ಕ್ರಿಮಿನಲ್‌ಗಳ ಅಂತ್ಯಸಂಸ್ಕಾರ ಗ್ಯಾರಂಟಿ: ಯೋಗಿ ಆದಿತ್ಯನಾಥ್‌ ಖಡಕ್‌ ಎಚ್ಚರಿಕೆ!

Cremation Guarantee for Criminals: ಸಮಾಜದ ಶಾಂತಿ-ಸುವ್ಯವಸ್ಥೆಗೆ ಧಕ್ಕೆ ತರುವವರು, ಹೆಣ್ಣು ಮಕ್ಕಳಿಗೆ ತೊಂದರೆ ಕೊಡುವವರು ಸೇರಿ ಯಾವುದೇ ಕ್ರಿಮಿನಲ್‌ಗಳ ಅಂತ್ಯಸಂಸ್ಕಾರ ಮಾಡದೆ ಬಿಡುವುದಿಲ್ಲವೆಂದು ಯೋಗಿ ಆದಿತ್ಯನಾಥ್‌ ಎಚ್ಚರಿಕೆ ನೀಡಿದ್ದಾರೆ. 

Written by - Puttaraj K Alur | Last Updated : Apr 6, 2024, 02:16 PM IST
  • ಉತ್ತರ ಪ್ರದೇಶದಲ್ಲಿ ಸಮಾಜವಿರೋಧಿ ಕೃತ್ಯ ಎಸಗುವವರ ಅಂತ್ಯಸಂಸ್ಕಾರ ನಿಶ್ಚಿತ
  • ಕ್ರಿಮಿನಲ್‌ಗಳಿಗೆ ಖಡಕ್‌ ಎಚ್ಚರಿಕೆ ನೀಡಿದ ಯುಪಿ ಸಿಎಂ ಯೋಗಿ ಆದಿತ್ಯನಾಥ್‌
  • ಸಮಾಜದ ಶಾಂತಿಗೆ ಭಂಗ ತಂದರೆ, ಭದ್ರತೆಗೆ ಬೆದರಿಕೆಯೊಡ್ಡಿದರೆ ಕಠಿಣ ಕ್ರಮ
ಕ್ರಿಮಿನಲ್‌ಗಳ ಅಂತ್ಯಸಂಸ್ಕಾರ ಗ್ಯಾರಂಟಿ: ಯೋಗಿ ಆದಿತ್ಯನಾಥ್‌ ಖಡಕ್‌ ಎಚ್ಚರಿಕೆ! title=
ಕ್ರಿಮಿನಲ್‌ಗಳಿಗೆ ಖಡಕ್‌ ಎಚ್ಚರಿಕೆ!

ನವದೆಹಲಿ: ಉತ್ತರ ಪ್ರದೇಶದಲ್ಲಿ ಸಮಾಜವಿರೋಧಿ ಕೃತ್ಯ ಎಸಗುವವರ ʼರಾಮ ನಾಮ್‌ ಸತ್ಯ (ಅಂತ್ಯಸಂಸ್ಕಾರ) ನಿಶ್ಚಿತ" ಎಂದು ಕ್ರಿಮಿನಲ್‌ಗಳಿಗೆ ಸಿಎಂ ಯೋಗಿ ಆದಿತ್ಯನಾಥ್‌ ಅವರು ಖಡಕ್‌ ಎಚ್ಚರಿಕೆ ನೀಡಿದ್ದಾರೆ.

ಉತ್ತರ ಪ್ರದೇಶದ ಅಲಿಗಢ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಸತೀಶ್‌ ಕುಮಾರ್‌ ಗೌತಮ್‌ ಪರವಾಗಿ ಯೋಗಿ ಆದಿತ್ಯನಾಥ್‌ ಮತಯಾಚಿಸಿದರು. ಈ ವೇಳೆ ಮಾತನಾಡಿದ ಅವರು, "ನಮ್ಮ ರಾಜ್ಯದಲ್ಲಿ ಹೆಣ್ಣುಮಕ್ಕಳು ಸೇರಿ ಯಾರೇ ಆಗಲಿ ರಾತ್ರಿ ಚಿಂತೆ ಇಲ್ಲದೆ ಓಡಾಡುವ ವಾತಾವರಣ ನಿರ್ಮಾಣವಾಗುತ್ತದೆ ಎಂದು ಯಾರೂ ಯೋಚಿಸಿರಲಿಲ್ಲ. ಏಕೆಂದರೆ, ಉದ್ಯಮಿಗಳು, ಹೆಣ್ಣುಮಕ್ಕಳು, ರಾತ್ರಿ ಕೆಲಸ ಮಾಡುವವರ ತಂಟೆಗೆ ಹೋದರೆ ʼರಾಮ್‌ ನಾಮ್‌ ಸತ್ಯ ನಿಶ್ಚಿತʼ ಎಂಬುದು ಕ್ರಿಮಿನಲ್‌ಗಳಿಗೂ ಗೊತ್ತಾಗಿದೆ" ಅಂತಾ ಹೇಳಿದ್ದಾರೆ.  

