ಇದು ಸುವರ್ಣಾವಕಾಶ ..! 8ನೇ ಕ್ಲಾಸ್ ಪಾಸಾದರೂ ಸಾಕು, ರೈಲ್ವೆಯಲ್ಲಿ ನೌಕರಿ

ಭಾರತೀಯ ರೈಲ್ವೆಯಲ್ಲಿ  ಉದ್ಯೋಗ ಪಡೆಯಲು ಇಲ್ಲಿದೆ ಸುವರ್ಣಾವಕಾಶ.  ಪೂರ್ವ ಮಧ್ಯ ರೈಲ್ವೆ ಕಮರ್ಶಿಯಲ್ ಮತ್ತು ಟಿಕೆಟ್ ಕ್ಲರ್ಕ್ ಹುದ್ದೆಗಳಿಗಾಗಿ ನೋಟಿಫಿಕೇಶನ್  ಜಾರಿ ಮಾಡಿದೆ.

Written by - Ranjitha R K | Last Updated : Apr 27, 2021, 01:43 PM IST
  • ಇಂಡಿಯನ್ ರೈಲ್ವೆಯಲ್ಲಿ ನೌಕರಿಗೆ ಸದಾವಕಾಶ
  • ಟಿಕೆಟ್ ಕ್ಲರ್ಕ್ ಹುದ್ದೆಗಳಿಗೆ ನೋಟಿಫಿಕೇಶನ್ ಜಾರಿ ಮಾಡಿದ ರೈಲ್ವೆ
  • ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ 30 ಏಪ್ರಿಲ್ 2021.
ಇದು ಸುವರ್ಣಾವಕಾಶ ..! 8ನೇ ಕ್ಲಾಸ್ ಪಾಸಾದರೂ ಸಾಕು, ರೈಲ್ವೆಯಲ್ಲಿ ನೌಕರಿ title=
ಇಂಡಿಯನ್ ರೈಲ್ವೆಯಲ್ಲಿ ನೌಕರಿಗೆ ಸದಾವಕಾಶ (photo India.com)

ನವದೆಹಲಿ : ಭಾರತೀಯ ರೈಲ್ವೆಯಲ್ಲಿ (Indian Railway) ಉದ್ಯೋಗ ಪಡೆಯಲು ಇಲ್ಲಿದೆ ಸುವರ್ಣಾವಕಾಶ.  ಪೂರ್ವ ಮಧ್ಯ ರೈಲ್ವೆ ಕಮರ್ಶಿಯಲ್ ಮತ್ತು ಟಿಕೆಟ್ ಕ್ಲರ್ಕ್ ಹುದ್ದೆಗಳಿಗಾಗಿ ನೋಟಿಫಿಕೇಶನ್ (Notifacation) ಜಾರಿ ಮಾಡಿದೆ.  ಆಸಕ್ತರು ಈ ಹುದ್ದೆಗಳಿಗಾಗಿ ಅರ್ಜಿ ಸಲ್ಲಿಸಬಹುದು.  ಒಟ್ಟು 61 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. 
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ 30 ಏಪ್ರಿಲ್ 2021. ಈ ದಿನಾಂಕವನ್ನು ನೆನಪಿಡಿ. ಕೊನೆಯ ದಿನಾಂಕದ ತನಕ ಕಾಯಬೇಡಿ. ಇವತ್ತೇ ಅರ್ಜಿ ಸಲ್ಲಿಸಿಬಿಡಿ. 

ಅರ್ಜಿ ಸಲ್ಲಿಸುವ ವಿಧಾನ:
ಆಸಕ್ತರು ಅಧಿಕೃತ website ecr.indianrailways.gov.in ಗೆ ವಿಸಿಟ್ ಮಾಡಬಹುದು.  ಏಪ್ರಿಲ್ 30ಕ್ಕೆ ಮುನ್ನ ನೀವು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಈ ವೆಬ್ ಸೈಟಿಗೆ ವಿಸಿಟ್ ಮಾಡಿ ನಿರ್ಧಾರಿತ ಫೀಸ್ ಪಾವತಿಸಿ, ರೈಲ್ವೆಯಲ್ಲಿ ಉದ್ಯೋಗಕ್ಕೆ ಅರ್ಜಿ ಸಲ್ಲಿಸಬಹುದು. ಇದಲ್ಲದೆ ಅಭ್ಯರ್ಥಿಗಳು ಈ ಲಿಂಕ್ https://cr.indianrailways.gov.in/uploads/files/1616595136822-Notification ಕ್ಲಿಕ್ ಮಾಡಿದರೂ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಅಗತ್ಯ ಮಾಹಿತಿ ಈ ಲಿಂಕ್ ನಲ್ಲಿಯೂ ಸಿಗಲಿದೆ.  ರೈಲ್ವೆಯ  ಅಧಿಕೃತ ನೋಟಿಫಿಕೇಶನ್ ಗಾಗಿ ಈ ಲಿಂಕ್ https://cr.indianrailways.gov.in/uploads/files/1616595136822-Notification%20Group%20D%20TO%20TT.pdf ಕೂಡಾ ಕ್ಲಿಕ್ ಮಾಡಬಹುದು .

ಇದನ್ನೂ ಓದಿ : Assembly Election 2021: ಮೇ 2 ರ ಚುನಾವಣಾ ಫಲಿತಾಂಶದ ಸಂಭ್ರಮಾಚರಣೆಗೆ EC ನಿಷೇಧ..!

ವಯೋಮಿತಿ ಮತ್ತು ಶಿಕ್ಷಣ:

8ನೇ ತರಗತಿ ಪಾಸ್ ಆದವರು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದು. ಜೊತಗೆ ಪೇ ಲೆವೆಲ್ 1 ಮತ್ತು ಪೇ ಲೆವೆಲ್ 2 ರಲ್ಲಿ ಕನಿಷ್ಠ 2 ವರ್ಷದ  ಅನುಭವ ಇರಬೇಕು. ಯಾವುದೇ ಗರಿಷ್ಠ ವಯೋಮಿತಿ ಇಲ್ಲ. 

ನೇಮಕಾತಿ ವಿಧಾನ :
ಲಿಖಿತ ಪರೀಕ್ಷೆಯ (Exam) ಆಧಾರದ ಮೇಲೆ ನೇಮಕಾತಿ ನಡೆಯಲಿದೆ. ಇದರಲ್ಲಿ ಇಂಗ್ಲಿಸ್, ಹಿಂದಿ (Hindi), ಗಣಿತ ಮತ್ತು ಜನರಲ್ ನಾಲೆಜ್ ಕುರಿತ ಪ್ರಶ್ನೆಗಳಿಗೆ ಉತ್ತರಿಸಬೇಕಾಗುತ್ತದೆ.  85 ಅಂಕಗಳ  ಈ ಪರೀಕ್ಷೆ 2 ಗಂಟೆಯದ್ದಾಗಿರುತ್ತದೆ. ಅಭ್ಯರ್ಥಿಯ ಸೇವಾ ಅನುಭವಕ್ಕಾಗಿ 15 ಅಂಕ ಮೀಸಲಿಡಲಾಗಿದೆ. 

ಇದನ್ನೂ ಓದಿ : ಭಾರತೀಯ ನೌಕಾಪಡೆಯಲ್ಲಿ 2500 ಹುದ್ದೆಗಳಿಗೆ ನೇಮಕಾತಿ..!10+2 ಪಾಸ್ ಆಗಿದ್ದರೆ ಸುವರ್ಣಾವಕಾಶ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News