Coronavirus Effect: ದುಬಾರಿಯಾದ ಪ್ಲಾಟ್ಫಾರ್ಮ್ ಟಿಕೆಟ್

Coronavirus ಹರಡುವಿಕೆಯನ್ನು ಗಂಭೀರವಾಗಿ ಪರಿಗಣಿಸಿರುವ ವೆಸ್ಟರ್ನ್ ರೈಲ್ವೆ ಪ್ಲಾಟ್ಫಾರ್ಮ್ ನಂಬರ್ ಗಳನ್ನು ಕೂಡ ಜಾರಿಗೊಳಿಸಿದೆ. ಅಷ್ಟೇ ಅಲ್ಲ ಇದರ ಅಡಿ ರೇಲ್ವೆ ಅಧಿಕಾರಿಗಳು ಹಾಗೂ ರೇಲ್ವೆ ಆಸ್ಪತ್ರೆಗಳ ನಂಬರ್ ಗಳನ್ನು ಕೂಡ ಬಿಡುಗಡೆ ಮಾಡಲಾಗಿದೆ.

Last Updated : Mar 17, 2020, 08:24 PM IST
Coronavirus Effect: ದುಬಾರಿಯಾದ ಪ್ಲಾಟ್ಫಾರ್ಮ್ ಟಿಕೆಟ್ title=

ಸದ್ಯ ಎಲ್ಲೆಡೆ ಕೊರೊನಾವೈರಸ್ ನ ಪ್ರಭಾವ ಕಂಡುಬರಲಾರಂಭಿಸಿದೆ. ಕೊರೊನಾ ವೈರಸ್ ಹಿನ್ನೆಲೆ ಕೆಲ ಕಡೆ ಆರ್ಥಿಕ ಹಿನ್ನಡೆ ಕಂಡುಬರುತ್ತಿದ್ದರೆ, ಹಲವೆಡೆ ಹಣದುಬ್ಬರ ಕಂಡು ಬರುತ್ತಿದೆ. ಸದ್ಯ ದೇಶ ಸೇರಿದಂತೆ ವಿಶ್ವಾದ್ಯಂತ ಅರ್ಥವ್ಯವಸ್ಥೆ ಆರ್ಥಿಕ ಹಿನ್ನಡೆಯನ್ನು ಅನುಭವಿಸುತ್ತಿದ್ದು, ಹಲವೆಡೆ ಕೆಲ ವಸ್ತುಗಳು ದುಬಾರಿಯಾಗುತ್ತಿವೆ. ರೈಲು ನಿಲ್ದಾಣಗಳಲ್ಲಿಯೂ ಕೂಡ ಜನ ಸಂದಣಿಯನ್ನು ಕಮ್ಮಿ ಮಾಡಲು ವೆಸ್ಟರ್ನ್ ರೇಲ್ವೆ ಪ್ಲಾಟ್ಫಾರಂ ಟಿಕೆಟ್ ಗಳ ಬೆಲೆಯನ್ನು 5 ಪಟ್ಟು ಹೆಚ್ಚಿಸಿದೆ.

ಮೂಲಗಳು ನೀಡಿರುವ ಮಾಹಿತಿ ಪ್ರಕಾರ, ವೆಸ್ಟರ್ನ್ ರೇಲ್ವೆ ಪ್ಲಾಟ್ಫಾರಂ ಟಿಕೆಟ್ ದರ ಹೆಚ್ಚಳ ನಿರ್ಣಯವನ್ನು  ಕೇವಲ ಮುಂಬೈ ಪಟ್ಟಣಕ್ಕೆ ಮಾತ್ರ ಸೀಮಿತವಾಗಿರಿಸಿದೆ ಎನ್ನಲಾಗಿದೆ. ರೈಲು ನಿಲ್ದಾಣಗಳಲ್ಲಿನ ಜನಸಂದಣಿಯನ್ನು ಕಡಿಮೆ ಮಾಡುವ ಉದ್ದೇಶದಿಂದ ರೈಲು ಇಲಾಖೆ ಈ ನಿರ್ಣಯವನ್ನು ಕೈಗೊಂಡಿದೆ.

ಗುಜರಾತ್ ನಲ್ಲಿಯೂ ಕೂಡ ದರ ಹೆಚ್ಚಳ
ವೆಸ್ಟರ್ನ್ ರೈಲು ವಿಭಾಗ ಗುಜರಾತ್ ನಲ್ಲಿಯೂ ಕೂಡ ಪ್ಲಾಟ್ಫಾರಂ ಟಿಕೆಟ್ ಗಳ ಬೆಲೆಯನ್ನು ರೂ.10 ರಿಂದ ರೂ.50ಕ್ಕೆ ಏರಿಕೆ ಮಾಡಿದೆ. ಇವುಗಳಲ್ಲಿ ಅಹ್ಮದಾಬಾದ್, ಗಾಂಧಿಧಾಮ್, ಪಾಲನಪುರ, ಭುಜ್, ಪಾಟನ್, ಸಾಬರ್ಮತಿ, ಊಂಝಾ, ಸಿದ್ಧಪುರ್, ಸಮಖ್ಯಾಲಿ ರೈಲು ನಿಲ್ದಾಣಗಳು ಶಾಮೀಲಾಗಿವೆ.

