Booster Dose: ಏ.10 ರಿಂದ 18 ವರ್ಷ ಮೇಲ್ಪಟ್ಟವರಿಗೆ ಬೂಸ್ಟರ್‌ ಡೋಸ್‌ ನೀಡಲು ಕೇಂದ್ರ ನಿರ್ಧಾರ

ಬೂಸ್ಟರ್‌ ಡೋಸ್‌ ಎಲ್ಲಾ ಖಾಸಗಿ ಲಸಿಕೆ ಕೇಂದ್ರಗಳಲ್ಲಿ ಲಭ್ಯವಿರುತ್ತದೆ. ಆರೋಗ್ಯ ಕಾರ್ಯಕರ್ತರು, ಮುಂಚೂಣಿ ಕೆಲಸಗಾರರು ಮತ್ತು 60 ವರ್ಷಕ್ಕಿಂತ ಮೇಲ್ಪಟ್ಟವರಿಗೆ 2.4 ಕೋಟಿಗೂ ಹೆಚ್ಚು ಬೂಸ್ಟರ್‌ ಡೋಸ್‌ಗಳನ್ನು ನೀಡಲಾಗಿದ್ದು, 12-14 ವರ್ಷ ವಯಸ್ಸಿನವರಲ್ಲಿ ಶೇಕಡಾ 45 ರಷ್ಟು ಜನರು ಮೊದಲ ಲಸಿಕೆಯನ್ನು ಸ್ವೀಕರಿಸಿದ್ದಾರೆ ಎಂದು ಸಚಿವಾಲಯ ತಿಳಿಸಿದೆ

Written by - Zee Kannada News Desk | Last Updated : Apr 9, 2022, 04:49 PM IST
  • 18 ವರ್ಷ ಮೇಲ್ಪಟ್ಟವರಿಗೆ ಬೂಸ್ಟರ್‌ ಡೋಸ್‌ ನೀಡಲು ಕೇಂದ್ರ ನಿರ್ಧಾರ
  • ಏ.10 ರಿಂದ ಎಲ್ಲಾ ವಯಸ್ಕರಿಗೆ ಬೂಸ್ಟರ್‌ ಡೋಸ್‌ ಲಭ್ಯ
  • ಕೇಂದ್ರ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ
Booster Dose: ಏ.10 ರಿಂದ 18 ವರ್ಷ ಮೇಲ್ಪಟ್ಟವರಿಗೆ ಬೂಸ್ಟರ್‌ ಡೋಸ್‌ ನೀಡಲು ಕೇಂದ್ರ ನಿರ್ಧಾರ title=
booster dose

ನವದೆಹಲಿ: ಏಪ್ರಿಲ್‌ 10 ರಿಂದ ಎಲ್ಲಾ ವಯಸ್ಕರಿಗೆ ಕೋವಿಡ್‌-19 ಲಸಿಕೆಗಳ ಬೂಸ್ಟರ್‌ ಡೋಸ್‌ನ್ನು ನೀಡಲು ಕೇಂದ್ರ ಆರೋಗ್ಯ ಸಚಿವಾಲಯ ನಿರ್ಧರಿಸಿದೆ. 18 ವರ್ಷಕ್ಕಿಂತ ಮೇಲ್ಪಟ್ಟವರು ಎರಡೂ ಡೋಸ್‌ಗಳನ್ನು ಪಡೆದು 9 ತಿಂಗಳು ಕಳೆದಿದ್ದರೆ ಬೂಸ್ಟರ್‌ ಲಸಿಕೆ ಪಡೆಯಬಹುದು ಎಂದು  ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.

 ಇದನ್ನು ಓದಿ: ಲೇಟ್ ನೈಟ್ ಪಾರ್ಟಿ ಮಾಡುತ್ತಿದ್ದ 84 ಜನಕ್ಕೆ ಬಿಗ್ ಶಾಕ್ ನೀಡಿದ ಸಿಸಿಬಿ ಪೊಲೀಸರು

