ನ.1ರಂದು ಜರ್ಮನಿಯ ಚಾನ್ಸೆಲರ್ ಏಂಜೆಲಾ ಮರ್ಕೆಲ್ ಭಾರತಕ್ಕೆ ಭೇಟಿ

ಪ್ರಧಾನಿ ನರೇಂದ್ರ ಮೋದಿಯವರ ಆಹ್ವಾನದ ಮೇರೆಗೆ ಐದನೇ ದ್ವೈವಾರ್ಷಿಕ ಅಂತರ-ಸರ್ಕಾರಿ ಸಮಾಲೋಚನೆಗಾಗಿ (ಐಜಿಸಿ) ಏಂಜೆಲಾ ಮರ್ಕೆಲ್ ಅವರು ಭಾರತಕ್ಕೆ ಭೇಟಿ ನೀಡಲಿದ್ದಾರೆ.

Last Updated : Oct 25, 2019, 06:12 PM IST
ನ.1ರಂದು ಜರ್ಮನಿಯ ಚಾನ್ಸೆಲರ್ ಏಂಜೆಲಾ ಮರ್ಕೆಲ್ ಭಾರತಕ್ಕೆ ಭೇಟಿ title=

ನವದೆಹಲಿ: ಜರ್ಮನ್ ಚಾನ್ಸೆಲರ್ ಏಂಜೆಲಾ ಮರ್ಕೆಲ್ ಅವರು ನವೆಂಬರ್ 1 ರಂದು ಭಾರತಕ್ಕೆ ಭೇಟಿ ನೀಡಲಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯವರ ಆಹ್ವಾನದ ಮೇರೆಗೆ ಐದನೇ ದ್ವೈವಾರ್ಷಿಕ ಅಂತರ-ಸರ್ಕಾರಿ ಸಮಾಲೋಚನೆಗಾಗಿ (ಐಜಿಸಿ) ಏಂಜೆಲಾ ಮರ್ಕೆಲ್ ಅವರು ಭಾರತಕ್ಕೆ ಭೇಟಿ ನೀಡಲಿದ್ದು, ಫೆಡರಲ್ ಸರ್ಕಾರದ ಕೆಲ ಮಂತ್ರಿಗಳು ಮತ್ತು ರಾಜ್ಯ ಕಾರ್ಯದರ್ಶಿಗಳು ಮತ್ತು ಉನ್ನತ-ಮಟ್ಟದ ವ್ಯಾಪಾರ ನಿಯೋಗ ಸಾಥ್ ನೀಡಲಿದೆ.

ಐಜಿಯಲ್ಲಿ ಉಭಯ ದೇಶಗಳ ಸಚಿವರು ತಮ್ಮ ಜವಾಬ್ದಾರಿಯ ಕ್ಷೇತ್ರಗಳಲ್ಲಿ ಆರಂಭಿಕ ಚರ್ಚೆಗಳನ್ನು ನಡೆಸಲಿದ್ದಾರೆ. ಪಿಎಂ ಮೋದಿ ಮತ್ತು ಮರ್ಕೆಲ್ ಅವರ ಸಹ-ಅಧ್ಯಕ್ಷತೆಯಲ್ಲಿ ನಡೆದ ಚರ್ಚೆಗಳ ಬಳಿಕ ಕೈಗೊಂಡ ನಿರ್ಧಾರಗಳನ್ನು ಐಜಿಸಿಯಲ್ಲಿ ವರದಿ ಮಾಡಲಾಗುವುದು.

ಇದೇ ವೇಳೆ, ಉಭಯ ದೇಶದ ನಾಯಕರು ಸಿಇಒಗಳು ಮತ್ತು ಉಭಯ ದೇಶಗಳ ವ್ಯಾಪಾರೋದ್ಯಮಿಗಳೊಂದಿಗೆ ಪ್ರತ್ಯೇಕ ಒಪ್ಪಂದಗಳನ್ನು ಮಾಡಿಕೊಳ್ಳಲಿದ್ದಾರೆ. ಈ ಸಂದರ್ಭದಲ್ಲಿ ಮರ್ಕೆಲ್ ಅವರುಂ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರನ್ನೂ ಸಹ ಭೇಟಿ ಮಾಡಲಿದ್ದಾರೆ.

Trending News