜಿನ್) ಗೆ 60 ಲಕ್ಷ ರೂಪಾಯಿಗಳಾಗಿರುತ್ತದೆ.  

Written by - Bhavishya Shetty | Last Updated : Jun 16, 2022, 08:22 AM IST
  • ದೇಶದ ಅತಿದೊಡ್ಡ ಸಾರ್ವಜನಿಕ ಸಾರಿಗೆ ಭಾರತೀಯ ರೈಲ್ವೆ
  • 1000 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗ್ತಿದೆ ʼಕವಚ್‌ ವ್ಯವಸ್ಥೆ
  • ಈ ಬಗ್ಗೆ ರೈಲ್ವೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ
ರೈಲು ಅಪಘಾತ ತಪ್ಪಿಸಲು ಹೊಸ ಯೋಜನೆ: 1000 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗ್ತಿದೆ ʼಕವಚ್‌ʼ title=
Indian Railways

ದೇಶದ ಅತಿದೊಡ್ಡ ಸಾರ್ವಜನಿಕ ಸಾರಿಗೆ ಭಾರತೀಯ ರೈಲ್ವೆಯಲ್ಲಿ ಸುರಕ್ಷತೆ ಯಾವಾಗಲೂ ದೊಡ್ಡ ಸವಾಲಾಗಿರುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಭವಿಷ್ಯದಲ್ಲಿ ರೈಲು ಅಪಘಾತಗಳನ್ನು ತಡೆಯಲು ಮೇಡ್ ಇನ್ ಇಂಡಿಯಾ ಸುರಕ್ಷತಾ ವ್ಯವಸ್ಥೆ ಬಂದಿದೆ. ರೈಲುಗಳ ಘರ್ಷಣೆಯನ್ನು ತಪ್ಪಿಸುವ ಸಲುವಾಗಿ, ರೈಲ್ವೆ ಇಲಾಖೆಯು ತನ್ನ 3,000-ಕಿಮೀ ಉದ್ದದ ದೆಹಲಿ-ಮುಂಬೈ ಮಾರ್ಗ ಮತ್ತು ದೆಹಲಿ-ಹೌರಾ ಮಾರ್ಗದ ರೈಲು ಸೇವೆಗೆ 1000 ಕೋಟಿ ರೂಪಾಯಿಗಳ ಅಂದಾಜು ವೆಚ್ಚದ ಭದ್ರತಾ ವ್ಯವಸ್ಥೆಯನ್ನು ಮಾಡಲಿದೆ. ಈ ಭದ್ರತಾ ವ್ಯವಸ್ಥೆಗೆ ʼಕವಚ್‌ʼ ಎಂದು ಹೆಸರಿಡಲಾಗಿದೆ. ಈ ಬಗ್ಗೆ ರೈಲ್ವೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

ಇದನ್ನೂ ಓದಿ: CET Exam 2022: ಇಂದಿನಿಂದ ಮೂರು ದಿನ ಸಿಇಟಿ ಪರೀಕ್ಷೆ- ಎಲ್ಲೆಡೆ ಕ್ಯಾಮೆರಾ ಕಣ್ಗಾವಲು

ಈ ಹೊಸ ಕವಚ್ ಡಿಜಿಟಲ್ ವ್ಯವಸ್ಥೆಯು, ಕೆಂಪು ಸಿಗ್ನಲ್ ಬ್ರೇಕಿಂಗ್ ಅಥವಾ ಇನ್ನಾವುದೇ ದೋಷವನ್ನು ಪತ್ತೆಹಚ್ಚಿದಾಗ ಸ್ವಯಂಚಾಲಿತವಾಗಿ ರೈಲುಗಳನ್ನು ನಿಲ್ಲಿಸುತ್ತದೆ. 3000 ಕಿಮೀ ಉದ್ದದ ರೈಲು ಜಾಲ ಮತ್ತು 760 ಇಂಜಿನ್‌ಗಳಲ್ಲಿ ಈ ವ್ಯವಸ್ಥೆಯನ್ನು ಅಳವಡಿಸಲು ರೈಲ್ವೆ 11 ಟೆಂಡರ್‌ಗಳನ್ನು ಆಹ್ವಾನಿಸಿದೆ. ಇದರ ಅಡಿಯಲ್ಲಿ, ಟ್ರ್ಯಾಕ್‌ಗಳ ಉದ್ದಕ್ಕೂ ರಿಸೀವರ್‌ಗಳನ್ನು ಸ್ಥಾಪಿಸಲಾಗುತ್ತದೆ ಮತ್ತು ಟ್ರಾನ್ಸ್‌ಮಿಟರ್‌ಗಳನ್ನು ಲೋಕೋ ಒಳಗೆ ಇಡಲಾಗುತ್ತದೆ. ಹಳಿಗಳ ಮೇಲೆ ನಡೆಯುವ ಕಾಮಗಾರಿಗಳ ಅಂದಾಜು ವೆಚ್ಚ ಪ್ರತಿ ಕಿಲೋಮೀಟರ್‌ಗೆ 20 ಲಕ್ಷ ರೂಪಾಯಿಗಳಾಗಿದ್ದರೆ, ಇಂಜಿನ್‌ನ ಒಳಗೆ ಅಳವಡಿಸುವ ವೆಚ್ಚವು ಪ್ರತಿ ಲೋಕೋ (ರೈಲ್ ಇಂಜಿನ್) ಗೆ 60 ಲಕ್ಷ ರೂಪಾಯಿಗಳಾಗಿರುತ್ತದೆ.

