COVID-19 Vaccination: ಇಂದಿನಿಂದ ಮಕ್ಕಳಿಗೂ ಸಿಗಲಿದೆ 'ಸಂಜೀವನಿ' ಲಸಿಕೆ

COVID-19 Vaccination:  ಜನವರಿ 3 ರಿಂದ ದೇಶಾದ್ಯಂತ  15 ವರ್ಷ ಮೇಲ್ಪಟ್ಟ ಮಕ್ಕಳಿಗೆ ಲಸಿಕೆ ಲಭ್ಯವಾಗಲಿದೆ. ಲಸಿಕೆ ನೀಡಲು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 159 ಕೇಂದ್ರಗಳನ್ನು ಗುರುತಿಸಲಾಗಿದ್ದು, ದೆಹಲಿ ಸರ್ಕಾರದ ರಾಜ್ಯ ಆರೋಗ್ಯ ಮಿಷನ್ ತನ್ನ ಪಟ್ಟಿಯನ್ನು ಬಿಡುಗಡೆ ಮಾಡಿದೆ.

Written by - Yashaswini V | Last Updated : Jan 3, 2022, 06:40 AM IST
  • ದೆಹಲಿ ಸರ್ಕಾರದ ದೆಹಲಿ ರಾಜ್ಯ ಆರೋಗ್ಯ ಮಿಷನ್ ಪಟ್ಟಿಯನ್ನು ಬಿಡುಗಡೆ ಮಾಡಿದೆ
  • ಶಾಲೆಗಳಲ್ಲಿ ಸ್ಥಾಪಿಸಲಾದ ಲಸಿಕೆ ಕೇಂದ್ರಗಳಿಗೆ ವಿಶೇಷ ಪ್ರೋಟೋಕಾಲ್‌ಗಳನ್ನು ಸಿದ್ಧಪಡಿಸಲಾಗಿದೆ
  • ತರಗತಿ ಶಿಕ್ಷಕರು ಪೋಷಕರಿಗೆ ಲಸಿಕೆ ಕೇಂದ್ರದ ಬಗ್ಗೆ ಮಾಹಿತಿ ನೀಡುತ್ತಾರೆ
COVID-19 Vaccination: ಇಂದಿನಿಂದ ಮಕ್ಕಳಿಗೂ ಸಿಗಲಿದೆ 'ಸಂಜೀವನಿ' ಲಸಿಕೆ title=
COVID vaccination for children

COVID-19 Vaccination: 15 ರಿಂದ 18 ವರ್ಷ ವಯಸ್ಸಿನ ಮಕ್ಕಳಿಗೆ ಲಸಿಕೆ (Vaccine For Children) ಹಾಕುವಿಕೆಯು ಜನವರಿ 3 ರಿಂದ ಅಂದರೆ ಇಂದಿನಿಂದ ದೇಶಾದ್ಯಂತ ಪ್ರಾರಂಭವಾಗುತ್ತಿದೆ. ಇತ್ತೀಚೆಗಷ್ಟೇ ಪ್ರಧಾನಮಂತ್ರಿ ನರೇಂದ್ರ ಮೋದಿ (Narendra Modi) 15 ವರ್ಷ ಮೇಲ್ಪಟ್ಟ ಮಕ್ಕಳಿಗೆ ಲಸಿಕೆ ಲಸಿಕೆಯನ್ನು ಘೋಷಿಸಿದ್ದರು. ಇದಾದ ಬಳಿಕ ಜನವರಿ 1ರಿಂದ ಕೋವಿನ್ ಆ್ಯಪ್‌ನಲ್ಲಿ ಮಕ್ಕಳ ನೋಂದಣಿ ಆರಂಭವಾಗಿದೆ. ಮಾಹಿತಿ ಪ್ರಕಾರ, ಇದುವರೆಗೆ ದೇಶಾದ್ಯಂತ ಸುಮಾರು 6 ಲಕ್ಷ 80 ಸಾವಿರ ಮಕ್ಕಳು ಲಸಿಕೆಗೆ ನೋಂದಾಯಿಸಿಕೊಂಡಿದ್ದಾರೆ.

