Post Office ಮೂಲಕ 1 ಕೋಟಿ ರೂ. ಗಳಿಸಬೇಕೆ? ಇಲ್ಲಿದೆ Crorepati Calculator

ಇಂದಿನ ಕಾಲದಲ್ಲಿ ತಮ್ಮ ಹೂಡಿಕೆಗೆ ಉತ್ತಮ ಆದಾಯ ಬರುವ ಯೋಜನೆಯಲ್ಲಿ ಪ್ರತಿಯೊಬ್ಬರೂ ತಮ್ಮ ಹಣವನ್ನು ಹೂಡಿಕೆ ಮಾಡಲು ಬಯಸುತ್ತಾರೆ.

Last Updated : Jun 24, 2020, 10:45 AM IST
Post Office ಮೂಲಕ 1 ಕೋಟಿ ರೂ. ಗಳಿಸಬೇಕೆ? ಇಲ್ಲಿದೆ Crorepati Calculator title=

ನವದೆಹಲಿ: ಇಂದಿನ ಕಾಲದಲ್ಲಿ ತಮ್ಮ ಹೂಡಿಕೆಗೆ ಉತ್ತಮ ಆದಾಯ ಬರುವ ಯೋಜನೆಯಲ್ಲಿ ಪ್ರತಿಯೊಬ್ಬರೂ ತಮ್ಮ ಹಣವನ್ನು ಹೂಡಿಕೆ ಮಾಡಲು ಬಯಸುತ್ತಾರೆ. ದಿನದಿಂದ ದಿನಕ್ಕೆ ಗಗನಮುಖಿಯಾಗುತ್ತಿವ ಹಣದುಬ್ಬರವನ್ನು ಗಮನದಲ್ಲಿಟ್ಟುಕೊಂಡು ಭವಿಷ್ಯದಲ್ಲಿ ಉತ್ತಮ ಹಣ ಸಂಗ್ರಹಿಸುವುದು ಬಹಳ ಮುಖ್ಯವಾಗಿದೆ. ಇದಕ್ಕಾಗಿ ಜನರು ಒಳ್ಳೆಯ ಉಳಿತಾಯ ಯೋಜನೆಗಳನ್ನು ಹುಡುಕಾಡುತ್ತಾರೆ. ಆದರೆ, ಇದೆ ವೇಳೆ ಅವರು ಸಣ್ಣ ಉಳಿತಾಯ ಯೋಜನೆಗಳನ್ನು ನಿರ್ಲಕ್ಷಿಸುತ್ತಾರೆ. ಸಣ್ಣ ಉಳಿತಾಯ ಯೋಜನೆಗಳಿಗಿಂತ ಮ್ಯೂಚವಲ್ ಫಂಡ್ ಗಳು ಉತ್ತಮ ಆಯ್ಕೆಗಳಾಗಿವೆ. ಆದರೆ ಈ ಪ್ರವೃತ್ತಿ ಕೂಡ ಇಂದಿನ ಯುಗದಲ್ಲಿ ಬದಲಾಗುತ್ತಿರುವಂತೆ ತೋರುತ್ತಿದೆ. ಕೊರೊನಾ ವೈರಸ್ ಸೃಷ್ಟಿಸಿರುವ ಬಿಕ್ಕಟ್ಟಿನ ನಡುವೆ ಜನರು ಮತ್ತೊಮ್ಮೆ ಸುರಕ್ಷಿತ ಹೂಡಿಕೆಯತ್ತ ಮುಖಮಾಡಿದ್ದಾರೆ. ಹೀಗಾಗಿ ಪೋಸ್ಟ್ ಆಫೀಸ್ ನ ಸಣ್ಣ ಉಳಿತಾಯ ಯೋಜನೆಗಳು ಒಂದು ಸಂಪೂರ್ಣ ಸುರಕ್ಷತೆಯ ಹೂಡಿಕೆಗಳಾಗಿವೆ. ಸ್ವಲ್ಪ ಜಾಣ್ಮೆ ಹಾಗೂ ತಾಳ್ಮೆ ವಹಿಸಿದರೆ ಪಿಪಿಎಫ್ ಮತ್ತು ಆರ್.ಡಿಗಳಂತಹ ಯೋಜನೆಗಳು ನಿಮ್ಮನ್ನು ದೀರ್ಘಾವಧಿಯಲ್ಲಿ ಶ್ರೀಮಂತರನ್ನಾಗಿಸುತ್ತವೆ. ಈ ಯೋಜನೆಗಳ ಮೂಲಕ ಕೋಟ್ಯಾಧಿಪತಿ ಆಗಲು ಎಷ್ಟು ಹಣ ಹೂಡಿಕೆ ಮಾಡಬೇಕು ಎಂಬುದನ್ನು ನಾವು ತಿಳಿದುಕೊಳ್ಳೋಣ.

