Earthquake in Delhi: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕಂಪಿಸಿದ ಭೂಮಿ: ರಿಕ್ಟರ್ ಮಾಪಕದಲ್ಲಿ ತೀವ್ರತೆ ದಾಖಲು

Earthquake in Delhi: ಕಳೆದ ಕೆಲವು ದಿನಗಳಲ್ಲಿ ದೆಹಲಿ ಎನ್‌ಸಿಆರ್‌ನಲ್ಲಿ ಹಲವಾರು ಬಾರಿ ಭೂಕಂಪನ ಸಂಭವಿಸಿದೆ. ದೆಹಲಿಯ ಜನವಸತಿ ಮತ್ತು ಅದರ ಭೌಗೋಳಿಕ ಸ್ಥಳವು ಇಲ್ಲಿ ಭೂಕಂಪದ ತೀವ್ರತೆ ಸ್ವಲ್ಪ ಹೆಚ್ಚಿದ್ದರೂ ದೊಡ್ಡ ವಿನಾಶದ ಅನುಭವವನ್ನು ನೀಡಬಹುದು.

Written by - Bhavishya Shetty | Last Updated : Nov 30, 2022, 04:35 AM IST
    • ದೆಹಲಿ-ಎನ್‌ಸಿಆರ್‌ನಲ್ಲಿ ಮತ್ತೆ ಕಂಪಿಸಿದ ಭೂಮಿ
    • ರಿಕ್ಟರ್ ಮಾಪಕದಲ್ಲಿ ಭೂಕಂಪದ ತೀವ್ರತೆ 2.5 ಎಂದು ದಾಖಲು
    • ಮಂಗಳವಾರ ರಾತ್ರಿ 9.30ರ ವೇಳೆಗೆ ರಾಷ್ಟ್ರ ರಾಜಧಾನಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭೂಕಂಪನ
Earthquake in Delhi: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕಂಪಿಸಿದ ಭೂಮಿ: ರಿಕ್ಟರ್ ಮಾಪಕದಲ್ಲಿ ತೀವ್ರತೆ ದಾಖಲು title=
Delhi Earthquake

Earthquake in Delhi: ದೆಹಲಿ-ಎನ್‌ಸಿಆರ್‌ನಲ್ಲಿ ಮತ್ತೆ ಭೂಮಿ ಕಂಪಿಸಿದ ಅನುಭವಾಗಿದೆ. ಭೂಕಂಪನ ವಿಜ್ಞಾನ ಕೇಂದ್ರದ ಪ್ರಕಾರ, ಭೂಕಂಪದ ತೀವ್ರತೆ 2.5 ಆಗಿದೆ. ಮಂಗಳವಾರ ರಾತ್ರಿ 9.30ರ ವೇಳೆಗೆ ರಾಷ್ಟ್ರ ರಾಜಧಾನಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭೂಕಂಪನವಾಗಿದೆ. ಭೂಕಂಪದ ಆಳವನ್ನು ನೆಲದಿಂದ 5 ಕಿಲೋಮೀಟರ್ ಆಳದಲ್ಲಿ ಅಳೆಯಲಾಗಿದೆ.

ಕೊಂಚ ಪ್ರಭಾವ ಮಾತ್ರ ಅನುಭವವಾಗಿದ್ದು, ಜನರಿಗೆ ಇದರಿಂದ ಯಾವುದೇ ಸಮಸ್ಯೆ ಉಂಟಾಗಿರಲಿಲ್ಲ. ಮಾಹಿತಿ ಪ್ರಕಾರ, ಭೂಕಂಪದ ಕೇಂದ್ರಬಿಂದು ಪಶ್ಚಿಮ ದೆಹಲಿಯಾಗಿದೆ.

ಇದನ್ನೂ ಓದಿ: ನಾಲ್ವರು ವಯೋವೃದ್ದರೊಂದಿಗೆ ಮಹಿಳೆಯ ಪ್ರೇಮದಾಟ.! ಐದನೇ ಪ್ರೇಮಿಯ ಎಂಟ್ರಿಯಾಗುತ್ತಿದ್ದಂತೆಯೇ ಬಿತ್ತು ಹೆಣ

ಕಳೆದ ಕೆಲವು ದಿನಗಳಲ್ಲಿ ದೆಹಲಿ ಎನ್‌ಸಿಆರ್‌ನಲ್ಲಿ ಹಲವಾರು ಬಾರಿ ಭೂಕಂಪನ ಸಂಭವಿಸಿದೆ. ದೆಹಲಿಯ ಜನವಸತಿ ಮತ್ತು ಅದರ ಭೌಗೋಳಿಕ ಸ್ಥಳವು ಇಲ್ಲಿ ಭೂಕಂಪದ ತೀವ್ರತೆ ಸ್ವಲ್ಪ ಹೆಚ್ಚಿದ್ದರೂ ದೊಡ್ಡ ವಿನಾಶದ ಅನುಭವವನ್ನು ನೀಡಬಹುದು.