ಜನವರಿ 3 ರಿಂದ ದೇಶಾದ್ಯಂತ  15 ವರ್ಷ ಮೇಲ್ಪಟ್ಟ ಮಕ್ಕಳಿಗೆ ಲಸಿಕೆ (Vaccine For Children) ಲಭ್ಯವಾಗಲಿದೆ. ಇದರ ಭಾಗವಾಗಿ ದೆಹಲಿಯಲ್ಲಿ 15 ವರ್ಷ ಮೇಲ್ಪಟ್ಟ ಮಕ್ಕಳಿಗೆ ಲಸಿಕೆ ಹಾಕಲು 159 ಕೇಂದ್ರಗಳನ್ನು ಗುರುತಿಸಲಾಗಿದೆ. ದೆಹಲಿ ಸರ್ಕಾರದ ರಾಜ್ಯ ಆರೋಗ್ಯ ಮಿಷನ್ ತನ್ನ ಪಟ್ಟಿಯನ್ನು ಬಿಡುಗಡೆ ಮಾಡಿದೆ. 

ಎಲ್ಲಾ ಜಿಲ್ಲೆಗಳಲ್ಲಿ ಲಸಿಕಾ ಕೇಂದ್ರಗಳು:
ದೆಹಲಿಯ ಎಲ್ಲಾ 11 ಜಿಲ್ಲೆಗಳಲ್ಲಿ ಮಕ್ಕಳಿಗಾಗಿ ಈ ಲಸಿಕೆ ಕೇಂದ್ರಗಳನ್ನು (Vaccination Centers) ಗುರುತಿಸಲಾಗಿದೆ. ಸರ್ಕಾರಿ ಆಸ್ಪತ್ರೆಗಳು, ಡಿಸ್ಪೆನ್ಸರಿಗಳು, ಪಾಲಿಕ್ಲಿನಿಕ್‌ಗಳು, ದೆಹಲಿ ಸರ್ಕಾರ ಮತ್ತು ಪುರಸಭೆಯ ಶಾಲೆಗಳಲ್ಲಿ ಲಸಿಕೆ ಕೇಂದ್ರಗಳನ್ನು ಸ್ಥಾಪಿಸಲಾಗಿದೆ.

ಇದನ್ನೂ ಓದಿ-  Vaccine Guidelines: 15-18 ವರ್ಷ ವಯಸ್ಸಿನವರು ಲಸಿಕೆ ಪಡೆಯಲು ತಪ್ಪದೇ ಈ ನಿಯಮ ಪಾಲಿಸಿ

ನೈಋತ್ಯ ಜಿಲ್ಲೆಯು ಗರಿಷ್ಠ ಲಸಿಕೆ ಕೇಂದ್ರಗಳನ್ನು ಹೊಂದಿದೆ:
ದೆಹಲಿಯು (Delhi) ಮಕ್ಕಳಿಗಾಗಿ  ನೈಋತ್ಯ ಜಿಲ್ಲೆಯಲ್ಲಿ ಗರಿಷ್ಠ 21 ಲಸಿಕೆ ಕೇಂದ್ರಗಳನ್ನು ಹೊಂದಿದೆ, ಇದನ್ನು ಹೊರತುಪಡಿಸಿ, ಮಧ್ಯ ದೆಹಲಿಯಲ್ಲಿ 17, ಪೂರ್ವ ದೆಹಲಿಯಲ್ಲಿ 15, ನವದೆಹಲಿಯಲ್ಲಿ 18, ಉತ್ತರ ದೆಹಲಿಯಲ್ಲಿ 11, ಈಶಾನ್ಯದಲ್ಲಿ 16, ವಾಯುವ್ಯದಲ್ಲಿ 12, ಶಾಹದಾರದಲ್ಲಿ 10, ದಕ್ಷಿಣ ದೆಹಲಿಯಲ್ಲಿ 11, ಆಗ್ನೇಯ ದೆಹಲಿಯಲ್ಲಿ 13 ಮತ್ತು ಪಶ್ಚಿಮ ದೆಹಲಿಯಲ್ಲಿ 15 ಲಸಿಕೆ ಕೇಂದ್ರಗಳನ್ನು ಗುರುತಿಸಲಾಗಿದೆ.