ಪಬ್ಲಿಕ್ ಪ್ರಾವಿಡೆಂಟ್ ಫಂಡ್ (PPF)
ಕೋಟ್ಯಾಧಿಪತಿ ಆಗಲು ಬೇಕಾಗುವ ಹೂಡಿಕೆ: 37.5 ಲಕ್ಷ ರೂ.
ಪಿಪಿಎಫ್ ಖಾತೆಯ ಬಡ್ಡಿದರವು ಪ್ರಸ್ತುತ ವಾರ್ಷಿಕ ಶೇ.7.1 ರಷ್ಟಿದೆ. ಈ  ಯೋಜನೆಯಡಿ ವಾರ್ಷಿಕವಾಗಿ ಗರಿಷ್ಠ 1.5 ಲಕ್ಷ ರೂಪಾಯಿಗಳನ್ನು ಜಮಾ ಮಾಡಬಹುದು. ಅಥವಾ ಇದನ್ನು 12 ಕಂತುಗಳಲ್ಲಿ ಅಂದರೆ, ತಿಂಗಳಿಗೆ ಗರಿಷ್ಠ 12500 ರೂ.ಠೇವಣಿ ಇಡಬಹುದು, . ಪಿಪಿಎಫ್‌ನ ಮ್ಯಾಚೂರಿಟಿ ಅವಧಿ 15 ವರ್ಷಗಳು, ಇದನ್ನು ನೀವು ಬೇಕಾದರೆ ಮುಂದಿನ 5–5 ವರ್ಷಗಳವರೆಗೆ ವಿಸ್ತರಿಸಬಹುದು.
ಗರಿಷ್ಠ ವಾರ್ಷಿಕ ಠೇವಣಿ: 1,50,000 ರೂ.
ಬಡ್ಡಿದರ: ವಾರ್ಷಿಕವಾಗಿ 7.1% ಸಂಯುಕ್ತ
25 ವರ್ಷಗಳ ಮ್ಯಾಚೂರಿಟಿ ಬಳಿಕ ಸಿಗುವ ಒಟ್ಟು ಮೊತ್ತ: 1.03 ಕೋಟಿ ರೂ.
ಒಟ್ಟು ಹೂಡಿಕೆ: 37,50,000 (25 ವರ್ಷಗಳವರೆಗೆ ವಾರ್ಷಿಕ 1.5 ಲಕ್ಷ)
ಬಡ್ಡಿ ಲಾಭ: 65,58,015 ರೂ.

