K Annamalai: ಮಾಜಿ IPS​ ಅಧಿಕಾರಿ ಅಣ್ಣಾಮಲೈಗೆ ಜೀವ ಬೆದರಿಕೆ..!

ಕೆಲವು ತಿಂಗಳಿನಿಂದ ನನಗೆ ಬೆದರಿಕೆ ಕರೆಗಳು ಬರುತ್ತಿದೆ. ಈ ಹಿನ್ನಲೆ ಭದ್ರತೆಯನ್ನು ಪೊಲೀಸರು ನೀಡಿದ್ದಾರೆ ಎಂದು ಮಾಜಿ ಐಪಿಎಸ್​ ಅಧಿಕಾರಿ , ಬಿಜೆಪಿ ನಾಯಕ ಅಣ್ಣಾ ಮಲೈ

Last Updated : Feb 4, 2021, 05:54 PM IST
  • ಮಾಜಿ ಐಪಿಎಸ್​ ಅಧಿಕಾರಿ ಅಣ್ಣಾಮಲೈ ಜೀವಕ್ಕೆ ಆಪತ್ತು ಇರುವ ಹಿನ್ನಲೆ ಅವರಿಗೆ ವೈ ಪ್ಲಸ್​ ಭದ್ರತೆ
  • ಕರ್ನಾಟಕದಲ್ಲಿ ದಿಟ್ಟ ಅಧಿಕಾರಿ ಎಂದು ಹೆಸರು ಮಾಡಿದ್ದ ಅಣ್ಣಾಮಲೈ, ಪೊಲೀಸ್​​ ವೃತ್ತಿ ಜೀವನಕ್ಕೆ ರಾಜೀನಾಮೆ ನೀಡಿದ ಬಳಿಕ ತಮಿಳುನಾಡು ರಾಜಕೀಯದಲ್ಲಿ ಸಕ್ರಿ
  • ಕೆಲವು ತಿಂಗಳಿನಿಂದ ನನಗೆ ಬೆದರಿಕೆ ಕರೆಗಳು ಬರುತ್ತಿದೆ. ಈ ಹಿನ್ನಲೆ ಭದ್ರತೆಯನ್ನು ಪೊಲೀಸರು ನೀಡಿದ್ದಾರೆ ಎಂದು ಮಾಜಿ ಐಪಿಎಸ್​ ಅಧಿಕಾರಿ , ಬಿಜೆಪಿ ನಾಯಕ ಅಣ್ಣಾ ಮಲೈ
K Annamalai: ಮಾಜಿ IPS​ ಅಧಿಕಾರಿ ಅಣ್ಣಾಮಲೈಗೆ ಜೀವ ಬೆದರಿಕೆ..! title=

ಚೆನ್ನೈ: ಮಾಜಿ ಐಪಿಎಸ್​ ಅಧಿಕಾರಿ ಅಣ್ಣಾಮಲೈ ಜೀವಕ್ಕೆ ಆಪತ್ತು ಇರುವ ಹಿನ್ನಲೆ ಅವರಿಗೆ ವೈ ಪ್ಲಸ್​ ಭದ್ರತೆಯನ್ನು ಒದಗಿಸಲಾಗಿದೆ. ಕರ್ನಾಟಕದಲ್ಲಿ ದಿಟ್ಟ ಅಧಿಕಾರಿ ಎಂದು ಹೆಸರು ಮಾಡಿದ್ದ ಅಣ್ಣಾಮಲೈ, ಪೊಲೀಸ್​​ ವೃತ್ತಿ ಜೀವನಕ್ಕೆ ರಾಜೀನಾಮೆ ನೀಡಿದ ಬಳಿಕ ತಮಿಳುನಾಡು ರಾಜಕೀಯದಲ್ಲಿ ಸಕ್ರಿಯರಾಗಿದ್ದಾರೆ.

ತಮಿಳು ನಾಡು ಬಿಜೆಪಿ(BJP) ಘಟಕದ ಉಪಾಧ್ಯಕರಾಗಿರುವ ಅಣ್ಣಾಮಲೈ ಸದ್ಯ ವಿಧಾನಸಭಾ ಚುನಾವಣೆ ಹಿನ್ನಲೆ ಭರ್ಜರಿ ಪ್ರಚಾರದಲ್ಲಿ ಭಾಗಿಯಾಗುತ್ತಿದ್ದಾರೆ. ಈ ನಡುವೆ ಅವರ ಜೀವಕ್ಕೆ ಬೆದರಿಕೆ ಇರುವ ಬಗ್ಗೆ ಗುಪ್ತಚರ ಇಲಾಖೆ ಮಾಹಿತಿ ನೀಡಿದೆ. ಈ ಕುರಿತು ಸಾಕಷ್ಟು ಕರೆಗಳು ಬಂದ ಬಳಿಕ ಅವರಿಗೆ ಹೆಚ್ಚಿನ ಭದ್ರತೆ ಅವಶ್ಯಕತೆ ಇದೆ ಎಂಬುದನ್ನು ಅರಿತ ತಮಿಳುನಾಡು ಪೊಲೀಸರು ಅವರಿಗೆ ವೈ ಪ್ಲಸ್​ ಭದ್ರತೆ ನೀಡಲು ಮುಂದಾಗಿದ್ದಾರೆ. ಕೆಲವು ಸಂಘಟನೆಗಳಿಂದ ಬೆದರಿಕೆಯಿದೆ ಎಂಬುದು ಪೊಲೀಸರಿಂದ ತಿಳಿದು ಬಂದಿದೆ.