ಲಸಿಕೆ ಕೇಂದ್ರಕ್ಕಾಗಿ ವಿಶೇಷ ಪ್ರೋಟೋಕಾಲ್ ಅನ್ನು ಸಿದ್ಧಪಡಿಸಲಾಗಿದೆ :
ಮಾಹಿತಿಯ ಪ್ರಕಾರ, ಶಾಲೆಗಳಲ್ಲಿ ಸ್ಥಾಪಿಸಲಾದ ಲಸಿಕೆ ಕೇಂದ್ರಗಳಿಗೆ ವಿಶೇಷ ಪ್ರೋಟೋಕಾಲ್‌ಗಳನ್ನು ಸಿದ್ಧಪಡಿಸಲಾಗಿದೆ. ಪ್ರತಿ ಶಾಲೆಗೆ ನೋಡಲ್ ಉಸ್ತುವಾರಿಯನ್ನು ನೇಮಿಸಬೇಕು. ಇದಲ್ಲದೆ, ಮಕ್ಕಳ ಶಾಲಾ ಗುರುತಿನ ಚೀಟಿಗಳು ವ್ಯಾಕ್ಸಿನೇಷನ್ (Vaccination) ಐಡಿ ಪುರಾವೆಗಾಗಿ ಮಾನ್ಯವಾಗಿರುತ್ತವೆ.

ತರಗತಿ ಶಿಕ್ಷಕರು ಪೋಷಕರ ಲಸಿಕೆ ಕೇಂದ್ರದ ಬಗ್ಗೆ ಮಾಹಿತಿ ನೀಡುತ್ತಾರೆ:
ಲಸಿಕಾ ಕೇಂದ್ರದಲ್ಲಿ ವಾಕ್-ಇನ್ ನೋಂದಣಿ ಸೌಲಭ್ಯವನ್ನೂ ಒದಗಿಸಲಾಗುವುದು. ಹತ್ತಿರದ ಲಸಿಕೆ ಕೇಂದ್ರದ ಬಗ್ಗೆ ಪೋಷಕರಿಗೆ ತಿಳಿಸುವುದು ತರಗತಿ ಶಿಕ್ಷಕರ ಜವಾಬ್ದಾರಿಯಾಗಿದೆ. ಇದಕ್ಕಾಗಿ ಮಕ್ಕಳೊಂದಿಗೆ ಬರುವ ಪೋಷಕರಿಗೆ ಪ್ರತ್ಯೇಕ ಕೊಠಡಿಯನ್ನು ನಿಗದಿಪಡಿಸಲಾಗಿದೆ.

ಇದನ್ನೂ ಓದಿ- Vaccination For Children : ಇಂದಿನಿಂದ 15 ರಿಂದ 18 ವರ್ಷದ ಮಕ್ಕಳಿಗೆ ಕರೋನಾ ಲಸಿಕೆ ನೋಂದಣಿ ಪ್ರಾರಂಭ!

6 ಲಕ್ಷಕ್ಕೂ ಹೆಚ್ಚು ನೋಂದಣಿಯಾಗಿದೆ:
ಕೋವಿನ್ (Cowin) ಆ್ಯಪ್‌ನಲ್ಲಿ ಮಕ್ಕಳ ಲಸಿಕೆಗಾಗಿ ಇಲ್ಲಿಯವರೆಗೆ 15 ರಿಂದ 18 ವರ್ಷ ವಯಸ್ಸಿನ ಮಕ್ಕಳ ಸುಮಾರು 6 ಲಕ್ಷ 80 ಸಾವಿರ ನೋಂದಣಿಗಳನ್ನು ಮಾಡಲಾಗಿದೆ. ಕೇಂದ್ರ ಆರೋಗ್ಯ ಸಚಿವಾಲಯ ಹೊರಡಿಸಿದ ಮಾರ್ಗಸೂಚಿಗಳ ಪ್ರಕಾರ, ಈ ವಯಸ್ಸಿನ ಮಕ್ಕಳಿಗೆ ಕೋವ್ಯಾಕ್ಸಿನ್ (COVAXIN) ಲಸಿಕೆ ಮಾತ್ರ ಲಭ್ಯವಿರುತ್ತದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News