ಅಂಡಮಾನ್ ದ್ವೀಪಗಳಲ್ಲಿ ಭೂಕಂಪನ !

   

Last Updated : Aug 24, 2018, 07:50 PM IST
ಅಂಡಮಾನ್ ದ್ವೀಪಗಳಲ್ಲಿ ಭೂಕಂಪನ ! title=

ನವದೆಹಲಿ:  ಇಂದು ಅಂಡಮಾನ್ ದ್ವೀಪಗಳಲ್ಲಿ ರಿಕ್ಟರ್ ಮಾಪಕದಲ್ಲಿ 5.5ರಷ್ಟು ಭೂಕಂಪನ ಸಂಭವಿಸಿದೆ ಎಂದು ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ತಿಳಿಸಿದೆ.

ಭೂಕಂಪನವು 4.19 ಕ್ಕೆ ಅಕ್ಷಾಂಶ:10.6 ಉತ್ತರ ಮತ್ತು ರೇಖಾಂಶ: 91.5 ಪೂರ್ವದಲ್ಲಿ ಸಂಭವಿಸಿದ್ದು, ಸುಮಾರು, 27 ಸೆಕೆಂಡುಗಳ ಕಾಲ ಭೂಕಂಪನ ಸ್ಥಿರವಾಗಿತ್ತು ಎಂದು ಹವಾಮಾನ ಇಲಾಖೆ ತಿಳಿಸಿದೆ.

ತನ್ನ ಅಧಿಕೃತ ಟ್ವೀಟರ್ ಖಾತೆಯಲ್ಲಿ  ಹವಾಮಾನ ಇಲಾಖೆಯು "ಭೂಕಂಪನ ಅಂಡಮಾನ್ ದ್ವೀಪಗಳಲ್ಲಿ 10 ಕಿ.ಮೀ ಆಳದಲ್ಲಿ ಸಂಭವಿಸಿದೆ, ಆದರೆ ಯಾವುದೇ ಸಾವು ನೋವುಗಳು ಅಥವಾ ಆಸ್ತಿ ನಷ್ಟವಾದ ಬಗ್ಗೆ ವರದಿಯಾಗಿಲ್ಲ,"ಎಂದು ತಿಳಿಸಿದೆ.

Trending News