IndiGo ಬಂಪರ್ ಆಫರ್; ಕೇವಲ 899 ರೂ.ಗೆ ಬುಕ್ ಮಾಡಿ ಫ್ಲೈಟ್ ಟಿಕೆಟ್!

ಈ ಕೊಡುಗೆಯಡಿ ಬುಕ್ ಮಾಡಿದ ಟಿಕೆಟ್ ಗಳ ಪ್ರಯಾಣ ಅವಧಿ ಫೆಬ್ರವರಿ 26 ರಿಂದ ಸೆಪ್ಟೆಂಬರ್ 29ರವರೆಗೆ ಮಾತ್ರ ಇದ್ದು, 29ರ ಬಳಿಕ ಬುಕ್ ಮಾಡುವ ಟಿಕೆಟ್ ಗಳಿಗೆ ಈ ಕೊಡುಗೆ ಅನ್ವಯವಾಗುವುದಿಲ್ಲ. 

Last Updated : Feb 11, 2019, 07:06 PM IST
IndiGo ಬಂಪರ್ ಆಫರ್; ಕೇವಲ 899 ರೂ.ಗೆ ಬುಕ್ ಮಾಡಿ ಫ್ಲೈಟ್ ಟಿಕೆಟ್! title=

ನವದೆಹಲಿ: ವಿಮಾನ ಪ್ರಯಾಣಿಕರಿಗೆ ಸಿಹಿ ಸುದ್ದಿ.  ಕೇವಲ 899 ರೂ.ಗಳಿಗೆ ವಿಮಾನ ಯಾನ ನಡೆಸುವ ಅವಕಾಶವನ್ನು ಇಂಡಿಗೋ ತನ್ನ ಪ್ರಯಾಣಿಕರಿಗೆ ಕಲ್ಪಿಸಿದೆ. ಈ ಕೊಡುಗೆ ಕೇವಲ ಮೂರೂ ದಿನಗಳಿಗೆ ಮಾತ್ರ ಲಭ್ಯವಿದೆ.

ಇಂಡಿಗೋ ತನ್ನ ದೇಶಿಯ ವಿಮಾನ ಸೇವಾ ಟಿಕೆಟ್ ದರವನ್ನು ರೂ.899 ಮತ್ತು ಅಂತಾರಾಷ್ಟ್ರೀಯ ವಿಮಾನ ಟಿಕೆಟ್ ದರವನ್ನು 3399 ರೂ.ಗಳಿಗೆ ನಿಗದಿಪಡಿಸಿದೆ. ಅಷ್ಟೇ ಅಲ್ಲದೆ, RBL,DBS ಮತ್ತು American Express ಕಾರ್ಡ್ ಮೂಲಕ ಟಿಕೆಟ್ ಬುಕ್ ಮಾಡುವವರಿಗೆ ಶೇ.20ರಷ್ಟು ರಿಯಾಯಿತಿ ಘೋಷಿಸಿದೆ. ಈ ಕೊಡುಗೆಯಡಿ ಫೆಬ್ರವರಿ 26 ರಿಂದ ಸೆಪ್ಟೆಂಬರ್ 29ರವರೆಗೆ ಪ್ರಯಾಣಿಸಬಹುದಾಗಿದ್ದು, ಇಂದಿನಿಂದ ಫೆಬ್ರವರಿ 13ರವರೆಗೆ ಟಿಕೆಟ್ ಬುಕಿಂಗ್ ಮಾಡಬಹುದು. 

ಗಮನಿಸಬೇಕಾದ ಅಂಶಗಳು
* ಇಂಡಿಗೋ ಘೋಷಿಸಿರುವ ಈ ಕೊಡುಗೆಯಡಿ ಫೆಬ್ರವರಿ 11 ರಿಂದ ಫೆಬ್ರವರಿ 13ರ ರಾತ್ರಿ 11.59 ಗಂಟೆ ವರೆಗೆ ಟಿಕೆಟ್ ಬುಕ್ ಮಾಡಬಹುದು.
* ಈ ಕೊಡುಗೆಯಡಿ ಬುಕ್ ಮಾಡಿದ ಟಿಕೆಟ್ ಗಳ ಪ್ರಯಾಣ ಅವಧಿ ಫೆಬ್ರವರಿ 26 ರಿಂದ ಸೆಪ್ಟೆಂಬರ್ 29ರವರೆಗೆ ಮಾತ್ರ ಇದ್ದು, 29ರ ಬಳಿಕ ಬುಕ್ ಮಾಡುವ ಟಿಕೆಟ್ ಗಳಿಗೆ ಈ ಕೊಡುಗೆ ಅನ್ವಯವಾಗುವುದಿಲ್ಲ. 
* ದೇಶೀಯ ವಿಮಾನ ಟಿಕೆಟ್ ದರ 899 ರೂ. ಮತ್ತು ಅಂತಾರಾಷ್ಟ್ರೀಯ ವಿಮಾನಯಾನಕ್ಕೆ 3399 ರೂ.ನಿಂದ ಆರಂಭವಾಗಲಿದೆ.
* ನಿಗದಿತ ಸೀಟುಗಳಿಗೆ ಮಾತ್ರ ಕೊಡುಗೆ ಅನ್ವಯವಾಗಿದೆ.
* ಈ ಕೊಡುಗೆಯಡಿ ಏರ್ಪೋರ್ಟ್ ಮತ್ತು ಸರ್ಕಾರಿ ಸೇವಾ ಶುಲ್ಕಗಳಿಂದ ವಿನಾಯಿತಿ ಇರುವುದಿಲ್ಲ.
* ಇತರ ಯಾವುದೇ ಕೊಡುಗೆಗಳೊಂದಿಗೆ ಈ ಆಫರ್ ಅನ್ವಯವಾಗುವುದಿಲ್ಲ.
* ಈ ಕೊಡುಗೆಯಡಿ ಖರೀದಿಸಿದ ಟಿಕೆಟ್ ಗಳಲ್ಲಿ ಯಾವುದೇ ಬದಲಾವಣೆಯಾಗಲೀ ಅಥ್ವಾ ಟಿಕೆಟ್ ವರ್ಗಾವಣೆಯಾಗಲೀ ಸಾಧ್ಯವಿಲ್ಲ.
* ಅಷ್ಟೇ ಅಲ್ಲದೆ, ಈ ಆಫರ್ ನಲ್ಲಿ ಗ್ರೂಪ್ ಬುಕ್ಕಿಂಗ್ ಮಾಡಲು ಸಾಧ್ಯವಿಲ್ಲ.

Trending News