ಅಸ್ಸಾಂನ ಬೊಂಗೈಗಾಂವ್‌ನಲ್ಲಿ ಭೂಕಂಪನ

ಈಶಾನ್ಯ ರಾಜ್ಯವಾದ ಅಸ್ಸಾಂನಲ್ಲಿ ಶನಿವಾರದಂದು ಭೂಕಂಪನ ಸಂಭವಿಸಿದೆ.

Last Updated : Feb 8, 2020, 08:16 PM IST
ಅಸ್ಸಾಂನ ಬೊಂಗೈಗಾಂವ್‌ನಲ್ಲಿ  ಭೂಕಂಪನ  title=
Photo courtesy: Twitter(/EMSC)

ನವದೆಹಲಿ: ಈಶಾನ್ಯ ರಾಜ್ಯವಾದ ಅಸ್ಸಾಂನಲ್ಲಿ ಶನಿವಾರದಂದು ಭೂಕಂಪನ ಸಂಭವಿಸಿದೆ.

ಬೊಂಗೈಗಾಂವ್‌ನ ಆಗ್ನೇಯ ದಿಕ್ಕಿನಲ್ಲಿ 35 ಕಿ.ಮೀ.ದೂರದಲ್ಲಿ ರಿಕ್ಟರ್ ಮಾಪಕದಲ್ಲಿ 4.8 ರಷ್ಟು ಭೂಕಂಪನ ಸಂಭವಿಸಿದೆ. ಪ್ರತ್ಯಕ್ಷದರ್ಶಿಗಳು ಇದರ ಪರಿಣಾಮಗಳನ್ನು ವರದಿ ಮಾಡಿದ್ದಾರೆ ಎಂದು ಖಾಸಗಿ ಮುನ್ಸೂಚಕ ಇಎಂಎಸ್ಸಿ ತಿಳಿಸಿದೆ.

ಮಾಧ್ಯಮ ವರದಿಯೊಂದಕ್ಕೆ ಅನುಗುಣವಾಗಿ, ಭೂತಾನ್‌ನಲ್ಲಿ ಮನೆಗಳು ಅಲ್ಲಾಡುತ್ತಿದ್ದಂತೆ ಇದರ ಪರಿಣಾಮವುಂಟಾಯಿತು. ಯಾವುದೇ ಸಾವುನೋವು ಅಥವಾ ಆಸ್ತಿಪಾಸ್ತಿ ನಷ್ಟದ ಬಗ್ಗೆ ಯಾವುದೇ  ವರದಿಯಾಗಿಲ್ಲ ಎಂದು ತಿಳಿದುಬಂದಿದೆ.

Trending News