Railway Department ನಿಂದ ಮಹತ್ವದ ಮಾಹಿತಿ ನಿಮಗಾಗಿ: ಪ್ರಯಾಣಿಕರಿಗೆ ಸಂತಸ ನೀಡೋದು ಪಕ್ಕಾ

ರೈಲ್ವೇಯು ಚಕ್ರಗಳ ತಯಾರಿಕೆಗೆ ಖಾಸಗಿ ವಲಯಕ್ಕೆ ಟೆಂಡರ್ ಆಹ್ವಾನಿಸಿರುವುದು ಇದೇ ಮೊದಲು ಎಂದು ಅವರು ಹೇಳಿದರು. ಭಾರತೀಯ ರೈಲ್ವೆಗೆ ಪ್ರತಿ ವರ್ಷ ಎರಡು ಲಕ್ಷ ಚಕ್ರಗಳ ಅಗತ್ಯವಿದೆ.

Written by - Bhavishya Shetty | Last Updated : Sep 10, 2022, 12:44 PM IST
    • ರೈಲು ಚಕ್ರಗಳನ್ನು ಉತ್ಪಾದಿಸುವ ಕಾರ್ಖಾನೆ ಸ್ಥಾಪಿಸಲು ನಿರ್ಧಾರ
    • ಕನಿಷ್ಠ 80,000 ಚಕ್ರಗಳನ್ನು ಉತ್ಪಾದಿಸುವ ಚಕ್ರ ಕಾರ್ಖಾನೆ
    • ಭಾರತೀಯ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಮಹತ್ವದ ಘೋಷಣೆ
Railway Department ನಿಂದ ಮಹತ್ವದ ಮಾಹಿತಿ ನಿಮಗಾಗಿ: ಪ್ರಯಾಣಿಕರಿಗೆ ಸಂತಸ ನೀಡೋದು ಪಕ್ಕಾ title=
Ashwini Vaishnaw

ಭಾರತೀಯ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಈಗ ದೊಡ್ಡ ಘೋಷಣೆ ಮಾಡಿದ್ದಾರೆ. ಪ್ರತಿ ವರ್ಷ ಕನಿಷ್ಠ 80,000 ರೈಲು ಚಕ್ರಗಳನ್ನು ಉತ್ಪಾದಿಸುವ ಚಕ್ರ ಕಾರ್ಖಾನೆಯನ್ನು ಸ್ಥಾಪಿಸಲು ರೈಲ್ವೆ ಟೆಂಡರ್ ಅನ್ನು ಕರೆಯಲಾಗುತ್ತದೆ ಎಂದು ರೈಲ್ವೆ ಸಚಿವರು ಹೇಳಿದ್ದಾರೆ. ಅಲ್ಲದೆ, ರೈಲು ಚಕ್ರಗಳ ರಫ್ತುದಾರರಾಗಲು ನೀಲನಕ್ಷೆಯನ್ನು ಸಿದ್ಧಪಡಿಸಲಾಗಿದೆ.

ರೈಲ್ವೇಸ್ ಮೊದಲ ಬಾರಿಗೆ ರೈಲ್ ವೀಲ್ ಪ್ಲಾಂಟ್‌ಗಳನ್ನು ಸ್ಥಾಪಿಸಲು ಖಾಸಗಿ ಕಂಪನಿಗಳನ್ನು ಆಹ್ವಾನಿಸಿದೆ ಎಂದು ವೈಷ್ಣವ್ ಹೇಳಿದರು. ಈ 'ಮೇಕ್ ಇನ್ ಇಂಡಿಯಾ' ಪ್ಲಾಂಟ್‌ನಲ್ಲಿ ಹೈಸ್ಪೀಡ್ ರೈಲುಗಳು ಮತ್ತು ಪ್ಯಾಸೆಂಜರ್ ಕೋಚ್‌ಗಳಿಗೆ ಚಕ್ರಗಳನ್ನು ತಯಾರಿಸಲಾಗುವುದು. ಪ್ರತಿ ವರ್ಷ ಇಲ್ಲಿ ತಯಾರಾಗುವ 80,000 ಚಕ್ರಗಳಿಗೆ 600 ಕೋಟಿ ರೂ.ಗಳ ಖಚಿತ ಖರೀದಿ ಮಾಡಲಾಗುವುದು ಎಂದು ಹೇಳಿದರು. 