'ಕವಚ' ವ್ಯವಸ್ಥೆ ಎಂದರೇನು?
ರೈಲ್ವೇ ತಯಾರಿಸಿರುವ ನೂತನ ತಂತ್ರಜ್ಞಾನದ ನೆರವಿನಿಂದ, ಎರಡು ರೈಲುಗಳು ವಿರುದ್ಧ ದಿಕ್ಕಿನಿಂದ ಬಂದರೂ, ಎರಡರ ವೇಗ ಏನೇ ಇದ್ದರೂ ಸಹ ಎರಡೂ ರೈಲುಗಳು ‘ರಕ್ಷಾಕವಚ’ದಿಂದ ಡಿಕ್ಕಿಯಾಗದೆ ಉಳಿಯಲಿದೆ. ಹೈ ಫ್ರೀಕ್ವೆನ್ಸಿ ರೇಡಿಯೋ ಸಂವಹನವನ್ನು 'ಕವಚ' ವ್ಯವಸ್ಥೆಯಲ್ಲಿ ಬಳಸಲಾಗುತ್ತದೆ. ಈ ಕವಚ್ ರೇಡಿಯೋ ಸಂವಹನ, ಮೈಕ್ರೊಪ್ರೊಸೆಸರ್, ಗ್ಲೋಬ್ ಪೊಸಿಷನಿಂಗ್ ಸಿಸ್ಟಮ್ ತಂತ್ರಜ್ಞಾನವು ಆಂಟಿ ಕೊಲಿಶನ್‌ ಟೆಕ್‌ (Anti Collision Tech)ಸಾಧನ ಜಾಲವಾಗಿದೆ. ಈ ತಂತ್ರಜ್ಞಾನದ ಅಡಿಯಲ್ಲಿ 'ಕವಚ್ʼನ್ನು ಎರಡು ಮುಖಾಮುಖಿಯಾಗುವ ರೈಲುಗಳಲ್ಲಿ ಅಳವಡಿಸಿದಾಗ, ಈ ತಂತ್ರಜ್ಞಾನವು ಸ್ವಯಂಚಾಲಿತ ಬ್ರೇಕಿಂಗ್ ಕ್ರಿಯೆಯನ್ನು ಪ್ರಾರಂಭಿಸುತ್ತದೆ ಮತ್ತು ಪರಸ್ಪರ ನಿಯಂತ್ರಿಸಲು ಸಹಾಯ ಮಾಡುತ್ತದೆ. ಇದರಿಂದಾಗಿ ರೈಲುಗಳು ಡಿಕ್ಕಿಯಾಗುವುದನ್ನು ತಡೆಯುತ್ತದೆ.

ಇದನ್ನು ಓದಿ: ಹಣಕಾಸಿನ ಬಿಕ್ಕಟ್ಟಿನಿಂದ ತೊಂದರೆಗೀಡಾಗಿದ್ದೀರಾ? ವೀಳ್ಯದೆಲೆಯ ಈ ಪರಿಹಾರಗಳನ್ನು ಮಾಡಿ

ರಕ್ಷಾಕವಚವು ಭದ್ರತಾ ವ್ಯವಸ್ಥೆಯ ಅತ್ಯುನ್ನತ ಮಟ್ಟವಾದ SIL-4 (ಸೆಕ್ಯುರಿಟಿ ಸ್ಟ್ಯಾಂಡರ್ಡ್ ಲೆವೆಲ್ ಫೋರ್) ಗೆ ಅನುಗುಣವಾಗಿದೆ. ದೆಹಲಿ-ಮುಂಬೈ ಮತ್ತು ದೆಹಲಿ-ಹೌರಾ ಮಾರ್ಗಗಳಲ್ಲಿ ಈ ವ್ಯವಸ್ಥೆಯನ್ನು ಪರಿಚಯಿಸುವುದರೊಂದಿಗೆ, ಎಲ್ಲಾ ರೈಲು ಪ್ರಯಾಣಿಕರ ಪ್ರಯಾಣವು ಹೆಚ್ಚು ಸುರಕ್ಷಿತವಾಗಿರುತ್ತದೆ. ಮುಂಬರುವ ದಿನಗಳಲ್ಲಿ ದೇಶದ ಸುಮಾರು ಎರಡು ಸಾವಿರ ಮಾರ್ಗಗಳಲ್ಲಿ ಈ ರಕ್ಷಾಕವಚವನ್ನು ಅಳವಡಿಸಲಾಗುವುದು. ಇದರಿಂದ ಪ್ರತಿಯೊಬ್ಬ ಭಾರತೀಯನ ಪ್ರಯಾಣವು ಹೆಚ್ಚು ಸುರಕ್ಷಿತವಾಗಿರುತ್ತದೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News