ಪದೇ ಪದೇ ಭೂಕಂಪ ಆಗುತ್ತಿರುವುದರಿಂದ ಜನರಲ್ಲಿ ಒಂದು ರೀತಿಯ ಭಯವೂ ಆವರಿಸಿದೆ. ದಟ್ಟವಾದ ಜನಸಂಖ್ಯೆ ಹೊಂದಿರುವ ಕಾರಣ ಭೂಕಂಪನಗಳು ಇಲ್ಲಿ ಭಾರೀ ಹಾನಿಯನ್ನುಂಟು ಮಾಡುವ ಸಾಧ್ಯತೆಯಿದೆ.

5 ದಿನಗಳ ಹಿಂದೆ ಮಹಾರಾಷ್ಟ್ರದಲ್ಲಿ ಕಂಪಿಸಿದ್ದ ಭೂಮಿ:

ಕಳೆದ ಗುರುವಾರ ಮಹಾರಾಷ್ಟ್ರದ ಪಾಲ್ಘರ್‌ನಲ್ಲಿ ಭೂಕಂಪನದ ಅನುಭವವಾಗಿತ್ತು. ಈ ವೇಳೆ ಭೂಕಂಪದ ತೀವ್ರತೆ ರಿಕ್ಟರ್ ಮಾಪಕದಲ್ಲಿ 3.6ರಷ್ಟು ದಾಖಲಾಗಿತ್ತು. ಗುರುವಾರ ಮುಂಜಾನೆ 4.04 ಕ್ಕೆ ಸಂಭವಿಸಿದ ಭೂಕಂಪದ ಕೇಂದ್ರಬಿಂದುವು ದಹಾನುವಿನ ಪೂರ್ವಕ್ಕೆ 24 ಕಿಮೀ ದೂರದಲ್ಲಿತ್ತು. ಅದರ ಆಳವು ನೆಲದಿಂದ 5 ಕಿಮೀ ಆಳದಲ್ಲಿತ್ತು. ಈ ಭೂಕಂಪದಿಂದ ಯಾವುದೇ ಪ್ರಾಣ ಹಾನಿ ಅಥವಾ ಆಸ್ತಿ-ಪಾಸ್ತಿ ಹಾನಿಯಾಗಿರಲಿಲ್ಲ.

ಇದನ್ನೂ ಓದಿ: Sabarimala Income: ದಾಖಲೆ ಪ್ರಮಾಣದಲ್ಲಿ ಶಬರಿಮಲೆಗೆ ಹರಿದು ಬಂತು ಆದಾಯ: 10 ದಿನಗಳಲ್ಲಿ 50 ಕೋಟಿ ಸಂಗ್ರಹ!

ಮೇಘಾಲಯದ ತುರಾದಲ್ಲಿ ಗುರುವಾರ ಭೂಕಂಪನದ ಅನುಭವವಾಗಿದೆ. ಇಲ್ಲಿಯೂ ಕೂಡ ಮುಂಜಾನೆ 3:46 ಕ್ಕೆ ಭೂಮಿ ಕಂಪಿಸಿದ್ದು, ಅದರ ತೀವ್ರತೆ 3.4 ಎಂದು ಅಳೆಯಲಾಗಿತ್ತು. ಇದರ ಕೇಂದ್ರವು ನೆಲದಿಂದ 5 ಕಿಲೋಮೀಟರ್ ಅಡಿಯಲ್ಲಿ ಇತ್ತು. ಇದಕ್ಕೂ ಮುನ್ನ ನವೆಂಬರ್ 22 ರಂದು ಲೇಹ್ ಮತ್ತು ಕಾರ್ಗಿಲ್ ಪ್ರದೇಶಗಳಲ್ಲಿ ಭೂಕಂಪನದ ಅನುಭವವಾಗಿತ್ತು. ಇದರ ತೀವ್ರತೆ 4.3 ದಾಖಲಾಗಿದೆ. ಇದರ ಕೇಂದ್ರವು ಕಾರ್ಗಿಲ್‌ನಿಂದ ಸುಮಾರು 191 ಕಿ.ಮೀ ದೂರದಲ್ಲಿತ್ತು.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News