ಬೂಸ್ಟರ್‌ ಡೋಸ್‌ ಎಲ್ಲಾ ಖಾಸಗಿ ಲಸಿಕೆ ಕೇಂದ್ರಗಳಲ್ಲಿ ಲಭ್ಯವಿರುತ್ತದೆ. ಆರೋಗ್ಯ ಕಾರ್ಯಕರ್ತರು, ಮುಂಚೂಣಿ ಕೆಲಸಗಾರರು ಮತ್ತು 60 ವರ್ಷಕ್ಕಿಂತ ಮೇಲ್ಪಟ್ಟವರಿಗೆ 2.4 ಕೋಟಿಗೂ ಹೆಚ್ಚು ಬೂಸ್ಟರ್‌ ಡೋಸ್‌ಗಳನ್ನು ನೀಡಲಾಗಿದ್ದು, 12-14 ವರ್ಷ ವಯಸ್ಸಿನವರಲ್ಲಿ ಶೇಕಡಾ 45 ರಷ್ಟು ಜನರು ಮೊದಲ ಲಸಿಕೆಯನ್ನು ಸ್ವೀಕರಿಸಿದ್ದಾರೆ ಎಂದು ಸಚಿವಾಲಯ ತಿಳಿಸಿದೆ. 

ಬೂಸ್ಟರ್‌ ಡೋಸ್‌ ಯಾರು ಪಡೆಯಬಹುದು: 18 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನವರಾಗಿದ್ದರೆ, ಅವರು ಕೋವಿಡ್-19 ವಿರುದ್ಧ  ಲಸಿಕೆಯನ್ನು ತೆಗೆದುಕೊಳ್ಳಲು ಅರ್ಹರಾಗಿರುತ್ತಾರೆ.

ಯಾವಾಗ ತೆಗೆದುಕೊಳ್ಳಬೇಕು? ಎರಡನೇ ಡೋಸ್ ಪಡೆದು 9 ತಿಂಗಳು ಪೂರ್ಣಗೊಂಡ ನಂತರ ಖಾಸಗಿ ಲಸಿಕೆ ಕೇಂದ್ರಗಳಲ್ಲಿ  ಬೂಸ್ಟರ್‌ ಡೋಸ್‌ಗಳನ್ನು ಪಡೆದುಕೊಳ್ಳಬಹುದು.  ಎಲ್ಲಾ ಫಲಾನುಭವಿಗಳು ಈಗಾಗಲೇ CoWIN ನಲ್ಲಿ ನೋಂದಾಯಿಸಲ್ಪಟ್ಟಿರುವುದರಿಂದ ಬೂಸ್ಟರ್‌ ಡೋಸ್‌ಗಾಗಿ ಮತ್ತೆ ನೋಂದಾಯಿಸಿಕೊಳ್ಳುವ ಅಗತ್ಯವಿಲ್ಲ ಎಂದು ಸರ್ಕಾರ ಶನಿವಾರ ತಿಳಿಸಿದೆ.

ಇದನ್ನು ಓದಿ: Watch Video: ಹಿಸ್..ಹಿಸ್ ಎನ್ನುತ್ತಿದ್ದ ನಾಗರಾಜನಿಗೆ ಕಿಸ್ ಕೊಟ್ಟ ಯುವತಿ, ಮುಂದೇನಾಯ್ತು?

ಬೂಸ್ಟರ್ ಡೋಸ್‌ನ ಬೆಲೆ ಎಷ್ಟು?
ಸರ್ಕಾರದ ಹೇಳಿಕೆಯ ಪ್ರಕಾರ, ಬೂಸ್ಟರ್ ಡೋಸ್‌ಗಳಿಗೆ ಪಾವತಿಸಬೇಕಾಗುತ್ತದೆ. ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ (ಎಸ್‌ಐಐ) ಸಿಇಒ ಆದರ್ ಪೂನವಾಲಾ ಅವರು ಕೋವಿಶೀಲ್ಡ್ ಲಸಿಕೆಯ ಬೂಸ್ಟರ್‌ ಡೋಸ್‌ನ ಪ್ರತಿ ಶಾಟ್‌ಗೆ ರೂ 600 ಮತ್ತು ತೆರಿಗೆಗಳನ್ನು ನಿಗದಿಪಡಿಸಲಾಗಿದೆ ಎಂದು ತಿಳಿಸಿದರು. ಲ ಆವಿಷ್ಕಾರ ಕೇಂದ್ರ. ಜೊತೆಗೆ ವೈಮಾನಿಕ ಅಭಿವೃದ್ಧಿಗೆಂದೇ ಮೀಸಲಾದ ಮೊದಲ ಜೆಐಸಿ. ಪ್ರಸಕ್ತ ವರ್ಷ ಕಾರ್ಯಾರಂಭ ಮಾಡುವ ನಿರೀಕ್ಷೆಯಿದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News