ಮುಂಬೈನಲ್ಲಿ ಮಳೆಯ ರೌದ್ರ ನರ್ತನಕ್ಕೆ ಹೋರ್ಡಿಂಗ್ಸ್ ನೆಲಸಮ: ಮೂವರ ದುರ್ಮರಣ, 59 ಮಂದಿಗೆ ಗಾಯ

ಇದರೊಂದಿಗೆ ಬಲವಾದ ಗಾಳಿಯಿಂದಾಗಿ ವಿದ್ಯುತ್ ತಂತಿಯ ಮೇಲೆ ಬ್ಯಾನರ್ ಬಿದ್ದ ಕಾರಣ ಅಂಧೇರಿ ಪೂರ್ವ ಮೆಟ್ರೋ ನಿಲ್ದಾಣದ ನಡುವೆ ಮೆಟ್ರೋ ಸೇವೆಗಳನ್ನು ನಿಲ್ಲಿಸಲಾಗಿದೆ ಎಂದು ಮೆಟ್ರೋ ರೈಲ್ ವಕ್ತಾರರು ತಿಳಿಸಿದ್ದಾರೆ.ಮುಖ್ಯ ಮಾರ್ಗದಲ್ಲಿ ಉಪನಗರ ಸೇವೆಗಳನ್ನು ನಿಲ್ಲಿಸಲಾಗಿದೆ ಎಂದು ಕೇಂದ್ರ ರೈಲ್ವೆಯ ಮುಖ್ಯ ವಕ್ತಾರರು ತಿಳಿಸಿದ್ದಾರೆ. ಅಕಾಲಿಕ ಮಳೆಯಿಂದಾಗಿ ಬಿಸಿಲಿನ ಬೇಗೆಯಿಂದ ಬೆಂದಿದ್ದ ಜನರು ಕೊಂಚ ನಿರಾಳರಾಗಿದ್ದಾರೆ.

Written by - Bhavishya Shetty | Last Updated : May 13, 2024, 10:15 PM IST
  • ಮಹಾರಾಷ್ಟ್ರದ ಹಲವು ಪ್ರದೇಶಗಳಲ್ಲಿ ಧಾರಾಕಾರ ಮಳೆ
    ಬಲವಾದ ಗಾಳಿಯಿಂದಾಗಿ ವಿದ್ಯುತ್ ತಂತಿಯ ಮೇಲೆ ಬ್ಯಾನರ್ ಬಿದ್ದಿದೆ
    ಪಾಲ್ಘರ್’ನಲ್ಲಿ ಮಿಂಚು ಮತ್ತು ಸಾಧಾರಣದಿಂದ ಭಾರೀ ಮಳೆಯಾಗುವ ಸಾಧ್ಯತೆ
ಮುಂಬೈನಲ್ಲಿ ಮಳೆಯ ರೌದ್ರ ನರ್ತನಕ್ಕೆ ಹೋರ್ಡಿಂಗ್ಸ್ ನೆಲಸಮ: ಮೂವರ ದುರ್ಮರಣ, 59 ಮಂದಿಗೆ ಗಾಯ title=
file photo

Rain in Mumbai: ಕಳೆದ ಕೆಲವು ದಿನಗಳಿಂದ ಮಹಾರಾಷ್ಟ್ರದ ಹಲವು ಪ್ರದೇಶಗಳಲ್ಲಿ ಧಾರಾಕಾರ ಮಳೆಯಾಗುತ್ತಿದೆ. ಮುಂಬೈ, ಥಾಣೆ, ಪಾಲ್ಘರ್’ನಲ್ಲಿ ಮಿಂಚು ಮತ್ತು ಸಾಧಾರಣದಿಂದ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ. 

ಇಂದು (ಮೇ 13) ಮಧ್ಯಾಹ್ನ ಮುಂಬೈನಲ್ಲಿ ಇದ್ದಕ್ಕಿದ್ದಂತೆ ಬಲವಾದ ಗಾಳಿ ಬೀಸಲಾರಂಭಿಸಿದ್ದು, ನಂತರ ಕೆಲವು ಸ್ಥಳಗಳಲ್ಲಿ ಮಳೆಯೂ ಕಾಣಿಸಿಕೊಂಡಿತು. ಧೂಳಿನ ಸುಳಿಗಾಳಿ ಕಾಣಿಸಿಕೊಂಡಿದ್ದು, ಪರಿಣಾಮ ಹೋರ್ಡಿಂಗ್ಸ್ ಒಂದು ಕುಸಿದುಬಿದ್ದಿದೆ. ಪರಿಣಾಮ 3 ಜನ ಸಾವನ್ನಪ್ಪಿದ್ದು, 59 ಮಂದಿ ಗಾಯಗೊಂಡಿದ್ದಾರೆ. ಗಾಯಗೊಂಡವರಿಗೆ ಸರ್ಕಾರಿ ವೆಚ್ಚದಲ್ಲಿ ಚಿಕಿತ್ಸೆ ನೀಡುವುದಾಗಿ ಹಾಗೂ ಮೃತರಿಗೆ ರೂ, 500,000 ಪರಿಹಾರವನ್ನು ಮುಖ್ಯಮಂತ್ರಿ ಘೋಷಿಸಿದ್ದಾರೆ.