ಒಟ್ಟು 135 ರೈಲು ನಿಲ್ದಾಣಗಳಲ್ಲಿ ಪ್ಲಾಟ್ಫಾರ್ಮ್ ಟಿಕೆಟ್ ಗಳು ದುಬಾರಿಯಾಗಿವೆ
ಭಾರತೀಯ ರೈಲು ದೇಶದ ಒಟ್ಟು 135 ರೈಲು ನಿಲ್ದಾಣಗಳ ಮೇಲೆ ಸಿಗುವ ಪ್ಲಾಟ್ಫಾರಂ ಟಿಕೆಟ್ ಗಳ ಬೆಲೆಯನ್ನು ರೂ.10 ರಿಂದ ರೂ.50ಕ್ಕೆ ಹೆಚ್ಚಿಸಿದೆ. ಮಧ್ಯಪ್ರದೇಶದ ರತ್ಲಾಂ ಸ್ಟೇಷನ್ ನಲ್ಲಿಯೂ ಕೂಡ ಟಿಕೆಟ್ ದರದಲ್ಲಿ ಹೆಚ್ಚಳ ಮಾಡಲಾಗಿದೆ.

ಸ್ವಚ್ಛತಾ ಅಭಿಯಾನ
ಕೊರೊನಾ ವೈರಸ್ ಸೋಂಕು ಹರಡುವಿಕೆಯನ್ನು ತಡೆಗಟ್ಟುವ ಉದ್ದೇಶದಿಂದ ಇನ್ನೂ ಹಲವು ಕ್ರಮಗಳನ್ನು ಕೈಗೊಂಡಿದೆ. ಇವುಗಳಲ್ಲಿ ರೈಲು ವಿಭಾಗದ ಎಲ್ಲ ಮಂಡಳಿಗಳ ರೈಲುಗಳು ಹಾಗೂ ಸ್ಟೇಷನ್ ಗಳ ಸ್ವಚ್ಚತೆ ಹಾಗೂ ಜಾಗರೂಕತೆ ಅಭಿಯಾನಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ರೈಲುಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಸ್ವಚ್ಚತೆ ಹಾಗೂ ವೈರಸ್ ನಿಂದ ಬಚಾವಾಗಲು ಔಷಧಿ ಸಿಂಪಡನೆಯ ಕೆಲಸ ನಡೆಸಲಾಗುತ್ತಿದೆ.

ಹೆಲ್ಪ್ಲೈನ್ ನಂಬರ್
ಕೊರೊನಾ ವೈರಸ್ ಪ್ರಕೋಪದ ಹಿನ್ನೆಲೆ ವೆಸ್ತರ್ಣ ರೈಲು ವಿಭಾಗ ತುರ್ತು ಪರಿಸ್ಥಿತಿ ಉಂಟಾದ ಸಮಯದಲ್ಲಿ ಹೆಲ್ಪ್ಲೈನ್ ನಂಬರ್ ಗಳನ್ನು ಸಹ ಜಾರಿಗೊಳಿಸಿದೆ. ಇವುಗಳಲ್ಲಿ ರೈಲು ವಿಭಾಗದ ಅಧಿಕಾರಿಗಳು ಹಾಗೂ ರೇಲ್ವೆ ಆಸ್ಪತ್ರೆಗಳ ನಂಬರ್ ಗಳೂ ಕೂಡ ಶಾಮೀಲಾಗಿವೆ. ರೇಲ್ವೆ ನಿಲ್ದಾಣಗಳಲ್ಲಿ ಜನಸಂದಣಿಯನ್ನು ಗಮನದಲ್ಲಿಟ್ಟುಕೊಂಡು ಯಾತ್ರಿಗಳು ಹಾಗೂ ರೈಲು ಕಾರ್ಮಿಕರಿಗೆ ಈ ವೈರಸ್ ನಿಂದಾಗುವ ಅಪಾಯದ ಕುರಿತು ಜಾಗರೂಕತೆಯನ್ನು ಕೂಡ ಮೂಡಿಸಲಾಗುತ್ತಿದೆ.

ಹೊದಿಕೆ-ದಿಂಬು ಸಿಗುವುದಿಲ್ಲ
ಕೊರೊನಾ ವೈರಸ್ ನ ಹೆಚ್ಚಾಗುತ್ತಿರುವ ಪ್ರಭಾವವನ್ನು ಗಮನದಲ್ಲಿಟ್ಟುಕೊಂಡು ವೆಸ್ಟರ್ನ್ ರೇಲ್ವೆ ವಿಭಾಗ ತನ್ನ ರೈಲುಗಳಲ್ಲಿ ಹೊದಿಕೆ ಹಾಗೂ ದಿಂಬುಗಳನ್ನು ನೀಡದೆ ಇರಲು ನಿರ್ಧರಿಸಿದೆ. ಇವುಗಳಿಂದ ವೈರಸ್ ಸೋಂಕು ವ್ಯಾಪಕವಾಗಿ ಹರಡುವ ಸಾಧ್ಯತೆ ಹೆಚ್ಚಾಗಿರುವ ಕಾರಣ ರೈಲು ವಿಭಾಗ ಈ ನಿರ್ಣಯ ಕೈಗೊಂಡಿದೆ ಎನ್ನಲಾಗಿದೆ.

Trending News