ಇದನ್ನೂ ಓದಿ: H5N1 Bird Flu: ಮತ್ತೆ ಕೋವಿಡ್ ತರಹದ ವಿನಾಶ? ಹಕ್ಕಿ ಜ್ವರ 100 ಪಟ್ಟು ಹೆಚ್ಚು ಅಪಾಯಕಾರಿ!

ʼಸಮಾಜದ ಶಾಂತಿ ಸುವ್ಯವಸ್ಥೆಗೆ ಧಕ್ಕೆ ತರುವವರು, ಹೆಣ್ಣು ಮಕ್ಕಳಿಗೆ ತೊಂದರೆ ಕೊಡುವವರು ಸೇರಿ ಯಾವುದೇ ಕ್ರಿಮಿನಲ್‌ಗಳ ಅಂತ್ಯಸಂಸ್ಕಾರ ಮಾಡದೆ ಬಿಡುವುದಿಲ್ಲ. ನಾವು ರಾಮನ ಜಪ ಮಾಡುತ್ತ ಜೀವನ ಸಾಗಿಸುತ್ತೇವೆ. ರಾಮನನ್ನು ಆರಾಧಿಸುತ್ತೇವೆ. ರಾಮನಿಲ್ಲದೆ ಯಾವುದೂ ಸಾಧ್ಯವಿಲ್ಲ ಎಂಬುದಾಗಿ ನಂಬುತ್ತೇವೆ. ಆದರೆ ಸಮಾಜದ ಶಾಂತಿಗೆ ಭಂಗ ತಂದರೆ, ಸಮಾಜದ ಭದ್ರತೆಗೆ ಬೆದರಿಕೆಯೊಡ್ಡಿದರೆ, ಅಂತಹವರನ್ನು ʼರಾಮ್‌ ನಾಮ್‌ ಸತ್ಯ ಮಾಡುವುದು ಗ್ಯಾರಂಟಿ" ಎಂದು ಅಂತಾ ಯೋಗಿ ಎಚ್ಚರಿಕೆ ಸಂದೇಶವನ್ನು ರವಾನಿಸಿದ್ದಾರೆ. 

ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್‌ ಯಾದವ್‌ ವಿರುದ್ಧ ವಿಧಾನಸಭೆಯಲ್ಲಿ ತೀವ್ರ ವಾಗ್ದಾಳಿ ನಡೆಸಿದ್ದ ಯೋಗಿ ಆದಿತ್ಯನಾಥ್‌, ʼಉತ್ತರ ಪ್ರದೇಶದ ಎಲ್ಲಾ ಕ್ರಿಮಿನಲ್‌ಗಳ ಗಾಡ್‌ಫಾದರ್‌ ಎಂದರೆ ಅಖಿಲೇಶ್‌ ಯಾದವ್. ಅವರ ಧಮನಿಯಲ್ಲೇ ಕ್ರಿಮಿನಲ್‌ ಇದ್ದಾನೆ. ಆದರೆ ನಾನೊಂದು ಮಾತು ಹೇಳುತ್ತೇನೆ ಕೇಳಿ. ರಾಜ್ಯದಲ್ಲಿ ಮಾಫಿಯಾದಲ್ಲಿ ತೊಡಗಿರುವವರನ್ನು ಮಣ್ಣಲ್ಲಿ ಹೂತು ಹಾಕುತ್ತೇನೆʼ ಅಂತಾ ಗುಡುಗಿದ್ದಾರೆ.

ಇದನ್ನೂ ಓದಿ: Daily GK Quiz: ಸೌರವ್ಯೂಹದ ಯಾವ ಗ್ರಹವನ್ನು "ಬ್ಲೂ ಪ್ಲಾನೆಟ್" ಎಂದು ಕರೆಯಲಾಗುತ್ತದೆ?

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News