ಇದನ್ನೂ ಓದಿ: ಇಂದಿನಿಂದ ಪಿತೃಪಕ್ಷ ಆರಂಭ, ಈ ತಪ್ಪುಗಳನ್ನು ಮಾಡ್ಬೇಡಿ, ಮುಹೂರ್ತಗಳ ವಿವರ ಇಲ್ಲಿದೆ

ರೈಲ್ವೇಯು ಚಕ್ರಗಳ ತಯಾರಿಕೆಗೆ ಖಾಸಗಿ ವಲಯಕ್ಕೆ ಟೆಂಡರ್ ಆಹ್ವಾನಿಸಿರುವುದು ಇದೇ ಮೊದಲು ಎಂದು ಅವರು ಹೇಳಿದರು. ಭಾರತೀಯ ರೈಲ್ವೆಗೆ ಪ್ರತಿ ವರ್ಷ ಎರಡು ಲಕ್ಷ ಚಕ್ರಗಳ ಅಗತ್ಯವಿದೆ. ಈ ಯೋಜನೆಯ ಪ್ರಕಾರ, ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ ಲಿಮಿಟೆಡ್ (SAIL) ಒಂದು ಲಕ್ಷ ಚಕ್ರಗಳನ್ನು ತಯಾರಿಸುತ್ತದೆ, ಉಳಿದ ಒಂದು ಲಕ್ಷ ಚಕ್ರಗಳನ್ನು ಈ ಹೊಸ 'ಮೇಕ್ ಇನ್ ಇಂಡಿಯಾ' ಘಟಕದಲ್ಲಿ ತಯಾರಿಸಲಾಗುತ್ತದೆ.

ಈ ಸ್ಥಾವರದಲ್ಲಿ ತಯಾರಿಸಿದ ರೈಲು ಚಕ್ರಗಳನ್ನು ಸಹ ರಫ್ತು ಮಾಡಲಾಗುವುದು ಮತ್ತು ಇದನ್ನು ಯುರೋಪಿಯನ್ ಮಾರುಕಟ್ಟೆಗೆ ರಫ್ತು ಮಾಡುವ ಷರತ್ತಿನ ಮೇಲೆ ಈ ಟೆಂಡರ್ ನೀಡಲಾಗುವುದು ಎಂದು ವೈಷ್ಣವ್ ಹೇಳಿದರು. 18 ತಿಂಗಳೊಳಗೆ ಸ್ಥಾವರ ಸ್ಥಾಪನೆ ಮಾಡುವುದಾಗಿ ಟೆಂಡರ್‌ನಲ್ಲಿ ನಿಬಂಧನೆಯನ್ನೂ ಮಾಡಲಾಗಿದೆ.

ಪ್ರಸ್ತುತ, ರೈಲ್ವೆಗಳು ಹೆಚ್ಚಾಗಿ ಉಕ್ರೇನ್, ಜರ್ಮನಿ ಮತ್ತು ಜೆಕ್ ಗಣರಾಜ್ಯದಿಂದ ಚಕ್ರಗಳನ್ನು ಆಮದು ಮಾಡಿಕೊಳ್ಳುತ್ತವೆ. ಆದರೆ ಉಕ್ರೇನ್ ಮೇಲೆ ರಷ್ಯಾ ನಡೆಸಿದ ದಾಳಿಯಿಂದಾಗಿ ಚಕ್ರಗಳ ಖರೀದಿ ಸ್ಥಗಿತಗೊಂಡಿದ್ದು, ರೈಲ್ವೇ ಪರ್ಯಾಯ ಮಾರ್ಗಗಳನ್ನು ಹುಡುಕುವ ಅನಿವಾರ್ಯತೆಗೆ ಸಿಲುಕಿದೆ.