2.5 ಕೋಟಿ ರೈತರಿಗೆ ಸಿಗಲಿದೆ Kissan Credit Card.! ಈ ಕ್ರೆಡಿಟ್ ಕಾರ್ಡ್ ಲಾಭ ತಿಳಿಯಿರಿ

ಕೆಲವು ತಿಂಗಳಿನಿಂದ ನನಗೆ ಬೆದರಿಕೆ ಕರೆಗಳು ಬರುತ್ತಿದೆ. ಈ ಹಿನ್ನಲೆ ಭದ್ರತೆಯನ್ನು ಪೊಲೀಸರು(Police) ನೀಡಿದ್ದಾರೆ ಎಂದು ಮಾಜಿ ಐಪಿಎಸ್​ ಅಧಿಕಾರಿ , ಬಿಜೆಪಿ ನಾಯಕ ಅಣ್ಣಾ ಮಲೈ ತಿಳಿಸಿದ್ದಾರೆ. ಅಣ್ಣಾಮಲೈಗೆ ಕೆಲ ಮಾವೋವಾದಿ ಮತ್ತು ಪಿಎಫ್​ಐ ಗುಂಪುಗಳಿಂದ ಬೆದರಿಕೆ ಬರುತ್ತಿದೆ ಎಂದು ಟೈಮ್ಸ್​ ಆಫ್​ ಇಂಡಿಯಾ ವರದಿ ಮಾಡಿದೆ. ಅಣ್ಣಾಮಲೈ ಅವರಿಗೆ ವೈ ಪ್ಲಸ್​ ಭದ್ರತೆ ನೀಡಿರುವ ಹಿನ್ನಲೆ ಅವರ ಭದ್ರತೆಗೆ 11 ಜನ ಕಮಾಂಡೋಗಳು ಮತ್ತು ಇಬ್ಬರು ಗನ್​ ಮ್ಯಾನ್​, ಅವರ ನಿವಾಸಕ್ಕೆ ಒಬ್ಬರು ಭದ್ರತೆಯನ್ನು ನಿಯೋಜಿಸಲಾಗಿದೆ.

ರೈಲು 3 ಗಂಟೆ ಲೇಟಾಗಿ ಓಡುತ್ತಿತ್ತು. ಎಕ್ಸಾಂ ಮಿಸ್ಸಾಗ್ತಾ ಇತ್ತು.ಆಗ ಬಂತೊಂದು ಟ್ವೀಟ್..!ಮುಂದೇನಾಯ್ತ..?!

ಕರ್ನಾಟಕದ ಸಿಂಗಂ ಎಂದೇ ಗುರುತಿಸಿ ಕೊಂಡಿದ್ದ ಐಪಿಎಸ್​ ಅಧಿಕಾರಿಯಾಗಿದ್ದ ಅಣ್ಣಾಮಲೈ (K Annamalai) ನೇರ ದಿಟ್ಟ ಆಡಳಿತದಿಂದ ಜನ ಮನ್ನಣೆ ಪಡೆದಿದ್ದರು. 10 ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿದ ಬಳಿಕ ಅವರು ಮೇ 2019ರಲ್ಲಿ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದರು. ಬಳಿಕ ಬಿಜೆಪಿ ಪಕ್ಷ ಸೇರಿದ ಅವರು ತಮಿಳುನಾಡಿನಲ್ಲಿ ಸಕ್ರಿಯ ರಾಜಕಾರಣಿಯಾಗಿ ಗುರಿತಿಸಿಕೊಳ್ಳುತ್ತಿದ್ದಾರೆ.

Aero India : ಭವಿಷ್ಯದ ಅತಿದೊಡ್ಡ ಆಯುಧದ ಫಸ್ಟ್ ಝಲಕ್ ಅನಾವರಣಗೊಳಿಸಿದ HAL

ಇತ್ತೀಚೆಗೆ ಬಾಲಿವುಡ್​ ನಟಿ ಕಂಗನಾ ರಾನೌತ್ ಹಾಗೂ ಭಾರತದ ಮುಖ್ಯ ನ್ಯಾಯಾಮೂರ್ತಿ ಎಸ್​ಎ ಬೊಬ್ಡೇ ​ ಅವರಿಗೂ ಕೂಡ ವೈ ಪ್ಲಸ್​ ಭದ್ರತೆಯನ್ನು ನೀಡಲಾಗಿದೆ.

ಸರ್ವಾಧಿಕಾರಿಗಳ ಹೆಸರುಗಳು 'M' ನಿಂದೇಕೆ ಪ್ರಾರಂಭವಾಗುತ್ತವೆ?- ರಾಹುಲ್ ಗಾಂಧಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News