ಇದನ್ನೂ ಓದಿ: “ಎಲ್ಲೆಡೆ ಮಳೆಯಾಗಿ ಆಸ್ತಿ ನಾಶವಾಗುತ್ತಿದೆ; ಮಂತ್ರಿಗಳು ಎಲ್ಲೂ ಕಾಣಿಸುತ್ತಿಲ್ಲ”

ಇದರೊಂದಿಗೆ ಬಲವಾದ ಗಾಳಿಯಿಂದಾಗಿ ವಿದ್ಯುತ್ ತಂತಿಯ ಮೇಲೆ ಬ್ಯಾನರ್ ಬಿದ್ದ ಕಾರಣ ಅಂಧೇರಿ ಪೂರ್ವ ಮೆಟ್ರೋ ನಿಲ್ದಾಣದ ನಡುವೆ ಮೆಟ್ರೋ ಸೇವೆಗಳನ್ನು ನಿಲ್ಲಿಸಲಾಗಿದೆ ಎಂದು ಮೆಟ್ರೋ ರೈಲ್ ವಕ್ತಾರರು ತಿಳಿಸಿದ್ದಾರೆ.ಮುಖ್ಯ ಮಾರ್ಗದಲ್ಲಿ ಉಪನಗರ ಸೇವೆಗಳನ್ನು ನಿಲ್ಲಿಸಲಾಗಿದೆ ಎಂದು ಕೇಂದ್ರ ರೈಲ್ವೆಯ ಮುಖ್ಯ ವಕ್ತಾರರು ತಿಳಿಸಿದ್ದಾರೆ. ಅಕಾಲಿಕ ಮಳೆಯಿಂದಾಗಿ ಬಿಸಿಲಿನ ಬೇಗೆಯಿಂದ ಬೆಂದಿದ್ದ ಜನರು ಕೊಂಚ ನಿರಾಳರಾಗಿದ್ದಾರೆ. ಆದರೆ ಥಾಣೆ ಜಿಲ್ಲೆಯ ಕಲ್ವಾ ಮತ್ತು ಇತರ ಕೆಲವು ಪ್ರದೇಶಗಳಲ್ಲಿ ವಿದ್ಯುತ್ ಕಡಿತ ವರದಿಯಾಗಿದೆ. 

ಇದಲ್ಲದೇ ಕೆಲವೆಡೆ ಮರಗಳು ಉರುಳಿದ ಘಟನೆಗಳೂ ವರದಿಯಾಗಿವೆ. ದಾದರ್, ಕುರ್ಲಾ, ಮಾಹಿಮ್, ಘಾಟ್ಕೋಪರ್, ಮುಲುಂಡ್ ಮತ್ತು ವಿಕ್ರೋಲಿಯಲ್ಲಿ ಬಲವಾದ ಗಾಳಿಯೊಂದಿಗೆ ಮಳೆಯಾಗಿದ್ದು, ದಕ್ಷಿಣ ಮುಂಬೈನ ಕೆಲವು ಭಾಗಗಳಲ್ಲಿ ತುಂತುರು ಮಳೆಯಾಗಿದೆ. ಥಾಣೆ, ಅಂಬರನಾಥ್, ಬದ್ಲಾಪುರ್, ಕಲ್ಯಾಣ್ ಮತ್ತು ಉಲ್ಲಾಸ್’ನಗರದಂತಹ ನಗರಗಳಲ್ಲಿಯೂ ಸಹ ಬಲವಾದ ಗಾಳಿಯೊಂದಿಗೆ ಸಾಧಾರಣ ಮಳೆಯಾಗಿದೆ.

ಇದನ್ನೂ ಓದಿಲೋಕಸಭೆ ಫಲಿತಾಂಶ ಬಂದ ನಂತರ ಶಿಂದೆಯೇ ಮಾಜಿ ಆಗುತ್ತಾರೆ - ಎಂ ಬಿ ಪಾಟೀಲ್

ಎಎನ್ಐ ಪ್ರಕಾರ, ಈಸ್ಟರ್ನ್ ಎಕ್ಸ್ಪ್ರೆಸ್ ಹೆದ್ದಾರಿಯ ಪಂತ್ನಗರದಲ್ಲಿರುವ ಘಾಟ್ಕೋಪರ್ ಪೂರ್ವ ಪೊಲೀಸ್ ಗ್ರೌಂಡ್ ಪೆಟ್ರೋಲ್ ಪಂಪ್ನಲ್ಲಿ ಅಲ್ಯೂಮಿನಿಯಂ ಶೆಡ್ ಕುಸಿದು 3 ಜನರು ಸಾವನ್ನಪ್ಪಿದ್ದಾರೆ. ಮತ್ತು 59 ಮಂದಿ ಗಾಯಗೊಂಡಿದ್ದಾರೆ ಎಂದು ಬಿಎಂಸಿ ತಿಳಿಸಿದೆ. ಬಿಎಂಸಿ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

 

Trending News