ಉತ್ಪಾದನಾ ನಿರ್ಧಾರ: 

"ಇಂದು ಈ ಟೆಂಡರ್ ಅನ್ನು ಘೋಷಿಸಲಾಗಿದೆ. ನಾವು 1960 ರಿಂದ ಯುರೋಪಿಯನ್ ದೇಶಗಳಿಂದ ಚಕ್ರಗಳನ್ನು ಆಮದು ಮಾಡಿಕೊಳ್ಳುತ್ತಿದ್ದೇವೆ. ಈಗ ನಾವು ಅವುಗಳನ್ನು ತಯಾರಿಸಿ ರಫ್ತು ಮಾಡಲು ನಿರ್ಧರಿಸಿದ್ದೇವೆ" ಎಂದು ರೈಲ್ವೆ ಸಚಿವರು ಹೇಳಿದರು. ದೇಶದಲ್ಲಿ ಇದಕ್ಕೆ ಬೇಕಾದ ಕಚ್ಚಾ ವಸ್ತುಗಳ ಲಭ್ಯತೆ ಮುಂತಾದ ಅಂಶಗಳ ಬಗ್ಗೆ ಸಂಪೂರ್ಣ ತಾಂತ್ರಿಕ ವಿಶ್ಲೇಷಣೆ ಮತ್ತು ಚರ್ಚೆಯ ನಂತರ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಹೇಳಿದರು. ಒಂದು ಚಕ್ರದ ಆಮದು ಮೇಲೆ 70,000 ರೂಪಾಯಿಗಳನ್ನು ಪಾವತಿಸಬೇಕಾಗಿರುವುದರಿಂದ ರೈಲು ಚಕ್ರಗಳ ದೇಶೀಯ ಉತ್ಪಾದನೆಯು ರೈಲ್ವೇಗೆ ಸಾಕಷ್ಟು ಉಳಿತಾಯವನ್ನು ಮಾಡುತ್ತದೆ ಎಂದು ರೈಲ್ವೆ ಅಧಿಕಾರಿಗಳು ಅಂದಾಜಿಸಿದ್ದಾರೆ.

ಕಾರಿಡಾರ್ ಮತ್ತು ಬುಲೆಟ್ ಟ್ರೈನ್‌ಗಾಗಿ ಭಾರತವು ಹೆಚ್ಚಿನ ಸಾಮರ್ಥ್ಯದ ಹಳಿಗಳನ್ನು (ಹಳಿಗಳು) ಆಮದು ಮಾಡಿಕೊಂಡಿದೆ ಎಂದು ವೈಷ್ಣವ್ ಹೇಳಿದರು, ಆದರೆ ಈಗ ಅವುಗಳನ್ನು ದೇಶದಲ್ಲೇ ತಯಾರು ಮಾಡಲು ಒಪ್ಪಂದ ಮಾಡಿಕೊಳ್ಳಲು ಹೊರಟಿದೆ. ಈ ಮೇಕ್ ಇನ್ ಇಂಡಿಯಾ ಒಪ್ಪಂದದಡಿಯಲ್ಲಿ ದೇಶದೊಳಗೆ ಹೆಚ್ಚಿನ ಸಾಮರ್ಥ್ಯದ ಹಳಿಗಳನ್ನು ತಯಾರಿಸಲಾಗುವುದು’ ಎಂದರು.

ಇದನ್ನೂ ಓದಿಏಷ್ಯಾಕಪ್ ಸೋಲು: ‘ಕೋಚ್ ರಾಹುಲ್ ದ್ರಾವಿಡ್ ಹನಿಮೂನ್ ಅವಧಿ ಮುಗಿದಿದೆ’!

ವಂದೇ ಭಾರತ್ ರೈಲುಗಳಿಗೆ 39,000 ಚಕ್ರಗಳನ್ನು ಪೂರೈಸಲು ಚೀನಾದ ಕಂಪನಿಯೊಂದಕ್ಕೆ ರೈಲ್ವೆಯು ಮೇ ತಿಂಗಳಲ್ಲಿ 170 ಕೋಟಿ ರೂಪಾಯಿಗಳ ಗುತ್ತಿಗೆಯನ್ನು ನೀಡಿತ್ತು. 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News