ಮೇ 12 ರಿಂದ 20ರವರೆಗಿನ ರೈಲ್ವೆ ವೇಳಾಪಟ್ಟಿ, ರೈಲು ಯಾವ ಯಾವ ನಿಲ್ದಾಣಗಳಲ್ಲಿ ನಿಲ್ಲಲಿದೆ?

ರೈಲು ಪ್ರಯಾಣಗಳು ಮೊದಲಿನಂತೆಯೇ ಇರುವುದಿಲ್ಲ ಎಂಬುದನ್ನು ಪ್ರಯಾಣಿಕರು ನೆನಪಿನಲ್ಲಿಟ್ಟುಕೊಳ್ಳಬೇಕು.

Last Updated : May 11, 2020, 11:30 AM IST
ಮೇ 12 ರಿಂದ 20ರವರೆಗಿನ ರೈಲ್ವೆ ವೇಳಾಪಟ್ಟಿ, ರೈಲು ಯಾವ ಯಾವ ನಿಲ್ದಾಣಗಳಲ್ಲಿ ನಿಲ್ಲಲಿದೆ? title=

ನವದೆಹಲಿ: ಭಾರತೀಯ ರೈಲ್ವೆ ತನ್ನ ಸೇವೆಗಳನ್ನು ಪುನರಾರಂಭಿಸಲು ಸಿದ್ಧತೆಗಳನ್ನು ಮಾಡಿದೆ. ಆರಂಭದಲ್ಲಿ, ಮೇ 12 ರಿಂದ ನವದೆಹಲಿ ರೈಲ್ವೆ ನಿಲ್ದಾಣದಿಂದ ದೇಶದ ವಿವಿಧ ಭಾಗಗಳಿಗೆ 15 ವಿಶೇಷ ರೈಲುಗಳನ್ನು ಓಡಿಸಲಾಗುವುದು. ರೈಲ್ವೆಯ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು ಈ ವಿಶೇಷ ರೈಲುಗಳ ವೇಳಾಪಟ್ಟಿಯನ್ನು ಮೇ 20 ರವರೆಗೆ ಬಿಡುಗಡೆ ಮಾಡಲಾಗಿದೆ. ಈ ರೈಲುಗಳಿಗೆ ದಾರಿಯುದ್ದಕ್ಕೂ ನಿಲುಗಡೆಗಳನ್ನು ನೀಡಿರುವ ನಿಲ್ದಾಣಗಳ ಪಟ್ಟಿಯನ್ನು ಸಹ ಬಿಡುಗಡೆ ಮಾಡಲಾಗಿದೆ.

ನಿಗದಿತ ಸಮಯಕ್ಕೂ ಮೊದಲೇ ನಿಲ್ದಾಣಕ್ಕೆ ಬರಬೇಕು:
ರೈಲು ಪ್ರಯಾಣಗಳು ಮೊದಲಿನಂತೆಯೇ ಇರುವುದಿಲ್ಲ ಎಂಬುದನ್ನು ಪ್ರಯಾಣಿಕರು ನೆನಪಿನಲ್ಲಿಟ್ಟುಕೊಳ್ಳಬೇಕು. ಕಕೊರೊನಾವೈರಸ್ (Coronavirus) ‌ನ ಅಪಾಯದ ದೃಷ್ಟಿಯಿಂದ ರೈಲುಗಳಲ್ಲಿ ಹಾಗೂ ರೈಲು ನಿಲ್ದಾಣಗಳಲ್ಲಿ ಅನೇಕ ಸಾಮಾಜಿಕ ದೂರ ಮತ್ತು ವೈದ್ಯಕೀಯ ಪ್ರೋಟೋಕಾಲ್‌ಗಳನ್ನು ಅನುಸರಿಸಲಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ ರೈಲು ಓಡಲು ಪ್ರಾರಂಭಿಸುವ ಎರಡು ಗಂಟೆಗಳ ಮೊದಲು ನೀವು ನಿಲ್ದಾಣವನ್ನು ತಲುಪಬೇಕು.

ನಾಳೆಯಿಂದ ಯಾವ ಯಾವ ಸ್ಥಳಗಳಿಗೆ ರೈಲು ಸಂಚರಿಸಲಿದೆ ಎಂಬುದರ ಮಾಹಿತಿ ಇಲ್ಲಿದೆ

ಇಲ್ಲಿಂದ ಟಿಕೆಟ್ ಕಾಯ್ದಿರಿಸಿ: 
ನಿಲ್ದಾಣದಲ್ಲಿ ರೈಲ್ವೆ ನಿಲ್ದಾಣದಿಂದ ಯಾವುದೇ ಟಿಕೆಟ್ ಮಾರಾಟವಾಗುವುದಿಲ್ಲ. ಅಂತಹ ಪರಿಸ್ಥಿತಿಯಲ್ಲಿ ಟಿಕೆಟ್ ಬುಕ್ ಮಾಡುವ ಸಲುವಾಗಿ ನಿಲ್ದಾಣಕ್ಕೆ ಹೋಗಬೇಡಿ. ಟಿಕೆಟ್ ಕಾಯ್ದಿರಿಸುವಿಕೆಯನ್ನು ಸೋಮವಾರ 11.5.2020 ರಿಂದ ಸಂಜೆ 4 ಗಂಟೆಗೆ ಐಆರ್‌ಸಿಟಿಸಿ ವೆಬ್‌ಸೈಟ್ www.irctc.co.in ಮತ್ತು ಮೊಬೈಲ್ ಆ್ಯಪ್ ಮೂಲಕ ಮಾಡಬಹುದು.

ರೈಲುಗಳ ವೇಳಾಪಟ್ಟಿಯನ್ನು ಮತ್ತು ಯಾವ ನಿಲ್ದಾಣಗಳಲ್ಲಿ ರೈಲು ನಿಲ್ಲುತ್ತದೆ ಇಲ್ಲಿ ನೋಡಿ...

ಯಾವ-ಯಾವ ನಗರಗಳಿಗೆ ರೈಲು ಸಂಚರಿಸಲಿದೆ?
ರೈಲು ಸೇವೆ ಪ್ರಾರಂಭಿಸಲು ಭಾರತೀಯ ರೈಲ್ವೆ ನಿರ್ಧರಿಸಿದ ನಗರಗಳಲ್ಲಿ, ಅಸ್ಸಾಂನ ದಿಬ್ರುಗರ್ಹ್, ತ್ರಿಪುರದ ಅಗರ್ತಲಾ, ಕೋಲ್ಕತ್ತಾದ ಹಬ್ರಾ (ಹೌರಾ), ಬಿಹಾರದ ಪಾಟ್ನಾ, ಛತ್ತೀಸ್‌ಗಢದ ಬಿಲಾಸ್ಪುರ್, ಜಾರ್ಖಂಡ್‌ನ ರಾಂಚಿ, ಒಡಿಶಾದ ಭುವನೇಶ್ವರ, ಸಿಕಂದರಾಬಾದ್, ಬೆಂಗಳೂರು, ಚೆನ್ನೈ, ತಿರುವನಂತಪುರಂ, ಮಡ್ಗಾಂವ್, ಮುಂಬೈ ಸೆಂಟ್ರಲ್, ಅಹಮದಾಬಾದ್ ಮತ್ತು ಜಮ್ಮು-ತಾವಿ ಸೇರಿವೆ.

Trending News