ರಿಕರಿಂಗ್ ಡಿಪಾಸಿಟ್(RD)
ಕೋಟ್ಯಾಧಿಪತಿ ಆಗಲು ಬೇಕಾಗುವ ಒಟ್ಟು ಹೂಡಿಕೆ: 40.5 ಲಕ್ಷ ರೂ.
ಪ್ರಸ್ತುತ, ಆರ್‌ಡಿ ಮೇಲಿನ ವಾರ್ಷಿಕವಾಗಿ ಶೇ.5.8ರಷ್ಟು ಬಡ್ಡಿ ಸಿಗುತ್ತದೆ. ಆರ್‌ಡಿಯಲ್ಲಿ ಮಾಸಿಕ ಠೇವಣಿಗಾಗಿ ಗರಿಷ್ಠ ಮಿತಿಯನ್ನು ನಿಗದಿಪಡಿಸಲಾಗಿಲ್ಲ. ಇಲ್ಲಿ ನಾವು ಪಿಪಿಎಫ್‌ಗೆ ಸಮನಾಗಿ ಪ್ರತಿ ತಿಂಗಳು 12500 ಕೊಡುಗೆ ನೀಡಿದರೆ, ನಂತರ….
ಗರಿಷ್ಠ ವಾರ್ಷಿಕ ಠೇವಣಿ: 1,50,000 ರೂ
ಬಡ್ಡಿದರ: ವಾರ್ಷಿಕ 5.8 ಶೇಕಡಾ
27 ವರ್ಷಗಳ ಮ್ಯಾಚೂರಿಟಿ ಬಳಿಕ ಸಿಗುವ ಒಟ್ಟು ಮೊತ್ತ: 99 ಲಕ್ಷ ರೂಪಾಯಿಗಳು
ಒಟ್ಟು ಹೂಡಿಕೆ: 40,50,000 ರೂ.
ಬಡ್ಡಿ ಲಾಭ: 57,46,430 ರೂ.

ನಿಮ್ಮ ಹೂಡಿಕೆ ಶೇ.100 ರಷ್ಟು ಸುರಕ್ಷಿತವಾಗಿರುತ್ತದೆ
ಅಂಚೆ ಕಚೇರಿಯಲ್ಲಿ ಠೇವಣಿ ಇರಿಸಿದ ಹಣವನ್ನು ಸರ್ಕಾರ ತನ್ನ ಕೆಲಸಕ್ಕೆ ಬಳಸುತ್ತದೆ. ಹೀಗಾಗಿ ನೀವು ಹೂಡಿದ ಹಣಕ್ಕೆ ಸರ್ಕಾರವೇ ಸಂಪೂರ್ಣ ಗ್ಯಾರಂಟಿ ವಹಿಸುತ್ತದೆ. ಇದರರ್ಥ ಸಣ್ಣ ಉಳಿತಾಯದಲ್ಲಿ ಠೇವಣಿ ಇಡುವ ಪ್ರತಿಯೊಂದು ಪೈಸೆಯಲ್ಲೂ ಸರ್ಕಾರ ಭದ್ರತೆಯನ್ನು ಖಾತರಿಪಡಿಸುತ್ತದೆ. ಯಾವುದೇ ಸಂದರ್ಭದಲ್ಲೂ ನಿಮ್ಮ ಹಣ ಮುಳುಗುವುದಿಲ್ಲ. ಇನ್ನೊಂದೆಡೆ  ಇಂತಹ ಇತರೆ ಕೆಲ ಯೋಜನೆಗಳಿದ್ದು, ಅವುಗಳಲ್ಲಿ ನೀವು ಹಣ ಹೂಡಿಕೆ ಮಾಡುವ ಮೂಲಕ ತೆರಿಗೆ ವಿನಾಯ್ತಿಗಳಂತಹ ಪ್ರಯೋಜನಗಳನ್ನು ಕೂಡ ಪಡೆಯಬಹುದಾಗಿದೆ. ನಿಮ್ಮ ಹಣವನ್ನು ಸ್ಥಿರ ಬಡ್ಡಿಗೆ ಲಾಕ್ ಮಾಡಿದ ನಂತರ, ನೀವು ಅದಕ್ಕೆ ಅನುಗುಣವಾಗಿ ಆದಾಯವನ್ನು ಪಡೆಯುತ್ತೀರಿ. ಈ ಯೋಜನೆಗಳ ಬಡ್ಡಿದರವನ್ನು ಕಾಲಕಾಲಕ್ಕೆ ಸರ್ಕಾರ ನಿರ್ಧರಿಸುತ್ತದೆ ಎಂಬುದು ಇಲ್ಲಿ ಗಮನಾರ್ಹ.

Trending News